Monday, 12th May 2025

ಎರಡು ಕೋಟಿ ವೆಚ್ಚದ ಗ್ರಾಮೀಣ ಭಾಗದ ರಸ್ತೆ ನಿರ್ಮಾಣಕ್ಕೆ ಸಚಿವ ಜೆಸಿಎಂ ಚಾಲನೆ

ಚಿಕ್ಕನಾಯಕನಹಳ್ಳಿ : ಗೋಡೆಕೆರೆಯಿಂದ ಹಾಲುಗೋಣದವರೆಗೆ ಒಂದು ಕೋಟಿ ವೆಚ್ಚದಲ್ಲಿ ಡಾಂಬರೀಕರಣ ರಸ್ತೆ, ದುಗುಡಿ ಹಳ್ಳಿಯ ತಿಪಟೂರು ರಸ್ತೆಯಿಂದ ಗೊಲ್ಲರಹಟ್ಟಿಯವರೆಗೆ ೩೦ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ, ಹಾಗು ಶೆಟ್ಟಿಕೆರೆಯ ಮುಖ್ಯ ಹೆದ್ದಾರಿ ಯಿಂದ ಯೋಗಮಾಧವ ನಗರಕ್ಕೆ ೮೦ ಲಕ್ಷ ವೆಚ್ಚದ ಸಿಸಿರಸ್ತೆ ನಿರ್ಮಾಣಕ್ಕೆ ಸಚಿವ ಜೆ.ಸಿ.ಮಾಧುಸ್ವಾಮಿ ಸೋಮವಾರ ಭೂಮಿ ಪೂಜೆ ನೆರವೇರಿಸಿದರು.

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ೨೦೨೦-೨೧ ಸಾಲಿನ ೫೦೫೪ ಅನುದಾನದಡಿ ಈ ಗ್ರಾಮೀಣ ಭಾಗದ ರಸ್ತೆಯನ್ನು ನಿರ್ಮಾಣ ಮಾಡಲಾಗುತ್ತಿದೆ.

ಈ ಸಂದರ್ಭದಲ್ಲಿ ಬಗರ್‌ಹುಕುಂ ಕಮಿಟಿ ಸದಸ್ಯ ನಿರಂಜನ್, ಪಂಚಾ ಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಸೋಮ ಶೇಖರ್ ಇತರರಿದ್ದರು.