Sunday, 11th May 2025

“ಮರೆಯಲಾಗದ ನಿಡುಗಲ್ಲು ಸಂಶೋಧನಾ ಕೃತಿ ಲೋಕಾರ್ಪಣೆ”

ಪಾವಗಡ: ಶ್ರೀ ನಿಡುಗಲ್ ವೀರಭದ್ರಸ್ವಾಮಿ ಸೇವಾ ಸಮಿತಿ ಟ್ರಸ್ಟ್ ಮತ್ತು ಪಾವಗಡ ತಾಲ್ಲೂಕು ಕ.ಸಾ.ಪ. ವತಿಯಿಂದ ಸೆಪ್ಟಂಬರ್ ೨ರ ಸೋಮವಾರ ಬೆಳಿಗ್ಗೆ ೧೦.೩೦ಕ್ಕೆ  ತಾಲ್ಲೂಕಿನ ನಿಡುಗಲ್ಲಿನ ವೀರಭದ್ರಸ್ವಾಮಿ ದೇವಾಲಯದ ಆವರಣದಲ್ಲಿರುವ ಸಮುದಾಯಭವನದಲ್ಲಿ ಡಾ. ಡಿ.ಎನ್.ಯೋಗೀಶ್ವರಪ್ಪ ಮತ್ತು ಅನಿತ ಮಂಜುನಾಥ ರಚಿಸಿರುವ ಸಂಶೋಧನಾ ಕೃತಿ `ಮರೆಯಲಾಗದ ನಿಡುಗಲ್ಲು’ ಬಿಡುಗಡೆಯಾಗಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು   ಶಾಸಕ ವೆಂಕಟೇಶ್ ಮಾಡುವರು. ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಚಿತ್ತಯ್ಯ ಪೂಜಾರ್ ಕೃತಿ ಬಿಡುಗಡೆ ಮಾಡುವರು. ತುಮಕೂರು ವಿ.ವಿ.ಯ ಇತಿಹಾಸ ತಜ್ಞ ಡಾ. ಎಲ್.ಪಿ.ರಾಜು ಕೃತಿ ಕುರಿತು ಮಾತನಾಡುವರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ವಿ.ವಿ. ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಕರಿಯಣ್ಣ, ನಿವೃತ್ತ ಪ್ರಾಂಶುಪಾಲ ಪ್ರೊ. ಎಂ.ಬಿ.ಸದಾಶಿವಯ್ಯ ಭಾಗವಹಿಸುವರು. ನಿಡುಗಲ್ ವೀರಭದ್ರಸ್ವಾಮಿ ಸೇವಾ ಸಮಿತಿ ಟ್ರಸ್ಟ್ ಅಧ್ಯಕ್ಷ ಎಲ್.ವೀರಭದ್ರಯ್ಯ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ನ್ಯಾಯದಕುಂಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ  ಗಿರಿಜಮ್ಮ, ಉಪಾಧ್ಯಕ್ಷರಾದ ಪರಮೇಶ್ ವಿಶೇಷ ಆಹ್ವಾನಿತರಾಗಿರುವರು.
ಇದೇ ಸಂದರ್ಭದಲ್ಲಿ ಕೈಗಾರಿಕೋದ್ಯಮಿಗಳಾದ ಎನ್.ಜಿ.ರುದ್ರಪ್ರಕಾಶ್, ನಿಡುಗಲ್ ಬಗ್ಗೆ ಸಂಶೋಧನೆ ಮಾಡಿರುವ ಡಾ. ವಿ.ಚೆಲುವರಾಜ್, ಸಣ್ಣನಾಗಪ್ಪ, ಹೋ.ಮ.ನಾಗರಾಜು ಮತ್ತು ಮುದ್ರಕರಾದ ಸತೀಶ್ ಹೆಬ್ಬಾಕ ಇವರನ್ನು ಗೌರವಿಸಲಾಗುವುದು.
ಸಂಶೋಧಕರಾದ ಡಾ. ಡಿ.ಎನ್.ಯೋಗೀಶ್ವರಪ್ಪ ಲೇಖಕರ ನುಡಿಗಳನ್ನಾಡುವರು. ಡಾ. ಬಿ.ನಂಜುAಡಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡುವರು. ಗೌರವಪೂರ್ವಕವಾಗಿ ಕೃತಿಗಳನ್ನು ಚಿಕ್ಕಬೆಳ್ಳಾವಿ ಶಿವಕುಮಾರ್, ಜಿ.ಹೆಚ್.ಮಹದೇವಪ್ಪ, ಕೆ.ಎಸ್.ಉಮಾಮಹೇಶ್, ಡಾ. ಜಗದೀಶ್, ಮಂಜುನಾಥ್, ಅಂತರಗAಗೆ ಶಂಕರಪ್ಪ, ಡಿ.ವಿ.ನಾರಾಯಣಪ್ಪ, ಕೆ.ರಂಗಪ್ಪ, ಸಣ್ಣಹೊನ್ನಯ್ಯ ಕಂಟಲಗೆರೆ, ಬ್ಯಾಡನೂರು ಚೆನ್ನಬಸವಣ್ಣ ಸ್ವೀಕರಿಸುವರು.

Leave a Reply

Your email address will not be published. Required fields are marked *