ಬೆಂಗಳೂರು: ವೈಟ್ಫೀಲ್ಡ್ನ ಮಣಿಪಾಲ್ ಆಸ್ಪತ್ರೆ ತನ್ನ ತರ‍್ತು ವಿಭಾಗದಲ್ಲಿ ಮಕ್ಕಳ ಸ್ನೇಹಿ ಮತ್ತು ಆರಾಮದಾಯಕ ವಾತಾವರಣದಲ್ಲಿ ಚಿಕ್ಕ ವಯಸ್ಸಿನ ರೋಗಿಗಳಿಗೆ ಉತ್ತಮ ಆರೈಕೆಯನ್ನು ಒದಗಿಸಲು ವಿಶೇಷ ಪೀಡಿಯಾಟ್ರಿಕ್ ಎರ‍್ಜೆನ್ಸಿ ಬೇ ಅನ್ನು ತೆರೆದಿದೆ. ಮಕ್ಕಳ ಆರೈಕೆಯನ್ನು ಸುಧಾರಿಸುವಲ್ಲಿ ಈ ಹೊಸ ಸೌಲಭ್ಯವು ಒಂದು ದೊಡ್ಡ ಹೆಜ್ಜೆಯಾಗಿದೆ. ಇದು ತ್ವರಿತ ಮತ್ತು ಸಂಪರ‍್ಣ ವೈದ್ಯಕೀಯ ಆರೈಕೆಯನ್ನು ಒದಗಿಸುವುದರ ಜೊತೆಗೆ ಸಣ್ಣ ವಯಸ್ಸಿನ ರೋಗಿಗಳ ವಿಶೇಷ ಅಗತ್ಯಗಳನ್ನು ಪೂರೈಸುತ್ತದೆ.
ನನ್ನಮ್ಮ ಸೂರ‍್ಸ್ಟಾರ್ ರಿಯಾಲಿಟಿ ಶೋ ವಿಜೇತೆ ಬಾಲ ಕಲಾವಿದೆ ವಂಶಿಕಾ ಅಂಜನಿ ಕಶ್ಯಪ್, ಡಾ. ರವಿಶಂಕರ್ ಸ್ವಾಮಿ, ಕನ್ಸಲ್ಟೆಂಟ್ – ನಿಯೋನಾಟೊಲೊಜಿ ಮತ್ತು ಪಿಡಿಯಾಟ್ರಿಕ್ಸ್, ಇವರ ನೇತೃತ್ವದಲ್ಲಿ ಆಸ್ಪತ್ರೆಯ ವೈದ್ಯ ರೊಂದಿಗೆ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟನಾ ಸಮಾರಂಭವನ್ನು ಆಚರಿಸಲಾಯಿತು. ಸಮಾರಂಭದ ನಂತರ, ಡಾ. ಸ್ವಾಮಿ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಮಕ್ಕಳ ತರ‍್ತು ಸೇವೆಗಳ ವೈಶಿಷ್ಟ್ಯಗಳನ್ನು ಮತ್ತು ಮಕ್ಕಳಿಗೆ ಆರೋಗ್ಯ ಸೇವೆಯನ್ನು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡುವ ಆಸ್ಪತ್ರೆಯ ಸರ‍್ಪಣೆಯನ್ನು ವಿವರಿಸಿದರು.

