
ಅವರು ಸಿದ್ಧಗಂಗಾ ಆಸ್ಪತ್ರೆಯಲ್ಲಿ ಮ್ಯಾರಥಾನ್ ನೊಂದಣಿಗೆ ಚಾಲನೆ ನೀಡಿ ಮಾತನಾಡಿ ಈಗಾಗಲೇ ನೂರಾರು ಜನರು ಅಸ್ಪತ್ರೆಗೆ ಕರೆಮಾಡಿ ನೊಂದಣಿ ಮಾಡಿದ್ದು , ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮ್ಯಾರಥಾನ್ ನಲ್ಲಿ ಭಾಗವಹಿಸಿ ಕಾರ್ಯ ಕ್ರಮ ಯಶಸ್ಸಿನಲ್ಲಿ ಪಾಲುದಾರರಾಗಬೇಕು ಎಂದರು.
ಹೃದ್ರೋಗ ತಜ್ಞ ಡಾ.ಭಾನುಪ್ರಕಾಶ್ ಮಾತನಾಡಿ ಹೃದಯದ ಜಾಗೃತಿಯ ಜೊತೆಗೆ ಸಾರ್ವಜನಿ ಕರಲ್ಲಿ ಹೃದ್ರೋಗದ ಬಗ್ಗೆ ಇರುವ ಆತಂಕ ಹಾಗೂ ತಪ್ಪು ನಂಬಿಕೆಗಳನ್ನು ಕೂಡ ತೊಡೆದುಹಾಕಬೇಕುವುದು ಈ ಮ್ಯಾರಥಾನ್ ಉದ್ದೇಶ. ನಮ್ಮ ಈ ಹೆಲ್ತ್ ರನ್ ಗೆ ಚಿತ್ರನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟು ಪ್ರಿಯಾಮೋಹನ್ ಅ.1 ರ ಬೆಳಗ್ಗೆ 6 ಗಂಟೆಗೆ ಆಸ್ಪತ್ರೆ ಆವರಣದಲ್ಲಿ ಚಾಲನೆ ನೀಡಲಿದ್ದಾರೆ ಎಂದರು.
ಹೃದ್ರೋಗ ತಜ್ಞ ಡಾ.ಶರತ್ ಕುಮಾರ್ ಜೆ.ವಿ. ಎಸ್ ಐಟಿ ದೈಹಿಕ ಶಿಕ್ಷಕ ಯೋಗೀಶ್,ಪಿಆರ್ ಓ ಕಾಂತರಾಜು ಇದ್ದರು.