Sunday, 11th May 2025

ಕೊನೆ ಕ್ಷಣದಲ್ಲಿ ಮುಳಬಾಗಿಲ ’ಕೈ’ ಅಭ್ಯರ್ಥಿ ಬದಲು

ಕೋಲಾರ: ಕರ್ನಾಟಕ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಗುರುವಾರ ಕೊನೆ ದಿನವಾಗಿದ್ದು, ಕೊನೆ ಕ್ಷಣದಲ್ಲಿ ಕಾಂಗ್ರೆಸ್​ ಕೋಲಾರ ಜಿಲ್ಲೆಯ ಮುಳಬಾಗಿಲ ಅಭ್ಯರ್ಥಿಯನ್ನು ಬದಲಿಸಿದೆ.

ಮುಳಬಾಗಿಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನು ಕೊನೆ ಕ್ಷಣದಲ್ಲಿ ಬದಲಾವಣೆ ಮಾಡಲಾಗಿದ್ದು, ಡಾ.ಬಿ.ಸಿ ಮುದ್ದು ಗಂಗಾಧರ್ ಬದಲಿಗೆ ಆದಿನಾರಾಯಣ ಎನ್ನುವರಿಗೆ ಟಿಕೆಟ್ ನೀಡಿದೆ.

ತೀವ್ರ ಕಗ್ಗಂಟಾಗಿದ್ದ ಮುಳಬಾಗಿಲು ಕ್ಷೇತ್ರಕ್ಕೆ ಅಳೆದು ತೂಗಿ 5ನೇ ಪಟ್ಟಿಯಲ್ಲಿ ಅಭ್ಯರ್ಥಿಯನ್ನು ಘೋಷಣೆ ಮಾಡಿತ್ತು. ಈ ಪಟ್ಟಿಯಲ್ಲಿ ಮುಳಬಾಗಿಲು ವಿಧಾನಸಭೆ ಕ್ಷೇತ್ರಕ್ಕೆ ಡಾ.ಬಿ.ಸಿ.ಮುದ್ದು ಗಂಗಾಧರ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿತ್ತು.

ಆದರೆ, ಸ್ಥಳೀಯವಾಗಿ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಇದೀಗ ಕಾಂಗ್ರೆಸ್​ ಮುಳಬಾಗಿಲು ಅಭ್ಯರ್ಥಿಯನ್ನು ಬದಲಿಸಿದ್ದು, ಮುದ್ದು ಗಂಗಾಧರ್ ಬದಲಿಗೆ ಆದಿನಾರಾಯಣ ಎನ್ನುವರಿಗೆ ಟಿಕೆಟ್ ನೀಡಿದೆ.