Sunday, 11th May 2025

ಭಕ್ತಿಯಲ್ಲಿ ಮಿಂದೇಳುವಂತೆ ಮಾಡುವ ಭಜನಾ ಪದಗಳು

ಕೋಲಾರ: ಪಟ್ಟಣದ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ಪಾದಯಾತ್ರಾ ಕಮೀಟಿ ಹಾಗೂ ಅಕ್ಕಮಹಾದೇವಿ ಭಜನಾ ಮಂಡಳಿ ವತಿಯಿಂದ ಶ್ರಾವಣ ಮಾಸದ ನಿಮಿತ್ಯ ಒಂದು ತಿಂಗಳು ನಿರಂತರ ಭಜನೆ, ಭಕ್ತಿಗೀತೆ ಹಾಗೂ ಕೀರ್ತನೆ ಕಾರ್ಯಕ್ರಮ ನಡೆಯುತ್ತಿವೆ.

ಪ್ರತಿವರ್ಷ ಶ್ರಾವಣ ಮಾಸದ ಸಂದರ್ಭ ಪಟ್ಟಣದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಪಾದಯಾತ್ರಾ ಕಮೀಟಿ ಹಾಗೂ ಶ್ರೀ ಅಕ್ಕಮಹಾದೇವಿ ಭಜನಾ ಮಂಡಳಿ ಕಮೀಟಿ ವತಿಯಿಂದ ಪುರುಷರು ಹಾಗೂ ಮಹಿಳೆಯರು ಪ್ರತ್ಯೇಕವಾಗಿ ಭಜನೆ ಹಾಗೂ ತತ್ವಪದ ಗಳನ್ನು ಹಾಡುವ ಮೂಲಕ ಭಕ್ತಿಯನ್ನು ಪ್ರದರ್ಶಿಸುತ್ತಾರೆ.

ಭಜನಾ ಕಾರ್ಯಕ್ರ ಮದಲ್ಲಿ ಬಸವಣ್ಣನವರ, ಪುರಂದರದಾಸ, ಕನಕದಾಸ, ಕಡಕೋಳ ಮಡಿವಾಳೇಶ್ವರರ ಹಾಗೂ ತತ್ತ್ವ ಪದಕಾರ ಶಿಶುನಾಳ ಷರೀಫರ ಹಾಗೂ ಮುಂತಾದವರು ರಚಿಸಿರುವ ಸಾಹಿತ್ಯವನ್ನು ಹಾಡುವ ಮೂಲಕ ಭಕ್ತಿಯನ್ನು ಪ್ರದರ್ಶಿಸುತ್ತಾರೆ.

ಶ್ರಾವಣ ಮಾಸದಲ್ಲಿ ನಿರಂತರವಾಗಿ ಒಂದು ತಿಂಗಳು ನಡೆಯುವ ಭಜನೆ, ಭಕ್ತಿಗೀತೆ ಹಾಗೂ ಕೀರ್ತನೆ ಕಾರ್ಯಕ್ರಮಗಳು ಭಕ್ತರನ್ನು ಭಾವಪರವಶರನ್ನಾಗಿ ಮಾಡುವ ಮೂಲಕ ಭಕ್ತಿಯಲ್ಲಿ ಮಿಂದೇಳುವಂತೆ ಮಾಡುತ್ತವೆ.