Saturday, 10th May 2025

Kalaburagi Breaking: ಕರ್ತವ್ಯದಲ್ಲಿದ್ದ ಚೆಟ್ಟಿನಾಡ್ ಸಿಮೇಂಟ್ ಕಂಪನಿಯ ಕಾರ್ಮಿಕನ ಸಾವು

ಚಿಂಚೋಳಿ: ತಾಲೂಕಿನ ಚಿಟ್ಟಿನಾಡ್ ಸಿಮೇಂಟ್ ಕಾರ್ಖಾನೆಯಲ್ಲಿ ಕರ್ತವ್ಯ ನಿರತ ಕಾರ್ಮಿಕನೊಬ್ಬ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಅಸ್ಸಾಂ ಮೂಲದ ಕೇಶವ್ (28) ಮೃತ ಕಾರ್ಮಿಕನಾಗಿದ್ದು, ಟಾಟಾ ಸೋಲಾರ ಏಜೇನ್ಸಿ ಅಡಿ ಚೆಟ್ಟಿನಾಡ್ ಸಿಮೇಂಟ್ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ, ಬೆಳಗ್ಗೆ 9 ಗಂಟೆಗೆ ಕೆಲಸ ಮಾಡುವ ವೇಳೆ ಮೃತ ಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಮೃತದೇಹವನ್ನು ಚೆಟ್ಟಿನಾಡ್ ಸಿಮೇಂಟ್ ಕಾರ್ಖಾನೆಯ ಆಬುಲೇನ್ಸ್ ಮೂಲಕ ಪಟ್ಟಣದ ಚಂದಾಪೂರ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆತರಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಇನ್ನೂ ಪ್ರಕರಣ ದಾಖಲು ಆಗದೆ ಇರುವುದರಿಂದ ಮೃತ ದೇಹಕ್ಕಾಗಿ ಇನ್ನುಳಿದ ಕಾರ್ಮಿಕರು ಕಾಯಿತ್ತಿದ್ದಾರೆ ಎಂದು ತಿಳಿದು ಬಂದಿದೆ

ಮೃತ ಕಾರ್ಮಿಕ ಕೇಶವ್ ತಲೆ ಸುತ್ತು ಬಿದ್ದು ಸಾವುನಪ್ಪಿದ್ದಾನೆ. ಹೀಗಾಗಿ ಇದೊಂದು ಸಹಜ ಸಾವಾಗಿದೆ ಎಂದು ಚೆಟ್ಟಿನಾಡ್ ಸಿಮೇಂಟ್ ಕಾರ್ಖಾನೆ ಆಡಳಿತ ಮಂಡಳಿ ಮತ್ತು ಸರಕಾರಿ ಕಾರ್ಮಿಕ ಇಲಾಖೆಯ ಅಧಿಕಾರಿ ಶಿವರಾಜ ಪಾಟೀಲ್ ತಿಳಿಸಿದ್ದಾರೆ.

ಇದನ್ನೂ ಓದಿ: kalaburagi