ಬೆಂಗಳೂರು: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಇಂದು ಹೊಚ್ಚ ಹೊಸ ಕ್ಯಾಮ್ರಿ ಹೈಬ್ರಿಡ್ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆ ಮಾಡಿದೆ. “ಸೆಡಾನ್ ಟು ದಿ ಕೋರ್” ಎಂಬ ಪರಿಕಲ್ಪನೆಯ ಆಧಾರದಲ್ಲಿ ಈ ಹೊಚ್ಚ ಹೊಸ ಎಲೆಕ್ಟ್ರಿಕ್ ಸೆಡಾನ್ ಅನ್ನು ವಿನ್ಯಾಸಗೊಳಿಸಲಾಗಿದೆ.
ಪರಿಸರ ಸ್ನೇಹಿ ಎಲೆಕ್ಟ್ರಿಕ್ ಕಾರ್ ಕ್ಯಾಮಿ ಅತ್ಯುತ್ತಮ ಕಾರ್ಯಕ್ಷಮತೆ, ಆಕರ್ಷಕ ಶೈಲಿ, ಉನ್ನತ ಸುರಕ್ಷತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಸಮ್ಮಿಲನವಾಗಿದೆ. ಈ ಕಾಲದ ಗ್ರಾಹಕರ ಆಸೆಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿ ರುವ ಅದ್ದೂರಿ ಐಷಾರಾಮಿ ಸೆಡಾನ್ ಆಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶ ಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಮಸಕಾಜು ಯೋಶಿಮುರಾ ಅವರು, “ಟೊಯೋಟಾದ ಜಾಗತಿಕ ಪರಿಸರ ಸವಾಲು 2050ಕ್ಕೆ ಅನುಗುಣವಾಗಿ ಅತ್ಯುತ್ತಮವಾದ, ಸುಸ್ಥಿರ ಸಾರಿಗೆ ಉತ್ಪನ್ನಗಳನ್ನು ಒದಗಿಸುವ ನಮ್ಮ ಅಭಿವೃದ್ಧಿ ದೃಷ್ಟಿಕೋನಕ್ಕೆ ಈಗ ಬಿಡುಗಡೆಯಾಗಿರುವ ಹೊಚ್ಚ ಹೊಸ ಕ್ಯಾಮ್ರಿ ಹೈಬ್ರಿಡ್ ಎಲೆಕ್ಟ್ರಿಕ್ ಕಾರ್ ಉತ್ತಮ ಪುರಾವೆಯಾಗಿದೆ.
ಭಾರತವು ಬಹಳ ಮುಖ್ಯ ಮಾರುಕಟ್ಟೆಯಾಗಿದ್ದು, ಇಂಗಾಲ ಹೊರಸೂಸುವಿಕೆ ಕಡಿಮೆ ಮಾಡುವ ಮತ್ತು ಇಂಧನ ಭದ್ರತೆ ಸಾಧಿಸುವ ಭಾರತದ ಗುರಿಗಳಿಗೆ ಪೂರಕವಾದ ಉತ್ಪನ್ನ ಕಾರ್ಯತಂತ್ರವನ್ನು ನಾವು ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಶುದ್ಧ ಸಾರಿಗೆ ವ್ಯವಸ್ಥೆಯನ್ನು ಹೆಚ್ಚಿಸಲು ಮತ್ತು ಹೆಚ್ಚು ಚುರುಕಾಗಿ ಮತ್ತು ವೇಗವಾಗಿ ಸಾಮೂಹಿಕ ವಿದ್ಯುದೀಕರಣವನ್ನು ಸಾಧಿಸಲು ನಾವು ಬಹು ಮಾರ್ಗ ವಿಧಾನವನ್ನು ಅಳವಡಿಸಿ ಕೊಂಡಿದ್ದೇವೆ. ಹೊಚ್ಚ ಹೊಸ ಕ್ಯಾಮ್ರಿ ಹೈಬ್ರಿಡ್ ಎಲೆಕ್ಟ್ರಿಕ್ ಕಾರ್ ಹಸಿರು ಸಾರಿಗೆ ವಿಭಾಗಕ್ಕೆ ನಮ್ಮ ಕೊಡುಗೆ ಯಾಗಿದ್ದು, ಭವಿಷ್ಯದ ಇಂಗಾಲ ಮುಕ್ತ, ಸಂತೋಷಕರ ಸಮಾಜವನ್ನು ನಿರ್ಮಿಸುವ ನಿಟ್ಟಿನಲ್ಲಿ ನಮ್ಮ ಮಹತ್ವದ ಕೊಡುಗೆಯಾಗಿದೆ” ಎಂದು ಹೇಳಿದರು.
