Sunday, 11th May 2025

Vijayapura News: ಜಪತಪ ಮಾಡಿ ದೇವರನ್ನು ಒಲಿಸಿಕೊಳ್ಳಿ: ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯರು

ಇಂಡಿ: ಮನುಷ್ಯ ಮುಕ್ತಿ ಪಡೆಯಬೇಕಾದರೆ ಸರಳ ಭಕ್ತಿಯನ್ನು ರೂಢಿಸಿಕೊಳ್ಳುವುದು ಅವಶ್ಯಕವಾಗಿದೆ ಅದಕ್ಕಾಗಿ ಪ್ರತಿಯೋಬ್ಬರು ಲಿಂಗವನ್ನು ಕೈಯಲ್ಲಿ ಹಿಡಿದು ಜಪತಪಮಾಡುವ ಮೂಲಕ ಭಗವಂತನನ್ನು ಒಲಿಸಿಕೊಳ್ಳಬೇಕು ಎಂದು ಕಾಶಿ ಜಗದ್ಗುರುಗಳು ಶ್ರೀಮದ್ ಕಾಶಿ ಜ್ಞಾನ ಸಿಂಹಾಸನಾಧಿಶ್ವರ ೧೦೦೦೮ ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ತಾಲೂಕಿನ ಹಿರೇಬೇವನೂರ ಗ್ರಾಮದ ಮಲ್ಲಿಕಾರ್ಜುನ ದೇವರ ಜಟ್ಟಿ ಜಾತ್ರಾಮಹೋತ್ಸವ ಹಾಗೂ ಬ್ರಹಮ್ಮರಾಂಭಿಕ ಮೋರ್ತಿ ಪ್ರತಿಷ್ಠಾಪನ ಕಳಸಾರೋಹಣ ಕಾರ್ಯಕ್ರಮದ ಧರ್ಮಸಭೆಯ ಸಾನಿಧ್ಯವಹಿಸಿ ಅರ್ಶೀವಚನ ನೀಡಿದರು.

ನಾವು ದೇವರಿಗೆ ವರವನ್ನು ಬೇಡುವ ಅವಶ್ಯಕತೆ ಇಲ್ಲ ನಮ್ಮ ಪ್ರಾರಬ್ದಕನುಗುಣವಾಗಿ ನಮಗೆ ಅವಶ್ಯಕವಾಗಿ ದೊರಕುತ್ತವೆ. ಮುಕ್ತಿಯನ್ನು ಕರುಣಿಸು ಎಂದು ದೇವರಿಗೆ ಬೇಡಿಕೊಳ್ಳಿ ಮುಕ್ತಿಯ ಸಾಧನೆ ಶಾಸ್ತçಕನುಸಾರವಾಗಿ ಪಡೆಯಲು ನಾಲ್ಕು ಸಾಧನೆಗಳು ಅವಶ್ಯಕವಾಗಿವೆ, ದೇವರು ಯಾವ ಲೋಕದಲ್ಲಿರುವನು ಅದರ ಸಲುವಾಗಿ ಶಾಸ್ತçದಲ್ಲಿ ೧೪ ಲೋಕಗಳಿವೆ ಮೆಲೆ ೭ ಕೆಳಗೆ ೭ಲೋಕಗಳಿವೆ ನಾವು ಭೂಲೋಕ ದಲ್ಲಿದ್ದೆವೆ ಭಗವಂತ ಪ್ರತಿಯೋಬ್ಬರ ಹೃದಯದಲ್ಲಿದ್ದಾನೆ. ನಿಮ್ಮ ಹೃದಯದಲ್ಲಿ ನಾನಿದ್ದೇನೆ ಎಂದು ನೀವು ದೇವರಿಗೆ ಕೇಳಿಕೊಳ್ಳಿ ಆ ರೀತಿ ನೀವು ನಡೆದುಕೊಳ್ಳಬೇಕು ೨೧ ತೀರ್ಥಗಳಿದ್ದು ಲಿಂಗ ಪೂಜೆ ಮಾಡುವ ಮೂಲಕ ಶಿಲ್ಪಿ ಮಾಡಿರುವ ಮೋರ್ತಿ ಹಾಗೂ ಕಾಗದದ ಮೇಲೆ ಚಿತ್ರಗಾರ ತಗೆದ ಚಿತ್ರದಲ್ಲಿ ಕೂಡಾ ದೇವರನ್ನು ಕಾಣುತ್ತಿರುವ ಎಲ್ಲಾ ಕಡೆ ದೇವರಿದ್ದಾನೆ ದಿವ್ಯವೆ ದೇವಾಲಯ ದೇವರು ನಿರ್ಮಿಸಿದ ದೇವಾಲಯ ಎಂದು ಅರ್ಶೀವಚನ ನೀಡಿದರು.

ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ಮಾತೋಶ್ರೀ ವಿಧ್ಯಾತಾಯಿ ನುಡಿದರು. ಬಿ.ಎಸ್ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.

ಜಯಶಾಂತಲಿ0ಗ ಶಿವಾಚಾರ್ಯರು ,ಈರಸಂಗ್ಯಾ ಮಠಪತಿ, ನಾನಾಗೌಡ ಬಿರಾದಾರ, ಅಶೋಕಗೌಡ ಬಿರಾದಾರ , ಸಂಗಪ್ಪ ಉಪ್ಪಿನ ,ಆರ್ ವ್ಹಿ ಪಾಟೀಲ, ಅಣ್ಣಾರಾಯ ಬಮ್ಮನಹಳ್ಳಿ, ಡಾ. ಆರ್ ಎಂ ಮಳಿ, ಡಾ.ಸಿದ್ದು ಪರಗೊಂಡ, ಆರ್.ಡಿ ಪಾಟೀಲ ಶಂಕರಗೌಡ ಬಿರಾದಾರ, ಗ್ರಾಮ ಪಂಚಾಯತ ಸದಸ್ಯ ರವಿ ನಾರಾಯಣಪೂರ, ಟಿ.ವ್ಹಿ ಪಾಟೀಲ, ಸುನೀಲ ವಾಲಿ, ಮಂಜು ಪ್ಯಾಟಿ, ಮಲ್ಲು ವಾಲಿ, ಮಲ್ಲು ಪವಾಡಿ, ಕಾಸು ನಾಯಕೋಡಿ ,ಮಸಿದ್ದಾರೊಢ ಮಠಪತಿ ,ಮಂಜುನಾಥ ಪ್ಯಾಟಿ ಉಪಸ್ಥಿತರಿದ್ದರು.

ಇದನ್ನೂ ಓದಿ: #VijayapuraBreakinf