Sunday, 11th May 2025

ಕೋಲಾರಮ್ಮ ದೇವಿಗೆ ಡಾ.ಸುಧಾಮೂರ್ತಿ ವಿಶೇಷ ಪೂಜೆ

ಕೋಲಾರ: ಇನ್ಫೋಸಿಸ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರು ಶುಕ್ರವಾರ ಕೋಲಾರದ ಶಕ್ತಿ ದೇವತೆ ಕೋಲಾರಮ್ಮ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ತಮ್ಮ ಸಂಬಂಧಿಕರ ಮದುವೆ ಹಿನ್ನೆಲೆ ಕೋಲಾರಕ್ಕೆ ಆಗಮಿಸಿದ್ದ ಸುಧಾ ಮೂರ್ತಿ, ಕೋಲಾರಮ್ಮ ದೇವಾಲಯಕ್ಕೂ ಭೇಟಿ ನೀಡಿ ದೇವಿಯ ದರ್ಶನ ಪಡೆದರು.

ಕೋಲಾರಕ್ಕೆ ಬಂದಾಗೆಲ್ಲಾ ಕೋಲಾರಮ್ಮ ದೇವಾಲಯಕ್ಕೆ ಬರೋದು ವಾಡಿಕೆ. ಅದರಂತೆ ದೇವಿಯ ದರ್ಶನ ಪಡೆದೆ. ಮನಸ್ಸಿಗೆ ಬಹಳ ನೆಮ್ಮದಿಯಾಯಿತು. ದೇವಸ್ಥಾನವನ್ನು ಬಹಳ ಚೆನ್ನಾಗಿ ಅಭಿವೃದ್ಧಿ ಮಾಡಿದ್ದಾರೆ ಎಂದರು.

ಅಳಿಯ ರಿಷಿ ಸುನಕ್​​ ಬ್ರಿಟನ್ ಪ್ರಧಾನಿಯಾಗಿದ್ದರ ಕುರಿತು ಪ್ರತಿಕ್ರಿಯಿಸಿದ ಸುಧಾಮೂರ್ತಿ, ಅವರಿಗೆ ನಮ್ಮ ಆಶೀರ್ವಾದ ಸದಾ ಇದ್ದೇ ಇರುತ್ತದೆ ಎಂದರು.