Saturday, 10th May 2025

Koppal News: ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ; ಕೊಲೆ ಶಂಕೆ

ಕುಷ್ಟಗಿ: ತಾಲೂಕಿನ ಹಿರೇ ಮನ್ನಾಪೂರ ಗ್ರಾಮದಲ್ಲಿ ಅರ್ಧ ಸುಟ್ಟ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಗ್ರಾಮದ ಶರಣಪ್ಪ ಶಿವಪ್ಪ ಮಸ್ಕಿ (22) ಮೃತ ಯುವಕ. ಭಾನುವಾರ ರಾತ್ರಿ ಮಲಗಿದ್ದ ಶರಣಪ್ಪ ಸೋಮವಾರ ಶವವಾಗಿ ಪತ್ತೆ ಆಗಿದ್ದಾನೆ. ಅರ್ಧ ಸುಟ್ಟ ಸ್ಥಿತಿಯಲ್ಲಿನ ಶವ ಇದ್ದು, ಯಾರೋ ದುಷ್ಕರ್ಮಿಗಳು ಹತ್ಯೆಗೈದು ಬೆಂಕಿ ಹಚ್ಚಿ ಸುಟ್ಟು, ಪರಾರಿಯಾಗಿದ್ದಾರೆ ಎಂದು ಕುಟುಂಬಸ್ಥರು ಶಂಕಿಸಿದ್ದಾರೆ.‌ ಕುಷ್ಟಗಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಎಸ್ಪಿ ರಾಮ್‌ ಎಲ್.ಅರಸಿದ್ದಿ, ಕುಷ್ಟಗಿ ಸಿಪಿಐ ಯಶವಂತ ಬಿಸನಳ್ಳಿ ಹಾಗೂ ಪಿಎಸೈ ಹನುಮಂತಪ್ಪ ತಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೆರಳಚ್ಚು ತಜ್ಞರ ತಂಡ ಹಾಗೂ ಶ್ವಾನದಳ ಹಾಗೂ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಲಾಗಿದೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

ಇದನ್ನೂ ಓದಿ: New Economic Corridor: ಬೆಂಗಳೂರು-ಕಲ್ಯಾಣ ಕರ್ನಾಟಕದ ಸಂಪರ್ಕ ಸಾಧಿಸಲು ಹೊಸ ಕಾರಿಡಾರ್‌ ಯೋಜನೆ…ಏನಿದರ ವಿಶೇಷತೆ?