Saturday, 10th May 2025

Milk stollen by constable: ರಾತ್ರಿ ಡ್ಯೂಟಿ ವೇಳೆ ಹಾಲು ಕದ್ದ ಪೊಲೀಸ್ ಪೇದೆ

ಕೊಪ್ಪಳ: ಕೊಪ್ಪಳ‌ ನಗರದಲ್ಲಿ ರಾತ್ರಿ ಡ್ಯೂಟಿ ವೇಳೆ ಪೊಲೀಸ್ ಪೇದೆ ಹಾಲು ಕದ್ದಿರುವ ಘಟನೆ ನಡೆದಿದೆ.

ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ ಹಾಲಿನ‌ ಡೈರಿ ಬಳಿ ಪೊಲೀಸ್ ಪೇದೆ ಶಿವಾನಂದ ಸಜ್ಜನ್ ನಿಂದ ಹಾಲು ಕಳ್ಳತನ ಮಾಡುತ್ತಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಶಿವಾನಂದ ಸಜ್ಜನ್ ಅವರು ಡಿವೈಎಸ್‌ಪಿ ಕಚೇರಿಯಲ್ಲಿ ಪೇದೆಯಾಗಿದ್ದಾರೆ. ಶಿವಾನಂದ‌ ಸಜ್ಜನ್‌ ಹಾಲು ಕದ್ದಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಅಗಸ್ಟ್ 29 ರಂದು ರಾತ್ರಿ ಕರ್ತವ್ಯದ ವೇಳೆ ಹಾಲು ಕದ್ದಿರುವ ಶಿವಾನಂದ ಸಜ್ಜನ್ ವಿಡಿಯೋ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಬೈಕ್ ನಲ್ಲಿ ಶಿವಾನಂದ ಸಜ್ಜನ್ ಅವರು ರಾತ್ರಿ ಹಾಲಿನ ಡೈರಿ ಮುಂದೆ‌ ಇಟ್ಟಿದ್ದ ಟ್ರೇನಿಂದ ಹಾಲು ಕಳ್ಳತನ ಮಾಡಿದ್ದಾರೆ. ಸಿಸಿ ಟಿವಿ ಇರುವುದನ್ನು ಗಮನಿಸಿಯೂ ಈ ಕಳ್ಳತನ ಮಾಡಿದ್ದಾರೆ.

ಈ ಘಟನೆಯನ್ನು ಸಾರ್ವಜನಿಕರು ಖಂಡಿಸಿದ್ದು, ಕಾಯುವವರೇ ಕಳ್ಳರಾದರೇ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಶಿವಾನಂದ ಸಜ್ಜನ್ ಹಾಲು ಕಳ್ಳತನಕ್ಕೆ ಸಾರ್ವಜನಿಕರ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಹಾಗೂ ಶಿವಾನಂದ ಸಜ್ಜನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *