ಬೆಂಗಳೂರು: ಕರ್ನಾಟಕ ಆದಿಜಾಂಬವ, ಮಾದಿಗ ಮತ್ತು ಪೌರಕಾರ್ಮಿಕರ ಒಕ್ಕೂಟದಿಂದ ಫೆಬ್ರವರಿಯಲ್ಲಿ ನಡೆಯಲಿರುವ ಸಂವಿಧಾನ ಜಾಗೃತ ಸಮಾವೇಶಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಇದರ ಪೂರ್ವ ಭಾವಿ ಸಭೆಯನ್ನು ನಗರದ ಲಿಡ್ಕರ್ ಭವನದ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.
ಮಾಜಿ ಸಚಿವ ಆಲ್ಕೋಡ್ ಹನುಮಂತಪ್ಪ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಒಕ್ಕೂಟದ ಕಾರ್ಯಾಧ್ಯಕ್ಷ ಜಂಬೂ ದ್ವೀಪ ಸಿದ್ದರಾಜು, ಪ್ರಧಾನ ಕಾರ್ಯದರ್ಶಿ ಸಿ.ವಿ.ರಮೇಶ್ ಕುಮಾರ್, ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂಎನ್ ಶ್ರೀರಾಮ್, ಬಿಬಿಎಂಪಿ ಪೌರಕಾರ್ಮಿಕ ಸಂಘದ ಡೈರಿ ನಾರಾ ಯಣ, ಸುಬ್ಬರಾಯುಡು, ಮಾದಿಗ ದಂಡೋರದ ಪದಾಧಿಕಾರಿಗಳಾದ ಜೆ.ಎಮ್ ದೇವರಾಜು, ಎಂ.ಸಿ. ಶ್ರೀನಿವಾಸ್, ಪ್ರಸಾದ್, ಮಾಹಿತಿ ಹಕ್ಕು ಆಯೋ ಗದ ಮಾಜಿ ಆಯುಕ್ತ ಎಲ್. ಕೃಷ್ಣಮೂರ್ತಿ, ಬೆಂಗಳೂರು ಸ್ಮಾರ್ಟ್ ಸಿಟಿ ಸದಸ್ಯ ಶೇಷಗಿರಿಹಳ್ಳಿ ನರಸಿಂಹಯ್ಯ, ಕಾಂಗ್ರೆಸ್ ಮುಖಂಡ ಕೋಗಿಲಿ ವೆಂಕಟೇಶ್, ಮಾಡಬಾಖ್ ಜಯರಾಮ್, ಆದಿ ಜಾಂಬವ ಯುವಸೇನೆ ರಾಜ್ಯಾಧ್ಯಕ್ಷ ರಮೇಶ್ ಚಕ್ರವರ್ತಿ, ಆದಿಜಾಂಬವ ಸಂಘದ ಬೀದರ್ ಜಿಲ್ಲಾಧ್ಯಕ್ಷ ರಾಜು ಕಡ್ಯಾಳ, ಉಪಾಧ್ಯಕ್ಷ ರಾಜು ಕದಿರೇಶ್, ಕಾರ್ತಿಕ್, ಚನ್ನಪಟ್ಟಣ ತಾಲೂಕು ಅಧ್ಯಕ್ಷ ಮಹದೇವು ಮಲ್ಲುಮ್ಗೆರೆ, ಕೇಶವಮೂರ್ತಿ, ಮೇಡಮಾರನ ಹಳ್ಳಿ ಶಿವರಾಜು, ಮಲ್ಲಿಕಾರ್ಜುನ ಬಾಂಬೇಕರ್, ಮಾದಿಗ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸಂಗಮೇಶ್ ತುಮಕೂರಿನ ಸಾಹಿತಿ ಜನದನಿ ರಾಮಯ್ಯ, ಅಖಿಲ ಭಾರತ ಜೈಭೀಮ್ ದಲಿತ ಕ್ರಿಯಾ ಸಮಿತಿ ಅಧ್ಯಕ್ಷ ಬಿಆರ್ ಮುನಿರಾಜು, ಕಾಂಗ್ರೆಸ್ ಮುಖಂಡ ವಿಜಯಕುಮಾರ್ ಸಿಂಹ, ರಾಮನಗರ, ಚನ್ನಪಟ್ಟಣ, ಮಂಡ್ಯ ಮೈಸೂರು, ಬೀದರ್, ರಾಯಚೂರು, ಯಾದಗಿರಿ, ಬೆಳಗಾಂ, ಧಾರವಾಡ, ಹುಬ್ಬಳ್ಳಿ, ಹಾವೇರಿ, ಜಿಲ್ಲೆಗಳ ಪದಾಧಿ ಕಾರಿಗಳು ಹಾಜರಿದ್ದರು.
ಸಭೆಯಲ್ಲಿ ಮಾತನಾಡಿದ ರಾಜು ಕಡ್ಯಾಳ, ಸಮಾವೇಶಕ್ಕೆ ವೈಯುಕ್ತವಾಗಿ ಒಂದು ಲಕ್ಷ ಹಣ ನೀಡುವುದಾಗಿಯೂ, ಬೀದರ್ ಜಿಲ್ಲೆಯಿಂದ 100 ವಾಹನಗಲ್ಲಿ ಜನ ಕರೆತರುವುದಾಗಿ ತಿಳಿಸಿದರು. ಧಾರವಾಡದ ಪದಾಧಿಕಾರಿಗಳು ಮಾತನಾಡಿ ನಮ್ಮ ಭಾಗದಿಂದ 100 ವಾಹನಗಲ್ಲಿ ಜನ ಕರೆತರುವುದಾಗಿ ತಿಳಿಸಿದರು.
ಮಾಜಿ ಸಚಿವ ಆಲ್ಕೋಡ್ ಹನುಮಂತಪ್ಪ ಮಾತನಾಡಿ, ಬೀದರ್ ನಿಂದ ಚಾಮರಾಜನಗರದ ವರೆವಿಗೂ ಸಂಚರಿಸಿ ಜನ ಸಂಘಟಿಸಿ ಮಾದಿಗರ ಬೃಹತ್ ಸಮಾವೇಶವನ್ನು ಫೆಬ್ರವರಿ ಕೊನೆ ವಾರದಲ್ಲಿ ನಡೆಸಲು ಶ್ರಮಿಸುವುದಾಗಿ ತಿಳಿಸಿದರು.