Saturday, 10th May 2025

Mangalore News: ಡಿ.7ರಂದು ವಿದ್ಯಾರ್ಥಿಗಳಲ್ಲಿ ಕೃಷಿ ಜಾಗೃತಿಗಾಗಿ ರ್ಯಾಲಿ

ಮಂಗಳೂರು: ವಿದ್ಯಾರ್ಥಿಗಳಲ್ಲಿ ಆಹಾರ ಬಳಕೆ ಮತ್ತು ಕೃಷಿಯನ್ನು ಉತ್ತೇಜಿಸಲು ಫುಡ್ ಚೈನ್ ಕ್ಯಾಂಪೇನ್ ವತಿಯಿಂದ ವಿದ್ಯಾರ್ಥಿ- ರೈತರಿಗಾಗಿ ನಗರದ ಕುದ್ಮಲ್ ರಂಗರಾವ್ ಟೌನ್ ಹಾಲ್ನಲ್ಲಿ ಡಿ.7ರಂದು ಜಾಗ್ರತಿ ರ್ಯಾಲಿಯನ್ನು ಏರ್ಪಡಿಸಲಾಗಿದೆ.

ಕಳೆದ ಒಂದು ದಶಕದಿಂದ ಆಹಾರ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಯತೀಶ್ ತುಕಾರಾಂ ಮತ್ತು ಡಾ. ಸೌರೀಶ್ ಹೆಗ್ಡೆ ಜತೆಗೂಡಿ ಒಂದೂವರೆ ವರ್ಷದಿಂದ ಫುಡ್ ಚೈನ್ ಕ್ಯಾಂಪೇನ್ ಮೂಲಕ ವಿದ್ಯಾರ್ಥಿ ಮತ್ತು ರೈತರ ನಡುವೆ ಬೆಳೆದಿರುವ ಅಂತರವನ್ನು ಹೋಗಲಾಡಿಸಲು ಪ್ರಯತ್ನಿಸುತ್ತಿದ್ದಾರೆ.

ಬೆಳೆಯುತ್ತಿರುವ ಸಮಸ್ಯೆ ಹಾಗು ಇಲ್ಲದ ಸಹಾಯದಿಂದ ಈಗಾಗಲೇ ರೈತರು ಕೃಷಿಯನ್ನು ಬಿಡುತ್ತಿದ್ದಾರೆ ಆದಕಾರಣ ಮುಂದಿನ ಪೀಳಿಗೆಯು ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಂಡು ಕೃಷಿಯನ್ನು ಉಳಿಸಬೇಕಾದ ಪರಿಸ್ಥಿತಿ ಇದೆ ಎಂದು ಯತೀಶ್ ಅವರು ಹೇಳಿದರು.

ಭತ್ತ ಬೆಳೆಯುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕೃಷಿಕರು ಇಂದು ಅಡಿಕೆ ಅಥವಾ ಬೇರೆಬೇರೆ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಉತ್ಸುಕರಾಗು ತ್ತಿದ್ದಾರೆ ಎಂದು ಹೇಳಿದ ಯತೀಶ್ ಈ ಕಾರ್ಯಕ್ರಮದ ಮೂಲಕ ಕೃಷಿಯಲ್ಲಿನ ತಂತ್ರಜ್ಞಾನವನ್ನು ಉಪಯೋಗಿಸುವ ಬಗ್ಗೆ ವಿದ್ಯಾರ್ಥಿಗಳಲ್ಲಿ ಹಲವಾರು ಪ್ರಗತಿಪರ ಕೃಷಿಕರು ಮಾರ್ಗದರ್ಶನ ಮಾಡುತ್ತಾರೆ. ಅದರ ಜೊತೆಗೆ ಈ ಕಾರ್ಯಕ್ರಮಕ್ಕೆ ಕೃಷಿ ವಿಜ್ಞಾನ ಕೇಂದ್ರ ಹಾಗು ಸಿಪಿಸಿಆರ್ ಐ ಸಹ ಸಹಯೋಗ ನೀಡಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: #MangaloreBreaking