ಭಾರಿ ಸಾಮರ್ಥ್ಯದ ಲೀಥಿಯಂ ಐಯಾನ್ ಬ್ಯಾಟರಿಯನ್ನು ಹೊಂದಿರುವ, ಟೊಯೋಟಾದ 5ನೇ ಜನರೇಷನ್‌ನ ಹೈಬ್ರಿಡ್ ತಂತ್ರಜ್ಞಾನದಿಂದ ಕಾರ್ಯ ನಿರ್ವಹಿಸುವ ಕ್ಯಾಮಿ 25.49 ಕಿಮೀ/ಲೀನಷ್ಟು ಅತ್ಯುತ್ತಮ ಇಂಧನ ಮೈಲೇಜ್ ಮೂಲಕ ಉತ್ತಮ ಕಾರ್ಯಕ್ಷಮತೆ ಮತ್ತು ಸುಸ್ಥಿರ ಸಾರಿಗೆ ವ್ಯವಸ್ಥೆ ಒದಗಿಸುತ್ತದೆ.ಅಪ್‌ಗ್ರೇಡ್ ಮಾಡಿದ 2.5ಲೀನ ಡೈನಾಮಿಕ್ ಫೋರ್ಸ್ ಎಂಜಿನ್ ಹೊಂದಿದ್ದು, ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ಮೃದುವಾದ ಕಾರ್ಯವಿಧಾನ ಹೊಂದಿದೆ.
ಡ್ರೈವ್ ಮಾಡುವುದು ಆನಂದಕರವಾಗಿರುವಂತೆ ವಿನ್ಯಾಸಗೊಂಡಿದೆ.ಸೇಫ್ಟಿ ಸೆನ್ಸ್ 3.0 (ಟಿಎಸ್ಎಸ್3.0) ಸೌಲಭ್ಯ ಹೊಂದಿದ್ದು, 9 ಎಸ್‌ಆರ್ಎಸ್ ಏರ್‌ಬ್ಯಾಗ್‌ಗಳನ್ನು ಮುಂಭಾಗದಲ್ಲಿ ಚಾಲಕ ಮತ್ತು ಪ್ರಯಾಣಿಕ ಸೀಟ್ ಬಳಿ, ಮುಂಭಾಗದಲ್ಲಿ, ಹಿಂಭಾಗದಲ್ಲಿ, ಕರ್ಟನ್ ಶೀಲ್ಡ್ ಬಳಿ, ಡ್ರೈವರ್‌ನ ಮೊಣಕಾಲು ಸಮೀಪ ಹೊಂದಿದೆ. ಆ ಮೂಲಕ ಗ್ರಾಹಕರಿಗೆ ಸುರಕ್ಷಿತ, ಒತ್ತಡ ಮುಕ್ತ ಪ್ರಯಾಣ ವ್ಯವಸ್ಥೆ ಒದಗಿಸುತ್ತದೆ. ಎನರ್ಜೆಟಿಕ್ ಬ್ಯೂಟಿ ಪರಿಕಲ್ಪನೆಯ ಅಡಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಮುಂಭಾಗದ ಬಂಪರ್ ಮರುವಿನ್ಯಾಸ ಗೊಳಿಸಲಾಗಿದೆ. ಭಾರತದಾದ್ಯಂತ ರೂ.48,00,000/- ಎಕ್ಸ್ ಶೋ ರೂಂ ಬೆಲೆಯಲ್ಲಿ ಲಭ್ಯವಿದೆ.
ಹೊಚ್ಚ ಹೊಸ ಕ್ಯಾಮ್ರಿ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ ನ ಹೈಬ್ರಿಡ್ ಬ್ಯಾಟರಿಯು 8 ವರ್ಷಗಳ ಅಥವಾ 160,000 ಕಿಲೋಮೀಟರ್ ಗಳ ವಾರಂಟಿಯೊಂದಿಗೆ ಬರುತ್ತದೆ. ಹೊಸ ಕ್ಯಾಮ್ರಿ ಹೈಬ್ರಿಡ್ ಎಲೆಕ್ಟ್ರಿಕ್ ವೆಹಿಕಲ್ ಬುಕಿಂಗ್ ಈಗಾಗಲೇ ಆರಂಭವಾಗಿವೆ. ಬುಕಿಂಗ್ ಮಾಡಲು ಹತ್ತಿರದ ಟೊಯೋಟಾ ಡೀಲರ್‌ಶಿಪ್‌ಗೆ ಭೇಟಿ ನೀಡಿ ಅಥವಾ www.toyotabharat.com ಮೂಲಕ ಆನ್ ಲೈನ್ ನಲ್ಲಿ ಬುಕ್ ಮಾಡಿ.