ಈ ಮಕ್ಕಳ ಸ್ನೇಹಿ ತರ‍್ತು ಸೌಲಭ್ಯವು ರ‍್ಣರಂಜಿತ, ಕರ‍್ಟೂನ್ ಬರೆದಿರುವ ಗೋಡೆಗಳನ್ನು ಹೊಂದಿದ್ದು, ಇದು ಮಕ್ಕಳಿಗೆ ಭಯ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುವ ಮೋಜಿನ ಸ್ಥಳವಾಗಿದೆ. ಮಕ್ಕಳಿಗೆ ಚಿಕಿತ್ಸೆ ನೀಡಲು ದರ‍್ಘ ಸಮಯದವರೆಗೆ ಕಾಯುವ ಅಗತ್ಯವಿಲ್ಲದೆ ತ್ವರಿತ ವೈದ್ಯಕೀಯ ಆರೈಕೆ ದೊರೆಯುವಂತೆ ನೋಡಿ ಕೊಳ್ಳಲು ಮಕ್ಕಳ ತಜ್ಞರು ೨೪/೭ ಲಭ್ಯವಿರುತ್ತಾರೆ. ಮಕ್ಕಳಿಗೆ ಪ್ರತ್ಯೇಕ ತರ‍್ತು ಸೇವೆಯ ಕೊರತೆಯ ಬಗ್ಗೆ ಪೋಷಕರಿಗೆ ಇರುವ ಚಿಂತೆಗಳಿಗೆ ಈ ಉಪಕ್ರಮವು ಸ್ಪಂದಿಸುತ್ತದೆ. ಹೊಸ ಸ್ಥಳವನ್ನು ಮಕ್ಕಳು ಮತ್ತು ಅವರ ಕುಟುಂಬಗಳಿಗೆ ಆರಾಮದಾಯಕ ಮತ್ತು ಪರಿಣಾಮಕಾರಿ ಅನುಭವವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ.
ಡಾ. ರವಿಶಂಕರ್ ಸ್ವಾಮಿ ಮಾತನಾಡಿ, “ಪ್ರತಿ ರ‍್ಷ, ನಾವು ಸಾವಿರಾರು ಮಕ್ಕಳ ಮತ್ತು ವಯಸ್ಕರ ತರ‍್ತು ಪರಿಸ್ಥಿತಿ ಗಳನ್ನು ನರ‍್ವಹಿಸುತ್ತೇವೆ ಮತ್ತು ತರ‍್ತು ಸಂರ‍್ಭಗಳಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಲು ವಿಶೇಷ ವಿಧಾನದ ಅಗತ್ಯವಿದೆ. ಮಗುವನ್ನು ತರ‍್ತು ಕೋಣೆಗೆ ಕರೆದೊಯ್ಯುವುದು ಒತ್ತಡದಾಯಕವಾಗಿರುತ್ತದೆ ಎಂದು ನಮಗೆ ತಿಳಿದಿದೆ, ವಿಶೇಷವಾಗಿ ಕಾಯುವ ಸಮಯ ದರ‍್ಘವಾಗಿದ್ದು ಮತ್ತು ಅನಿಶ್ಚಿತತೆಗಳಿದ್ದರೆ ಈ ಒತ್ತಡವೂ ಇನ್ನೂ ಹೆಚ್ಚಾಗುತ್ತದೆ. ನಮ್ಮ ಹೊಸ ಪೀಡಿಯಾಟ್ರಿಕ್ ಎರ‍್ಜೆನ್ಸಿ ಬೇ ಯೊಂದಿಗೆ, ತರ‍್ತು ಸಂರ‍್ಭಗಳಲ್ಲಿ ಮಕ್ಕಳು ನಿರಾಳವಾಗಿರುತ್ತಾರೆ ಮತ್ತು ಬೇಕಾಗುವ ಎಲ್ಲಾ ಬೆಂಬಲವನ್ನು ಪಡೆಯುತ್ತಾರೆ ಎಂದು ನಾವು ಭಾವಿಸುತ್ತೇವೆ, ಮತ್ತು ಇನ್ನೊಂದೆಡೆ ಇದು ಪೋಷಕರಿಗೆ ತ್ವರಿತ ಮತ್ತು ಪರಿಣಿತ ವೈದ್ಯಕೀಯ ಆರೈಕೆಯ ಬಗ್ಗೆ ಭರವಸೆ ನೀಡಬಹುದು.”
