ಬಾಗೇಪಲ್ಲಿ: ಮುಂದಿನ ದಿನಗಳಲ್ಲಿ ನಡೆಯಲಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಗೆ ಜೆಡಿಎಸ್ ಕಾರ್ಯಕರ್ತರು ಸಿದ್ದರಾಗಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ0ತೆ ಜೆಡಿಎಸ್ ಜಿಲ್ಲಾದ್ಯಕ್ಷ ಮುಕ್ತ ಮುನಿಯಪ್ಪ ಕಾರ್ಯಕರ್ತರಿಗೆ ಕರೆ ನೀಡಿದರು..
ಬಾಗೇಪಲ್ಲಿ ಪಟ್ಟಣದ 1 ನೇ ವಾರ್ಡಿನಲ್ಲಿರುವ ಶಿರಡಿಸಾಯಿ ನಾಥ್ ಮಂದಿರದ ಸಭಾಂಗಣದಲ್ಲಿ ಅಯೋಜಿಸ ಲಾಗಿದ್ದ ಸದಸ್ಯತ್ವ ನೊಂದಣಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿ, ಜೆಡಿಎಸ್ ರಾಜ್ಯಾಧ್ಯಕ್ಷರ ಸೂಚನೆ ಯಂತೆ ಪಕ್ಷವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮಿಸಬೇಕು, ಮೈತ್ರಿ ಧರ್ಮ ಪಾಲನೆ ಮುಂದುವರಿದರೆ ಪಕ್ಷದ ಮುಖಂಡರು, ಕಾರ್ಯಕರ್ತರು ಬಿಜೆಪಿಯನ್ನು ಬೆಂಬಲಿಸಬೇಕಾಗುತ್ತದೆ. ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಚೇಳೂರು, ಗುಡಿಬಂಡೆ, ಬಾಗೇಪಲ್ಲಿ ಸೇರಿ ಮೂರು ತಾಲೂಕುಗಳಿಂದ ಕನಿಷ್ಠ 50 ಸಾವಿರ ಸದಸ್ಯತ್ವ ನೊಂದಣಿಗೆ ಮುಖಂಡರು, ಕಾರ್ಯಕರ್ತರು ಮುಂದಾಗಬೇಕಾಗಿದೆ.
ಕ್ಷೇತ್ರದ 268 ಮತಗಟ್ಟೆಗಳಿಂದ ತಲಾ 10 ಜನ ನಿಷ್ಠಾವಂತ ಜೆಡಿಎಸ್ ಕಾರ್ಯಕರ್ತರ ತಂಡವನ್ನು ರಚಿಸಿ ಪಕ್ಷ ಕಟ್ಟುವ ಜವಾಬ್ದಾರಿ ತಾಲೂಕು ಅಧ್ಯಕ್ಷರು, ಪದಾಧಿಕಾರಿಗಳು ವಹಿಸಿಕೊಳ್ಳುವುದು ಕಡ್ಡಾಯವಾಗಿದೆ. ಮೂರು ತಾಲೂಕುಗಳಲ್ಲಿ ಸದಸ್ಯತ್ವ ನೊಂದಣಿ ಮುಗಿಯುತ್ತಿದ್ದಂತೆ ಮೂರು ತಾಲೂಕುಗಳ ಅದ್ಯಕ್ಷರ, ಪದಾಧಿಕಾರಿ ಗಳನ್ನು ಅಯ್ಕೆ ಮಾಡಿ ಹೊಸ ಸಮಿತಿಗಳನ್ನು ರಚಿಸಲಾಗುತ್ತದೆ. ಜೆಡಿಎಸ್‌ನ ಪರಾಜಿತ ಹಾಗೂ ಆಕಾಂಕ್ಷಿ ಅಭ್ಯರ್ಥಿಗಳು ಸದಸ್ಯತ್ವ ನೊಂದಣಿಗೆ ಮುಂದಾಗುವ0ತೆ ಸಲಹೆ ನೀಡಲಾಗಿದ್ದು ಅವರ ಸಹಯೋಗವನ್ನು ಪಡೆದುಕೊಳ್ಳಿ ಎಂದು ಮುಖಂಡರಿಗೆ ಸೂಚಿಸಿದರು.
ರಾಜ್ಯಾಧ್ಯಂತ ಕಳೆದ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಗೆ ಶೀಘ್ರವೇ ಮುಹೂರ್ತ ನಿಗಧಿಯಾಗುವ ಸೂಚನೆಗಳು ಕಂಡು ಬರುತ್ತಿದ್ದು ಅಭ್ಯರ್ಥಿಗಳ ಅಯ್ಕೆ ಕುರಿತು ಪಕ್ಷದ ವರಿಷ್ಠರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ದೇಶದ ಅಭಿವೃದ್ದಿ ದೃಷ್ಠಿಯಿಂದ ಎನ್‌ಡಿಎ ಸರ್ಕಾರ ತೆಗೆದು ಕೊಂಡಿರುವ ಒಂದು ದೇಶ, ಒಂದು ಚುನಾವಣೆ ತೀರ್ಮಾನವನ್ನು ಜೆಡಿಎಸ್ ಪಕ್ಷ ಸ್ವಾಗತಿಸುತ್ತಿದೆ, ಮುಂದಿನ ದಿನಗಳಲ್ಲಿ ಏಕ ಚುನಾಚಣೆಯಿಂದ ದೇಶಕ್ಕೆ ಒಳ್ಳೆಯದಾಗಲಿದೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಬಿ.ಆರ್.ನರಸಿಂಹನಾಯ್ಡು, ತಾಲೂಕು ಅಧ್ಯಕ್ಷ ಸೂರ್ಯ ನಾರಾಯಣರೆಡ್ಡಿ, ಕಾರ್ಯದರ್ಶಿ ಬಾಬಾಜಾನ್, ಗುಡಿಬಂಡೆ ಜೆಡಿಎಸ್ ಕಾರ್ಯಾಧ್ಯಕ್ಷ ಮುರುಳಿ ಕೃಷ್ಣ, ಉಪಾಧ್ಯಕ್ಷ ಸುರೇಶ್‌ರೆಡ್ಡಿ, ಜೆಡಿಎಸ್ ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ವೆಂಕಟರೆಡ್ಡಿ, ಕುಮಾರಪಡೆ ಜಿಲ್ಲಾಧ್ಯಕ್ಷ ನಾಗರಾಜುರೆಡ್ಡಿ, ಮುಖಂಡರಾದ ಎನ್.ಆರ್.ಮಂಜುನಾಥರೆಡ್ಡಿ, ನೀರಘಂಟಿಪಲ್ಲಿ ಮಂಜುನಾಥರೆಡ್ಡಿ, ಛಲವಾಧಿ ಕೆ.ವಿ.ರಮೇಶ್, ನಾಗಿರೆಡ್ಡಿ, ಸುಬ್ಬನ್ನ, ಲಕ್ಷ್ಮೀಪತಿ ಮತ್ತಿತರರು ಇದ್ದರು.