Tuesday, 13th May 2025

Congress: ಕಾಂಗ್ರೆಸ್ ಮುಖಂಡರ ಹಗುರ ಮಾತು ಸರಿಯಲ್ಲ-ಕೋನಪ್ಪ ರೆಡ್ಡಿ

ಚಿಕ್ಕಬಳ್ಳಾಪುರ: ಇತ್ತೀಚಿಗೆ ಕಾಂಗ್ರೆಸ್ ಮುಖಂಡರು ಸಂಸದ ಡಾ.ಕೆ.ಸುಧಾಕರ್(MP Dr K Sudhakar) ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಸರಿಯಲ್ಲ. ಮಾತನಾಡುವ ಮುನ್ನ ನಾಲಿಗೆ ಮೇಲೆ ಹಿಡಿತ ಇರಲಿ ಎಂದು ಬಾಗೇಪಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಮುಖಂಡರಾದ ಕೋನಪ್ಪ ರೆಡ್ಡಿ ಹಾಗೂ ಹರಿನಾಥ ರೆಡ್ಡಿ ತಿಳಿಸಿದ್ದಾರೆ.

ಸಂಸದ ಸುಧಾಕರ್ ಅವರ ಗೃಹ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೊನಪ್ಪ ರೆಡ್ಡಿ, ಕಾಂಗ್ರೆಸ್ ಮುಖಂಡ ಕುಪೇಂದ್ರ ಸಂಸದ ಸುಧಾಕರ್ ವಿರುದ್ಧ ವೈಯಕ್ತಿಕ ಜೀವನದ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ತಮ್ಮ ಮನಸ್ಥಿತಿ ತೋರಿದ್ದು, ಇದನ್ನೆಲ್ಲ ಸಹಿಸಲು ಆಗುವುದಿಲ್ಲ ಇಂತಹವರ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ. ಕಾನೂನು ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹರಿನಾಥ ರೆಡ್ಡಿ ಮಾತನಾಡಿ, ನಮ್ಮ ನಾಯಕ ಸಂಸದ ಡಾ.ಕೆ.ಸುಧಾಕರ್ ಏನೆಂದು ರಾಜ್ಯಕ್ಕೆ ಗೊತ್ತಿದೆ ಅವರ ಹಾಗೂ ಅವರ ತಂದೆ ಬಗ್ಗೆ ಹಗುರವಾಗಿ ಮಾತನಾಡುವುದು ಖಂಡನೀಯ ಅವರ ಮಾತುಗಳಿಂದ ಅವರ ಮಾನಸಿಕ ಸ್ಥಿತಿ ಏನೆಂಬುದನ್ನು ತಿಳಿಯಬಹುದಾಗಿದೆ. ನಮ್ಮ ನಾಯಕರ ಬಗ್ಗೆ ಅಗೌರವ ಮಾತನ್ನು ಸಹಿಸಲ್ಲ. ಕೂಡಲೇ ಕ್ಷಮೆಯಾಚಿಸಬೇಕೆಂದರು.

ಸುದ್ದಿಗೋಷ್ಟಿಯಲ್ಲಿ ಕೆ.ಟಿ.ವೀರಾಂಜಿನೇಯಲು ಸೇರಿ ಇತರೆ ಮುಖಂಡರು ಇದ್ದರು.

ಇದನ್ನೂ ಓದಿ: Chikkaballapur News: ಸಮಾಜಕ್ಕೆ ಒಳಿತನ್ನು ಮಾಡಲು ಶ್ರಮಿಸುವವನೇ ನೈಜ ಇಂಜಿನಿಯರ್-ಐಐಎಂ ಮೆಂಟರ್ ಗೋಪಾಲ್‌ರಾವ್ ಅಡ್ಡಂಕಿ