Saturday, 10th May 2025

ಡಾ.ಹೆಡ್ಗೆವಾರ್ ಕುರಿತು ಪಠ್ಯದಲ್ಲಿ ಅಳವಡಿಕೆಗೆ ಲಾತೂರಕರ್ ಸ್ವಾಗತ

ಕಲಬುರಗಿ: ದೇಶದ ರಕ್ಷಣೆಗಾಗಿ ಪಣ ತೊಟ್ಟು ರಾಷ್ಟ್ರೀಯ‌ ಸ್ವಯಂ‌ಸೇವಕ ಸಂಘವನ್ನು ರಚಿಸುವ ಮೂಲಕ ಹಿಂದೂತ್ವವನ್ನು ಉಳಿಸಲು ಶ್ರಮಿಸಿದ ಡಾ.ಕೇಶವ್ ಬಲಿರಾಮ್ ಹೆಡ್ಗೆವಾರ್ ಅವರ ಕುರಿತು ಪಠ್ಯ ಪುಸ್ತಕಗಳಲ್ಲಿ ಅಳವಡಿಸಿದ ಸರ್ಕಾರದ ಕ್ರಮವನ್ನು ಅಖಿಲ ಭಾರತೀಯ ಬ್ರಾಹ್ಮಣ ಮಹಾ ಸಂಘದ ಜಿಲ್ಲಾಧ್ಯಕ್ಷ ರವಿ ಲಾತೂ ರಕರ ಸ್ವಾಗತಿಸಿದ್ದಾರೆ.

ಸಂಘದ ಸಂಸ್ಥಾಪಕ ಹಾಗೂ ಮೊದಲನೇ ಸರಸಂಘಚಾಲಕರಾದ ಡಾ.ಹೆಡ್ಗೆವಾರ್ ಅವರು ಭಾರತೀಯ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸ್ಥಾಪಕ ಸರ ಸಂಘಚಾಲಕರಾಗಿದ್ದರು. ಹೆಡ್ಗೆವಾರ್ ಅವರು ಹಿಂದೂ ರಾಷ್ಟ್ರವನ್ನು ರಚಿಸುವ ಉದ್ದೇಶದಿಂದ ಹಿಂದುತ್ವದ ಸಿದ್ಧಾಂತದ ಆಧಾರದ ಮೇಲೆ 1925 ರಲ್ಲಿ ನಾಗಪುರದಲ್ಲಿ ಸಂಘವನ್ನು ಸ್ಥಾಪಿಸಿದರು.

ಸ್ವಾತಂತ್ರ ಹೋರಾಟ ಗಾರರು. ಅವರ ದೇಶ ಪ್ರೇಮ್,ಸಮಾಜದ ಬಗ್ಗೆ ಕಳಕಳಿ ಬಗ್ಗೆ ಮಕ್ಕಳಿಗೆ ತಿಳಿಸಿ ಕೊಡುವುದು ಅಗತ್ಯವಾಗಿದೆ. ದೇಶದಲ್ಲಿ ಯಾವುದೇ ಸಂಕಷ್ಟ ಬಂದರೆ ಮೊದಲು ಬರುವುದೇ ಅವರು ಸ್ಥಾಪಿಸಿದ ಸಂಘ ಪರಿವಾರ. ನಮ್ಮ ದೇಶದ ಕೋಟ್ಯಂತರ ಯುವಕರಿಗೆ ಮಾರ್ಗದರ್ಶಕರಾಗಿದ್ದಾರೆ ಅಂತಹ ಮಹಾನ್ ದೇಶಭಕ್ತರ ಚರಿತ್ರೆಯನ್ನು ಪಠ್ಯ ಪುಸ್ತಕಗಳಲ್ಲಿ ಅಳವಡಿಸುತ್ತಿರುವುದು ಸ್ವಾಗತಾರ್ಹವಾಗಿದೆ ಎಂದರು.