Sunday, 11th May 2025

ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಲಕ್ಷ್ಮಣ ಸವದಿ ರಾಜೀನಾಮೆ

ಬೆಳಗಾವಿ: ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿದ್ದಾರೆ. ಇದೇ ವೇಳೆ ಅವರು ನನಗೆ ಅಥಣಿ ಕ್ಷೇತ್ರದಲ್ಲಿ ಟಿಕೆಟ್‌ ಸಿಗುವ ವಿಶ್ವಾಸವಿತ್ತು ಎಂದು ತಿಳಿಸಿದರು.

ನನ್ನ ಜತೆ ಹಲವು ಜನರು ಕೆಲಸ ಮಾಡುತ್ತಿದ್ದರು. ಅಥಣಿ ಕ್ಷೇತ್ರದಲ್ಲಿ ಜನರೇ ಹೈಕಾಮಾಂಡ್‌. 20 ವರ್ಷದಿಂದ ಬಿಜೆಪಿ ಪಕ್ಷಕ್ಕೆ ನನ್ನಿಂದ ಸಮಸ್ಯೆಯಾಗಿದ್ರೆ‌, ಕ್ಷಮಿಸಿ, ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾಳೆ ಕ್ಷೇತ್ರದ ಜನರ ಜೊತೆ ಚರ್ಚಿಸಿ ನಿರ್ಧಾರ ಮಾಡುತ್ತೇನೆ. ಟಿಕೆಟ್‌ಗಾಗಿ ನಾನು ಭಿಕ್ಷೆ ಬೇಡಬೇಕಾ? ನನಗೆ ಅಥಣಿ ಕ್ಷೇತ್ರದಲ್ಲಿ ಟಿಕೆಟ್‌ ತಪ್ಪಿದೆ. ಈ ನಿಟ್ಟಿನಲ್ಲಿ ಪಕ್ಷಕ್ಕೆ ರಾಜೀನಾಮೆ ಕೊಡಲು ನಿರ್ಧಾರ ಮಾಡಿದ್ದೇನೆ ಎಂದು ಸಿಎಂ ವಿರುದ್ಧ ಲಕ್ಷ್ಮಣ್‌ ಸವಧಿ ಬೇಸರ ವ್ಯಕ್ತಪಡಿಸಿದ್ದಾರೆ.