ಈ ಸೌಲಭ್ಯದ ಪ್ರಮುಖ ವೈಶಿಷ್ಟ್ಯವೆಂದರೆ “ಬಾಕ್ಸ್-ಇನ್-ಬಾಕ್ಸ್” ಮಾದರಿ. ಈ ಸೆಟಪ್ ಮಕ್ಕಳ ತರ‍್ತು ಸೇವೆಗಳನ್ನು ಆಸ್ಪತ್ರೆಯ ಇತರ ವಿಶೇಷತೆಗಳೊಂದಿಗೆ ಸಂಯೋಜಿಸುತ್ತದೆ, ಇದು ಅಖಿ ಮತ್ತು ಒಖI ನಂತಹ ಸುಧಾರಿತ ಇಮೇಜಿಂಗ್ ಅನ್ನು ಹಾಗೂ ಹೃದ್ರೋಗ ಮತ್ತು ಮೂಳೆಚಿಕಿತ್ಸೆ ಮುಂತಾದ ಕ್ಷೇತ್ರಗಳಲ್ಲಿನ ಅನುಭವಿ ತಜ್ಞರಿಗೆ ಸುಲಭವಾಗಿ ಮಾಹಿತಿ ಪಡೆಯಲು ಅನುವು ಮಾಡಿಕೊಡುತ್ತದೆ. ಈ ವಿಧಾನವು ಹೊರಗಿನಿಂದ ಚಿಕಿತ್ಸೆ ಪಡೆಯುವ ಅಥವಾ ರ‍್ಗಾವಣೆ ಮಾಡುವ ಅಗತ್ಯವನ್ನು ತೆಗೆದುಹಾಕುತ್ತದೆ, ಇದರಿಂದಾಗಿ ವೈಟ್ಫೀಲ್ಡ್ನ ಮಣಿಪಾಲ್ ಆಸ್ಪತ್ರೆಯು ಅತ್ಯಂತ ಸಂಕರ‍್ಣವಾದ ಮಕ್ಕಳ ತರ‍್ತು ಪರಿಸ್ಥಿತಿಗಳಿ ಒನ್ ಸ್ಟಾಪ್ ಪರಿಹಾರವಾಗಿದೆ.
ಲಿಟಲ್ ಪಟಾಕಿ ಎಂದೇ ಹೆಸರುವಾಸಿಯಾಗಿರುವ ವಂಶಿಕಾ ಅಂಜನಿ ಕಶ್ಯಪ್ ಮಾತನಾಡಿ, “ಆಸ್ಪತ್ರೆಗೆ ಬರುವ ಮೊದಲು ನನಗೆ ಸ್ವಲ್ಪ ಭಯವಾಗಿತ್ತು, ಆದರೆ ಇಲ್ಲಿ ಎಲ್ಲವೂ ತುಂಬಾ ಬೇರೆಯಿದೆ. ನಾನು ಹೊಸ ಮಕ್ಕಳ ತರ‍್ತು ಚಿಕಿತ್ಸಾ ಕೋಣೆಯಲ್ಲಿ ಸುತ್ತಾಡಿದೆ ಮತ್ತು ಅದು ಆಸ್ಪತ್ರೆಯಂತೆ ಅನಿಸದ ಕಾರಣ ತುಂಬಾ ಆರಾಮದಾಯಕ ವೆನಿಸಿತು.
ವೈದ್ಯರು, ದಾದಿಯರು ಮತ್ತು ಎಲ್ಲರೂ ತುಂಬಾ ಒಳ್ಳೆಯವರು ಮತ್ತು ಚೆನ್ನಾಗಿ ಮಾತನಾಡುತ್ತಾರೆ. ಅವರು ಗೋಡೆಗಳ ಮೇಲೆ ನನ್ನ ಇಷ್ಟದ ಕರ‍್ಟೂನ್ಗಳ ಚಿತ್ರಗಳನ್ನು ಕೂಡ ಬಿಡಿಸಿದ್ದಾರೆ.” ಈ ಹೊಸ ಸೇವೆಯೊಂದಿಗೆ, ವೈಟ್ಫೀಲ್ಡ್ನ ಮಣಿಪಾಲ್ ಆಸ್ಪತ್ರೆಯು ಆರೋಗ್ಯ ಸೇವೆಯಲ್ಲಿ ಹೊಸ ಮಾನದಂಡಗಳನ್ನು ಸ್ಥಾಪಿಸುವುದನ್ನು ಮುಂದುವರೆಸಿದೆ, ಹಾಗೆಯೆ ಉತ್ತಮ ಗುಣಮಟ್ಟದ, ರೋಗಿ-ಕೇಂದ್ರಿತ ಆರೈಕೆಯನ್ನು ಒದಗಿಸುತ್ತಿದೆ ಮತ್ತು ಸಮುದಾಯದ ಮಕ್ಕಳಿಗೆ ಆರೋಗ್ಯ ಸೇವೆಯ ಅನುಭವವನ್ನು ಸುಧಾರಿಸುತ್ತಿದೆ.