Monday, 12th May 2025

ಯುವಕನ ಪ್ರಾಣ ರಕ್ಷಣೆ: ಪೋಲಿಸ್ ಇಲಾಖೆಯಿಂದ ಸನ್ಮಾನ

ಕೋಲಾರ: ಪಟ್ಟಣದ ಯುಕೆಪಿ ವ್ಯಾಪ್ತಿಯ ಕೃಷ್ಣಾ ನದಿ ಸೇತುವೆ ಹತ್ತಿರ ಮಂಗಳವಾರ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಗೌರಾ ಬಿ ಗ್ರಾಮದ ವ್ಯಕ್ತಿ ಕಲ್ಲಪ್ಪ ಪಾಟೀಲ್ ಎಂಬ ಯುವಕನನ್ನು ಪಟ್ಟಣದ ಮೀನುಗಾರ ರಾದ ಅಮೀನ್ ಸಾಬ್ ಜಾಲಗಾರ ಹಾಗೂ ಇತರರು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ ಹಿನ್ನೆಲೆಯಲ್ಲಿ ಪಿ.ಎಸ್.ಐ ಪ್ರೀತಮ್ ನಾಯಕ್ ನೇತೃತ್ವದಲ್ಲಿ ಯುವಕನ ಪ್ರಾಣ ರಕ್ಷಣೆ ಮಾಡಿದ ಮೀನುಗಾರರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸುತ್ತಾ ಪೊಲೀಸ್ ಠಾಣೆಯಲ್ಲಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಸಕಾಲಕ್ಕೆ ಸ್ಥಳಕ್ಕೆ ತೆರಳಿ ಯುವಕನನ್ನು ಠಾಣೆಗೆ ಕರೆತರಲು ಶ್ರಮಿಸಿದ ಪೇದೆಗಳಾದ ಎಂ.ಎಸ್ ಬಿರಾದಾರ, ಇಮ್ರಾನ್ ಪೆಂಡಾರಿ, ಉಮೇಶ ಬನಸೋಡೆ, ಶೇಖರ್ ರಾಠೋಡ ಅವರನ್ನು ಕೂಡ ಇದೇ ಸಂದರ್ಭದಲ್ಲಿ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.

ಅಪರಾಧ ವಿಭಾಗದ ಪಿ.ಎಸ್.ಐ ಆರ್.ಎನ್ ಬಿರಾದಾರ, ಮುಖಂಡರಾದ ಟಿ.ಟಿ ಹಗೇದಾಳ, ಅಂಜುಮನ್ ಕಮೀಟಿ ಅಧ್ಯಕ್ಷ ಅಲ್ಲಾಭಕ್ಷ ಬಿಜಾಪೂರ, ಪ.ಪಂ ಸದಸ್ಯ ಸಿ.ಎಸ್ ಗಿಡ್ಡಪ್ಪಗೋಳ, ಇಸ್ಮಾಯಿಲ್ ತಹಶಿಲ್ದಾರ, ಕಾಶೀಮ ವಾಲಿಕಾರ, ಸಲೀಮ ಕೊತ್ತಲ್, ಗುಲಾಬ ಪಕಾಲಿ ಇತರರು ಇದ್ದರು.