Sunday, 11th May 2025

M C Sudhakar: ಕೀರ್ತಿನಗರದಲ್ಲಿ ನಾಗ ಪ್ರತಿಷ್ಠಾಪನ ಕಾರ್ಯಕ್ರಮ: ಸಚಿವ ಡಾ.ಎಂ.ಸಿ.ಸುಧಾಕರ್ ಭಾಗಿ

ಚಿಂತಾಮಣಿ :ನಗರದ 18-19 ನೇ ವಾರ್ಡ್ ಬಂಬೂ ಬಜಾರ್, ಕೀರ್ತಿನಗರ, ಈರುಳ್ಳಿ ಬಜಾರ್, ಟಿಂಬರ್ ಷಾಪ್ ರೋಡ್ ನಾಗರಿಕರಿಗಾಗಿ ಅಶ್ವತ್ಥಕಟ್ಟೆಯಲ್ಲಿ ಶ್ರದ್ಧಾ ಭಕ್ತಿಯಿಂದ ನಾಗಪ್ರತಿಷ್ಟಾಪನೆ ನೆರವೇರಿತು.

ಭಕ್ತರ ಸಾಮೂಹಿಕ ಸಹಕಾರದಲ್ಲಿ ಗಣಪತಿ ಪೂಜೆ, ನಾಗಪ್ರತಿಷ್ಟಾಪನೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು.

ಕೀರ್ತಿನಗರ ಮತ್ತು ಬಂಬೂಬಜಾರ್ ಹಾಗೂ ಸುತ್ತಮುತ್ತಲ ಪ್ರದೇಶಗಳ ಜನರು ಪೂಜೆ, ಪುನಸ್ಕಾರ ಕಾರ್ಯಕ್ರಮ ಗಳಿಗೆ ಅನುಕೂಲವಾಗುತ್ತದೆ. ನಾಗ ಪ್ರತಿಷ್ಟಾಪನೆಗಾಗಿ ಬೆಳಿಗ್ಗೆಯಿಂದಲೇ ನೂರಾರು ಭಕ್ತರು ಭಾಗವಹಿಸಿದ್ದರು.

ಮುಖಂಡ ಪುಂಗನೂರು ನಾರಾಯಣಸ್ವಾಮಿ ಮಾತನಾಡಿ ಕೀರ್ತಿನಗರ ಮತ್ತು ಬಂಬೂ ಬಜಾರ್ ನ ಅಶ್ವತ್ಥಕಟ್ಟೆಗೆ ಅನೇಕ ದಶಕಗಳ ಇತಿಹಾಸವಿದೆ. ಇತ್ತೀಚೆಗೆ ಶಿಥಿಲಾವಸ್ಥೆಗೆ ತಲುಪಿತ್ತು.ಈ ಭಾಗದ ಜನಪ್ರತಿನಿಧಿಗಳು ಹಾಗೂ ಮುಖಂಡರ ಅಭಿಪ್ರಾಯದಂತೆ ಲೋಕಕಲ್ಯಾಣಾರ್ಥವಾಗಿ ನಾಗಪ್ರತಿಷ್ಠಾಪನೆಯನ್ನು ನೆರವೇರಿಸಲಾಗಿದೆ ಎಂದರು.

ಇನ್ನೂ ಈ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾಕ್ಟರ್ ಎಂ ಸಿ ಸುಧಾಕರ್ ಅವರು ಪ್ರತಿಷ್ಠಾಪನ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು.

ಈ ಸಂದರ್ಭದಲ್ಲಿ ಶ್ರೀನಿವಾಸ್ ರೆಡ್ಡಿ, ಎನ್ ವೇಣುಗೋಪಾಲ್,ಕರಿಯಪಲ್ಲಿ ಮಾಲಿಕ್ ಪಾಷಾ,ಚಲಪತಿ, ಮಂಜುನಾಥ್,ಜಿ ಟಿ ವೇಣುಗೋಪಾಲ್,ನಗರಸಭಾ ಸದಸ್ಯರಾದ ಮಂಜುಳಾ ಆಂಜನಪ್ಪ, ಶೋಭಾ ಶ್ರೀನಿವಾಸ್, ಪುಂಗನೂರು ನಾರಾಯಣಸ್ವಾಮಿ,ಮುಖಂಡರಾದ ಉಮೇಶ್,ಸೇರಿದಂತೆ ಮತ್ತಿತರರು ಇದ್ದರು.