Saturday, 10th May 2025

ಲೋಕಾಯುಕ್ತ ಬಲೆಗೆ ಬಿದ್ದ ಡಯಟ್ ಪ್ರಾಂಶುಪಾಲ

ತುಮಕೂರು/ಮಧುಗಿರಿ: ಲಂಚ ಪಡೆಯುವಾಗ ಡಯಟ್ ಪ್ರಾಂಶುಪಾಲ ಲೋಕಾಯುಕ್ತರ ಬಲೆಗೆ ಬಿದ್ದಿರುವ ಘಟನೆ ಮಂಗಳವಾರ ನಡೆದಿದೆ.
ಮಧುಗಿರಿ ಶೈಕ್ಷಣಿಕ ಜಿಲ್ಲೆ ಡಯಟ್  ಪ್ರಾಂಶುಪಾಲ  ರಾಮಕೃಷ್ಣಯ್ಯ,  ಹನುಮಂತರಾಜು ಎಂಬುವರ ಹೊಟೇಲ್  ಬಿಲ್ ಮಾಡಿಕೊಡುವ ವಿಚಾರದಲ್ಲಿ 17ಸಾವಿರ  ಲಂಚಕ್ಕೆ  ಬೇಡಿಕೆಯಿಟ್ಟು ಮಂಗಳವಾರ ಮುಂಗಡ ಲಂಚವನ್ನು ಸ್ವೀಕರಿಸುವಾಗ ಲೋಕಾಯುಕ್ತರಿಗೆ ಸಿಕ್ಕಿ ಬಿದ್ದಿದ್ದಾರೆ.
ಸಮಾಜ ತಿದ್ದಬೇಕಾದ ಪ್ರಾಂಶುಪಾಲ ಲಂಚಕ್ಕೆ ಕೈಯೊಡ್ಡಿ ಸಿಕ್ಕಿ ಬಿದ್ದಿರುವುದು ನಾಚಿಕೆಗೇಡಿನ ಸಂಗತಿ. ಸದರಿ ಕಾರ್ಯಾಚರಣೆಯಲ್ಲಿ  ಲೋಕಾಯುಕ್ತ
ಡಿವೈಎಸ್ಪಿ ರವೀಶ್ ಸಿ ಆರ್., ಪಿಐ ರಾಮರೆಡ್ಡಿ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.