Sunday, 11th May 2025

ಕುವೆಂಪು ವಿವಿ: ರಾಜ್ಯಪಾಲರ ಭಾಷಣಕ್ಕೆ NSUI ಕಾರ್ಯಕರ್ತರು ಅಡ್ಡಿ

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ರಾಜ್ಯಪಾಲರು ಭಾಷಣ ಮಾಡುವ ವೇಳೆ NSUI ಕಾರ್ಯಕರ್ತರು ಪ್ರತಿಭಟನೆ ನಡೆಸಿ ಅಡ್ಡಿಪಡಿಸಿದರು.

ಕುವೆಂಪು ವಿವಿಯ ಬಸವ ಭವನದಲ್ಲಿ 33ನೇ ಘಟಿಕೋತ್ಸವ ಕಾರ್ಯಕ್ರಮ ಏರ್ಪಡಿಸ ಲಾಗಿತ್ತು. ಕಾರ್ಯಕ್ರಮದ ಕೊನೆಯಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಭಾಷಣ ಮಾಡಲು ಮುಂದಾಗುತ್ತಿದ್ದಂತೆಯೇ ಬಸವ ಭವನದ ಮೇಲ್ಭಾಗದ ಹಾಲ್ ನಲ್ಲಿದ್ದ NSUI ಕಾರ್ಯಕರ್ತರು ಏಕಾಏಕಿ ಕುವೆಂಪು ವಿವಿಯ ಕುಲಪತಿ ಪ್ರೊ. ವೀರಭದ್ರಪ್ಪ ಪೂಜಾರಿ ಅವರ ವಿರುದ್ಧ ಧಿಕ್ಕಾರ ಕೂಗಲು ಪ್ರಾರಂಭಿಸಿದರು.

ಘೋಷಣೆ ಕೂಗುತ್ತಿದ್ದಂತೆ ರಾಜ್ಯಪಾಲರ ಅಂಗರಕ್ಷಕರು ಅಲರ್ಟ್ ಅದರು. ನಂತರ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಈ ವೇಳೆ ಪೊಲೀಸರು ಹಾಗೂ ಹೋರಾಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು.

 

Leave a Reply

Your email address will not be published. Required fields are marked *