Thursday, 15th May 2025

Kalaburagi News: ಚಿಮ್ಮಾಇದ್ಲಾಯಿ ಗ್ರಾ.ಪಂ.ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಬಿಜೆಪಿ ಮಡಿಲಿಗೆ

ಚಿಂಚೋಳಿ: ಚಿಮ್ಮಾಇದ್ಲಾಯಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ನಡೆಯಿತು.

ಅಧ್ಯಕ್ಷ ಸ್ಥಾನ ಎಸ್ಸಿ ಮೀಸಲು ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷರಾಗಿ ಸವೀತಾ ಶಿವಯೋಗಿ ರುಸ್ತಂಪೂರ, ಉಪಾಧ್ಯಕ್ಷರಾಗಿ ಚಂದ್ರಕಲಾ ರಾಜೇಂದ್ರಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ತಿಳಿಸಿದರು. ಅಧ್ಯಕ್ಷರಾಗಿ ಸವಿತಾ ಶಿವಯೋಗಿ ಒಂದು ಅವಧಿ ಪೂರ್ಣಗೊಳಿಸಿ ಮತ್ತೇ ಎರಡನೇ ಅವಧಿಗೆ ಅದ್ಯಕ್ಷರಾಗಿ ಪುನಹಃ ಅವಿರೋಧವಾಗಿ ಆಯ್ಕೆಗೊಂಡರು. ಚಂದ್ರಕಲಾ ರಾಜೇಂದ್ರಪ್ಪ ಚಟ್ನಳ್ಳಿ ಉಪಾಧ್ಯಕ್ಷರಾಗಿ ಮೊದಲ ಬಾರಿಗೆ ಆಯ್ಕೆಯಾದರು.

ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಶಾಸಕ ಡಾ.ಅವಿನಾಶ ಉಮೇಶ ಜಾಧವ ಅವರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಆಯ್ಕೆಗೊಂಡ ನೂತನ ಅಧ್ಯಕ್ಷ- ಉಪಾಧ್ಯಕ್ಷರನ್ನು ಸನ್ಮಾನಿಸಿ ಸಿಹಿ ಹಂಚಿ, ಶುಭ ಕೋರಿದರು.

ಈ ಸಂದರ್ಭದಲ್ಲಿ ಪಕ್ಷದ ಮಾಜಿ ಮಂಡಲ ಅಧ್ಯಕ್ಷ ಸಂತೋಷ ಗಡಂತಿ, ಯುವ ಮೊರ್ಚ ಅಧ್ಯಕ್ಷ ಸತೀಶರೆಡ್ಡಿ ತಾದಲಾಪೂರ, ಓಬಿಸಿ ಮೊರ್ಚದ ಉಪಾಧ್ಯಕ್ಷ ಗುಂಡಪ್ಪ ಅವರಾದಿ, ಶಿವಶರಪ್ಪ ಡೆಂಗಿ, ಜಗನ್ನಾಥ ಪೂಜಾರಿ, ವಿರೇಶ ದೇಸಾಯಿ, ಗ್ರಾ.ಪಂ.ಸದಸ್ಯರುಗಳಾದ ಮೋಗಲಪ್ಪ ದಾಸ, ಇಮಾಮ ಪಟೇಲ, ಉಮೇಶ ಧೂಳಪನೋರ, ಶ್ರೀನಿವಾಸ ಚಿಂಚೋಳಿಕರ್, ರೇಣುಕಾ ಗುಂಡಪ್ಪ ಅವರಾದಿ, ಲಕ್ಷ್ಮಿ ಅಮೃತ ಮೋತಕಪಳ್ಳಿ, ಶೇಖಮ್ಮ ಪೂಜಾರಿ ಇದ್ದರು.

ಇದನ್ನೂ ಓದಿ: Kalaburagi KKRTC: ಕಲಬುರಗಿ ಕೆಕೆಆರ್‌ಟಿಸಿ ಸಿವಿಲ್ ವಿಭಾಗದಲ್ಲಿ ಗೋಲ್‌ಮಾಲ್, ಕೋಟ್ಯಂತರ ರೂಪಾಯಿ ಡೀಲ್..!