
ಮಾಜಿ ಸಂಸದರಾದ ಬಿ.ವಿ.ನಾಯಕ ರವರು ಜಿಲ್ಲೆಯ ಪ.ಪಂಗಡ ಮೀಸಲು ವಿಧಾನಸಭಾ ಕ್ಷೇತ್ರಗಳಾದ ಮಾನ್ವಿ, ರಾಯಚೂರು ಗ್ರಾಮೀಣ, ದೇವದುರ್ಗ ಕ್ಷೇತ್ರಗಳಲ್ಲಿ ಕಾಂಗ್ರೇಸ್ ಪಕ್ಷದಿಂದ ಸ್ಪರ್ಧೆಗೆ ಅರ್ಜಿ ಸಲ್ಲಿಸಿದ್ದರು ಆದರೆ ಕಾಂಗ್ರೇಸ್ ಹೈಕಮಾಂಡ್ ಮೂರು ಕ್ಷೇತ್ರಗಳಿಂದಲು ಅವರಿಗೆ ಟಿಕೆಟ್ ನೀಡಲು ನಿರಾಕರಿಸಿದರಿಂದ ಈ ತೀರ್ಮಾನಕ್ಕೆ ಬಂದಿದ್ದಾರೆ ಎಂದು ತಿಳಿದುಬಂದಿದೆ.
ಇದುವರೆಗೂ ಬಿಜೆಪಿ ಪಕ್ಷ ಮಾನ್ವಿ ಕ್ಷೇತ್ರದ ಟಿಕೆಟ್ ಘೋಷಣೆ ಯಾಗದೆ ಇರುವುದರಿಂದ ಬಿ.ವಿ.ನಾಯಕ ಬಿಜೆಪಿ ಪಕ್ಷದ ಕಡೆ ಒಲವು ಹೊಂದಿದ್ದು ಬಿಜೆಪಿ ಪಕ್ಷದಿಂದ ಮಾನ್ವಿ ಟಿಕೆಟ್ ನೀಡುವ ಬರವಸೆಯನ್ನು ರಾಜ್ಯದ ಬಿಜೆಪಿ ಮುಖಂಡರು ತಿಳಿಸಿದ್ದಾರೆ, ಕೆಲವೇ ಗಂಟೆಗಳಲ್ಲಿ ಬಿ ಫಾರ್ಮ್ ಸಮೇತ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.