Saturday, 10th May 2025

Kalaburagi News: ಪೂಜ್ಯ ದೊಡ್ಪಪ್ಪ ಅಪ್ಪನವರ ಪುಣ್ಯಸ್ಮರಣೋತ್ಸವ ಇಂದು

ಕಲಬುರಗಿ: ಶರಣಬಸವೇಶ್ವರ ಸಂಸ್ಥಾನದ ಏಳನೇ ಪೀಠಾಧಿಪತಿಯಾಗಿದ್ದ ಪೂಜ್ಯ ದೊಡ್ಡಪ್ಪ ಅಪ್ಪನವರ ೪೧ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಶರಣಬಸವೇಶ್ವರ ದೇವಸ್ಥಾನದಲ್ಲಿ ಗುರುವಾರ ಸಾಯಂಕಾಲ ೭ ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ: Litereur Kalaburagi: ಸಾಹಿತಿ ಕಲ್ಬುರ್ಗಿ ಅವರ 9ನೇ ವರ್ಷದ ಪುಣ್ಯಸ್ಮರಣೆ

ಶರಣಬಸವೇಶ್ವರ ಸಂಸ್ಥಾನದ ೮ನೇ ಪೀಠಾಧಿಪತಿಗಳಾದ ಪೂಜ್ಯ ಡಾ.ಶರಣಬಸವಪ್ಪ ಅಪ್ಪ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಪೂಜ್ಯ ಡಾ.ದಾಕ್ಷಾಯಣಿ ಎಸ್. ಅಪ್ಪ ಮತ್ತು ಶರಣಬಸವೇಶ್ವರ ಸಂಸ್ಥಾನದ ೯ನೇ ಪೀಠಾಧಿಪತಿಗಳಾದ ಪೂಜ್ಯ ಚಿ.ದೊಡ್ಡಪ್ಪ ಎಸ್.ಅಪ್ಪ ಅವರು ದಿವ್ಯ ಸಾನಿಧ್ಯ ವಹಿಸುವರು.

ಕಾರ್ಯಕ್ರಮಗಳನ್ನು ಸಾರಂಗಧರ ಶ್ರೀಶೈಲಂ ಹಾಗೂ ಸುಲಫಲ ಮಠ, ಶಹಾಬಜಾರನ ಪೂಜ್ಯ ಶ್ರೀ ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮಿಗಳು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಚವದಾಪೂರಿ ಹಿರೇಮಠದ ಪೂಜ್ಯ ಶ್ರೀ ಷ.ಬ್ರ.ಡಾ.ರಾಜಶೇಖರ ಶಿವಾಚಾರ್ಯರು, ಬೆಳಗುಂಪಿಯ ಬೃಹ್ಮನಮಠದ ಪೂಜ್ಯ ಶ್ರೀ ಅಭಿನವ ಪರವತೇಶ್ವರ ಶಿವಾಚಾರ್ಯರು ಮತ್ತು ಶರಣಬಸವ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಅನಿಲ ಕುಮಾರ ಬಿಡವೆಯವರು ಭಾಗವಹಿಸುವರು. ಕಾರ್ಯಕ್ರಮದ ಅಧ್ಯಕ್ಷತೆ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ವಹಿಸುವರು.

Leave a Reply

Your email address will not be published. Required fields are marked *