Thursday, 22nd May 2025

ಭಾರತ್ ಜೋಡೋ ಯಾತ್ರೆ ಪೂರ್ವಸಭೆ ನಡೆಸಿದ ಡಾ.ರಫೀಕ್ ಅಹ್ಮದ್

ತುಮಕೂರು: ಎಐಸಿಸಿ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೋ ಪಾದಯಾತ್ರೆಗೆ ತುಮಕೂರು ನಗರ ವಿಧಾನಸಭಾ ಕ್ಷೇತ್ರದಿಂದ ಕಾರ್ಯಕರ್ತರು  ಪಾಲ್ಗೊಳ್ಳಲಿದ್ದು, ಈ ಹಿನ್ನೆಲೆ ಮಾಜಿ ಶಾಸಕರು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಾ.ರಫೀಕ್ ಅಹ್ಮದ್,  ತುಮಕೂರು ನಗರ ಬ್ಲಾಕ್ ಕಾಂಗ್ರೆಸ್-೨ ರ ಸಮಿತಿ ವ್ಯಾಪ್ತಿಯಲ್ಲಿನ ೧೯ನೇ ವಾರ್ಡ್, ೨೮ನೇ ವಾರ್ಡ್, ೩೨ನೇ ವಾರ್ಡ್ ನ ಕಾರ್ಯಕರ್ತರ ಸಭೆ ನಡೆಸಿ ಭಾರತ್ ಜೋಡೋ ಯಾತ್ರೆಯ ಸಮಿತಿ ರಚಿಸಿ, ವಿವಿಧ ಹುದ್ದೆಗಳಿಗೆ ಕಾರ್ಯಕರ್ತರ ನೇಮಕ ಮಾಡಿದರು.
ಈ ವೇಳೆ ಡಾ. ರಫೀಕ್ ಅಹ್ಮದ್  ಮಾತನಾಡಿ, ನಮ್ಮೆಲ್ಲರ ಅಚ್ಚುಮೆಚ್ಚಿನ ನಾಯಕ ರಾಹುಲ್ ಗಾಂಧಿರವರು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಹಮ್ಮಿಕೊಂಡಿರುವ ಈ ಪಾದಯಾತ್ರೆ ದೇಶದಲ್ಲಿ ಐತಿಹಾಸಿಕ ಪಾದಯಾತ್ರೆಯಾಗಲಿದೆ. ಇಂತಹ ಪಾದಯಾತ್ರೆ ಯು ನಮ್ಮ ಜಿಲ್ಲೆಯಲ್ಲಿ ಹಾದುಹೋಗಲಿದ್ದು ಈ ಯಾತ್ರೆಯಲ್ಲಿ ಭಾಗಿಯಾಗುವುದು ನಮ್ಮೆಲ್ಲರ ಪುಣ್ಯ ಎಂದು ತಿಳಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇ ಶ್ವರ್ ಹಾಗೂ ಜಿಲ್ಲಾ ನಾಯಕರ ನೇತೃತ್ವದಲ್ಲಿ  ಯಾತ್ರೆಯು ಜಿಲ್ಲೆಯಲ್ಲಿ ಹಾದುಹೋಗಲಿದೆ ಎಂದು ತಿಳಿಸಿದರು.
ತುಮಕೂರು ನಗರದಿಂದ ಈ ಯಾತ್ರೆಗೆ ತೆರಳುವ ಎಲ್ಲಾ ಕಾರ್ಯಕರ್ತರಿಗೆ ವಾಹನ ಮತ್ತು ಊಟೋಪಚಾರದ ವ್ಯವಸ್ಥೆ ಕಲ್ಪಿಸು ವುದಾಗಿ ತಿಳಿಸಿ, ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಡಾ.ರಫೀಕ್ ಅಹ್ಮದ್ ಮನವಿ ಮಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ.ರಾಜು, ಕೆಪಿಸಿಸಿ ಓಬಿಸಿ ಘಟಕದ ಕಾರ್ಯದರ್ಶಿ ಅನಿಲ್ ಕುಮಾರ್, ರೈತ ಮುಖಂಡ ರಾಜಪ್ಪ, ಮುಖಂಡರಾದ ರಾಘವೇಂದ್ರ, ಮಹಿಳಾ ಮುಖಂಡರಾದ ಶ್ರೀಮತಿ ವಿಜಯಲಕ್ಷಿö್ಮ, ನಗರ ಅಸಂಘಟಿತ ಕಾರ್ಮಿಕರ ಘಟಕದ ಅಧ್ಯಕ್ಷ ಬಷೀರ್ ಅಹಮದ್,  ಯುವ ಕಾಂಗ್ರೆಸ್ ಮುಖಂಡರಾದ ಅಖಿಲೇಶ್, ಕಿಶೋರ್, ರಘು, ವಜಾಹತ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.