Saturday, 10th May 2025

JDU New Office: ಜೆಡಿಯು ನೂತನ ಕಚೇರಿ ಉದ್ಘಾಟನೆ

ತುಮಕೂರು: ಜನತಾದಳ ಸಂಯುಕ್ತ (ಜೆಡಿಯು)ತುಮಕೂರು ವತಿಯಿಂದ ಪಕ್ಷದ ನೂತನ ಕಚೇರಿ ಉದ್ಘಾಟನಾ ಕಾರ್ಯಕ್ರಮವನ್ನು ಸೆ. 5ರಂದು ಕೆ.ಇ.ಬಿ. ಕಲ್ಯಾಣ ಮಂಟಪದ ಎದುರಿನ ಶ್ರೀನಿಧಿ ಬಿಲ್ಡಿಂಗ್‌ನ ಒಂದನೇ ಮಹಡಿ ಯಲ್ಲಿ ಉದ್ಘಾಟನೆಗೊಂಡಿತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹಿರೇಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಉದ್ಘಾಟನೆಯನ್ನು ಜೆಡಿಯು ರಾಜ್ಯಾಧ್ಯಕ್ಷ ಮಹಿಮ ಜ.ಪಟೇಲ್ ನೆರವೇರಿಸಿದರು.

ಇದೇ ವೇಳೆ ಮೌಲ್ಯಾಧಾರಿತ ರಾಜಕಾರಣಿ ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರ 98ನೇ ಹುಟ್ಟು ಹಬ್ಬದ ಆಚರಿಸಲಾಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಕೆ.ಜಿ.ಎಲ್. ರವಿ ಸೇರಿದಂತೆ ಜೆಡಿಯು ಪದಾಧಿ ಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *