ತುಮಕೂರು: ತುಮಕೂರು ವಿಶ್ವವಿದ್ಯಾಲಯದ ಎಂಬಿಎ ವಿಭಾಗದ ವತಿಯಿಂದ ಆ.20 ರಂದು ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆ ಯವರೆಗೆ ಉದ್ಯೋಗ ಮೇಳ ಹಮ್ಮಿಕೊಂಡಿರುವುದಾಗಿ ಎಂಬಿಎ ವಿಭಾಗದ ಮುಖ್ಯಸ್ಥರಾದ ನೂರ್ ಅಫ್ಸಾ ತಿಳಿಸಿದರು.

ವಿದ್ಯಾಭ್ಯಾಸ ಮುಗಿದ ನಂತರ ವಿದ್ಯಾರ್ಥಿಗಳು ಕೆಲಸಕ್ಕಾಗಿ ಬೆಂಗಳೂರು ನಗರ ಸೇರಿ ದಂತೆ ಬೇರೆ, ಬೇರೆ ಕಡೆ ಹೋಗಿ ಹುಡುಕಿ ಉದ್ಯೋಗ ಪಡೆಯುವುದು ಕಷ್ಟಕರ ವಾದ ಕಾರಣ ನಾವು ವಿದ್ಯಾರ್ಥಿಗಳ ಅನು ಕೂಲಕ್ಕಾಗಿ ಈ ಉದ್ಯೋಗ ಮೇಳವನ್ನು ಆಯೋಜಿ ಸಿರುವುದಾಗಿ ತಿಳಿಸಿದರು.
ತುಮಕೂರು ವಿ.ವಿ. ಎಂಬಿಎ ವಿಭಾಗದಿಂದ ರಾಜ್ಯದ ಪ್ರತಿಷ್ಠಿತ 75 ಕಂಪನಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಈ ಪೈಕಿ 30 ರಿಂದ 40 ಕಂಪನಿಗಳು ಉದ್ಯೋಗ ಮೇಳ ದಲ್ಲಿ ಭಾಗ ವಹಿಸಲು ಒಪ್ಪಿಗೆ ನೀಡಿವೆ. ಆಕ್ಸಿಸ್ ಬ್ಯಾಂಕ್, ಹೆಚ್‌ಡಿಎಫ್‌ಸಿ ಬ್ಯಾಂಕ, ಐಸಿಐಸಿಐ ಬ್ಯಾಂಕ್, ಕಾರ್ವಿ, ಯುರೇಕಾ ಫೋರ್ಬ್ಸ್, ಚೋಳಮಂಡಲA, ಸಮೃದ್ಧಿ ಸರ್ವೀಸಸ್ ಇತ್ಯಾದಿ ಪ್ರಮುಖ ಕಂಪನಿಗಳು ಭಾಗ ವಹಿಸಲಿವೆ ಎಂದರು.
ತುಮಕೂರು ನಗರದ ಹೊರ ವಲಯದಲ್ಲಿರುವ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಯಾಗಿರುವ ಅನೇಕ ಕಂಪನಿಗಳನ್ನು ಇಂದು ಭೇಟಿ ಮಾಡಿ ಉದ್ಯೋಗ ಮೇಳದಲ್ಲಿ ಭಾಗ ವಹಿಸುವಂತೆ ಕೋರಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರವಾಗಿ ತಿಳಿಸಿದರು.
2018ರಲ್ಲಿ ತುಮಕೂರು ವಿ.ವಿ. ಯಿಂದ ಉದ್ಯೋಗ ಮೇಳ ಆಯೋಜಿ ಸಿದ್ದು, ಸುಮಾರು 350 ವಿದ್ಯಾರ್ಥಿಗಳಿಗೆ ಉದ್ಯೋಗ ನೀಡ ಲಾಗಿತ್ತು. ಪ್ರಸಕ್ತ ಉದ್ಯೋಗ ಮೇಳದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸ್ಥಳದಲ್ಲೆ ನೇಮಕಾತಿ ಆದೇಶ ಪತ್ರವನ್ನು ನೀಡ ಲಾಗುವುದು ಎಂದರು.
ಈ ಉದ್ಯೋಗ ಮೇಳದಲ್ಲಿ ಭಾಗವಹಿಸುವ ಕಂಪನಿಗಳು ನಮ್ಮಿಂದ ಹಾಗೂ ನಾವು ಸದರಿ ಕಂಪನಿಗಳಿ0ದ ಯಾವುದೆ ಹಣಕಾಸು ಸಹಾಯವನ್ನು ಪಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಆ.20 ರಂದು ಬೆಳಗ್ಗೆ 10.30 ಗಂಟೆಗೆ ತುಮಕೂರು ವಿ.ವಿ. ಉಪಕುಲಪತಿ ಪ್ರೊ. ವೆಂಕಟೇಶ್ವರಲು ಉದ್ಯೋಗ ಮೇಳವನ್ನು ಉದ್ಘಾ ಟಿಸುವರು. ಜಯಚಂದ್ರ ಆರಾಧ್ಯ, ಕಿಶೋರ್‌ಚಂದ್ರ ಇವರು ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7676330932 9986000424