ಚಿಕ್ಕಬಳ್ಳಾಪುರ : ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ನೌಕರರು ನಡುವೆ ಏರ್ಪಟ್ಟ ಪ್ರೀತಿ ೯ ದಿನಗಳ ಹಿಂದೆ ಮದುವೆಯಾಗಿದ್ದರೂ ಮದುವೆಯವರಿಗೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಗುರುವಾರ ರಕ್ಷಣೆ ಕೋರಿ ಎಸ್ಪಿ ಕಛೇರಿ ಮೊರೆ ಹೋಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಹೌದು ಚಿಕ್ಕಬಳ್ಳಾಪುರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ತಾಲೂಕಿನ ಬಂಡಮ್ಮನಹಳ್ಳಿ ನಿವಾಸಿ ಒಕ್ಕಲಿಗ ಸಮುದಾಯದ ೨೧ ವರ್ಷ ವಯಸ್ಸಿನ ಗಗನ,ಬಾಗೇಪಲ್ಲಿ ಪಟ್ಟಣದದ ನಿವಾಸಿ ಪ.ಜಾತಿಯ ೨೫ ವರ್ಷದ ಮನೋಹರ್ ನಡುವೆ ಪ್ರಮಾಂಕುರವಾಗಿದೆ.ಕದ್ದು ಮುಚ್ಚಿ ಸಾಗಿದ್ದ ಪ್ರೀತಿ ಪ್ರೇಮ ಮನೆಗಳಲ್ಲಿ ಗೊತ್ತಾಗುವ ಹಂತ ತಲುಪಿದಾಗ ಹುಡುಗಿ ಮನೆಯವರು ಮದುವೆಗೆ ಅಡ್ಡಿಯಾಗಿದ್ದಾರೆ ಎಂಬ ಮಾಹಿತಿಯಿದೆ.
ಹುಡುಗಿ ಮನೆಯಲ್ಲಿ ಅಂತರ್ಜಾತಿ ವಿವಾಹಕ್ಕೆ ತೀವ್ರ ವಿರೋಧ ವ್ಯಕ್ತವಾಗಿದರೂ ಕೇರ್ ಮಾಡದ ಪ್ರೇಮಿಗಳು ಮಾತ್ರ ಪ್ರೀತಿಯಿಂದ ಹಿಂದೆ ಸರಿಯದೆ ೯ ದಿನಗಳ ಹಿಂದೆ ಬಾಗೇಪಲ್ಲಿ ಆಂಜನೇಯ ದೇವಾಲಯದಲ್ಲಿ ಆಪ್ತಬಳಗದ ಸಮ್ಮುಖದಲ್ಲಿ ಮದುವೆ ಆಗಿದ್ದಾರೆ. ನಂತರ ಅಲ್ಲಿನ ಸಬ್ ರಿಜಿಸ್ಟಾçರ್ ಕಚೇರಿಗೆ ತೆರಳಿ ವಿವಾಹ ನೋಂದಣಿ ಕೂಡ ಮಾಡಿಸಿದ್ದಾರೆ. ಮುಂದುವರೆದು ರಕ್ಷಣೆ ಕೋರಿ ಬಾಗೇಪಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇಷ್ಟಾದರೂ ಭೀತಿ ಮಾತ್ರ ದೂರವಾಗಿಲ್ಲ,ಪರಿಣಾಮ ಗುರುವಾರ ಚಿಕ್ಕಬಳ್ಳಾಪುರ ನಗರದಲ್ಲಿ ಮಾಧ್ಯಮದ ಮೂಲಕ ಹಾಜರಾಗಿ ರುವ ಈ ಜೋಡಿ ತಮಗಿರುವ ಜೀವಬೆದರಿಕೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟು ನಂತರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಕಚೇರಿಗೆ ತೆರಳಿ ರಕ್ಷಣೆಗೆ ಮನವಿ ಮಾಡಿದ್ದಾರೆ.
ಇದಕ್ಕೂ ಮೊದಲು ಮಾಧ್ಯಮದೊಂದಿಗೆ ಮಾತನಾಡಿರುವ ಹುಡುಗಿ ಗಗನ ನಮ್ಮ ತಂದೆ ಶ್ರೀನಿವಾಸರೆಡ್ಡಿ,ತಾಯಿ ನಾಗವೇಣಿ ಅವರಿಂದ ನಮಗೆ ಜೀವಬೆದರಿಕೆಯಿದೆ.ನಾನು ಸ್ವಯಿಚ್ಚೆಯಿಂದಲೇ ಇಷ್ಟಪಟ್ಟು ಬಾಗೇಪಲ್ಲಿ ದೇವಾ ಲಯದಲ್ಲಿ ಮದುವೆ ಆಗಿದ್ದೇವೆ. ನಾವು ಬೇರೆ ಬೇರೆ ಜಾತಿ ಎಂಬುದೇ ನಮ್ಮ ಪೋಷಕರ ಅಸಹನೆಗೆ ಕಾರಣವಾಗಿದೆ. ಜಾತಿ ಬೇರೆ ಆಗಿರಬಹುದು ಆದರೆ ನಮ್ಮಿಬ್ಬರ ಬದುಕು ಚೆನ್ನಾಗಿರಲಿದೆ. ಇದನ್ನು ಅರ್ಥ ಮಾಡಿಕೊಳ್ಳದ ನಮ್ಮ ತಂದೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ತಂದೆ ತಾಯಿಯಿಂದ ನಮಗೆ ರಕ್ಷಣೆ ಬೇಕು ಎಂದು ಮನವಿ ಮಾಡಿತ್ತಾಳೆ.
ಇನ್ನು ಹುಡುಗ ಮನೋಹರ ಮಾತನಾಡಿ ನಮ್ಮ ಮನೆಯ ಬಳಿ ಯಾರು ಯಾರನ್ನೋ ಕಳಿಸಿ ನಿಮ್ಮ ಮಗನನ್ನು ಕೊಲೆ ಮಾಡುತ್ತೇವೆ.ಅವನು ಹೇಗೆ ನಮ್ಮ ಹುಡುಗಿಯ ಜತೆ ಜೀವನ ಮಾಡುತ್ತಾನೋ ನೋಡೋಣ ಎಂದೆಲ್ಲಾ ಧಮ್ಕಿ ಹಾಕುತ್ತಿರುವುದರಿಂದ ಎಸ್ಪಿ ಅವರ ಬಳಿ ರಕ್ಷಣೆ ಕೋರಿದ್ದೇವೆ ಎನ್ನುತ್ತಿದ್ದಾನೆ.
ಇನ್ನು ಎಸ್ಪಿ ಕಛೇರಿಯಲಿ ಹುಡುಗ ಹುಡುಗಿಯಿಂದ ಹೇಳಿಕೆ ಪಡೆದ ಪೊಲೀಸರು ನವದಂಪತಿಗೆ ರಕ್ಷಣೆ ನೀಡುವು ದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದ್ದು ಈ ಪ್ರಕರಣ ಮುಂದೆ ಯಾವ ತಿರುವು ಪಡೆಯುವುದೋ ಕಾಲವೇ ಉತ್ತರಿಸಬೇಕಿದೆ.