ಐಬಿಎ ಆಡಳಿತ ಮಂಡಳಿ ಸದಸ್ಯ ಮತ್ತು ಭಾರತದ ರಾಯಭಾರಿ ಡಾ. ದೀಪಕ್ ವೋಹ್ರಾ ಮತ್ತು
ನೀತಿ ಆಯೋಗದ ಸದಸ್ಯ ಡಾ. ಅರವಿಂದ್ ವಿರ್ಮಾನಿ ಯವರಿಂದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ
ಬೆಂಗಳೂರು: ಐಬಿಎ ಮತ್ತು ಐಇಎ ಜಂಟಿಯಾಗಿ ಪ್ರಸ್ತುತಪಡಿಸಿದ ಅರ್ಥಶಾಸ್ತ್ರ ಮತ್ತು ಸಾರ್ವಜನಿಕ ನೀತಿ ಮತ್ತು ಅರ್ಥಶಾಸ್ತ್ರ ಸಂಶೋಧನಾ ಚಾಂಪಿಯನ್ ಶಿಪ್ ಕುರಿತ ಮೂರು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನವಾದ ಇಕೋಫ್ಲೆನ್ಸ್ ’24 ಇಂಡಸ್ ಬುಸಿನೆಸ್ ಅಕಾಡೆಮಿಯಲ್ಲಿ ನಡೆಯಿತು. ಈ ಸಮ್ಮೇಳನದಲ್ಲಿ “ಡಿಜಿಟಲ್ ಯುಗದಲ್ಲಿ ಆರ್ಥಿಕ ಮತ್ತು ಸಾರ್ವಜನಿಕ ನೀತಿಯ ಮಾರ್ಗಗಳು” ಎಂಬ ವಿಷಯದ ಬಗ್ಗೆ ಚರ್ಚೆ ಮಾಡಲಾಯಿತು.

ಸಮ್ಮೇಳನವನ್ನು ಇಂಡಸ್ ಬಿಸಿನೆಸ್ ಅಕಾಡೆಮಿಯ ನಿರ್ದೇಶಕ ಡಾ.ಶುಭೇಂದು ಡೇ ಉದ್ಘಾಟಿಸಿದರು ಮತ್ತು ಸ್ವಾಗತ ಭಾಷಣವನ್ನು ಐಬಿಎ ಮಾರ್ಗದರ್ಶಕ ಡಾ.ಸುಭಾಷ್ ಶರ್ಮಾ ಮಾಡಿದರು. ನೀತಿ ಆಯೋಗದ ಸದಸ್ಯ ಡಾ.ಅರವಿಂದ್ ವಿರ್ಮಾನಿ ಮುಖ್ಯ ಭಾಷಣ ಮಾಡಿದರು ಮತ್ತು ಭಾರತೀಯ ಅರ್ಥಶಾಸ್ತ್ರ ಸಂಘದ ಸಂಚಾಲಕ ಡಾ.ಅನಿಲ್ ಠಾಕೂರ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಐಬಿಎ ಆಡಳಿತ ಮಂಡಳಿ ಸದಸ್ಯ ಮತ್ತು ಭಾರತದ ರಾಯಭಾರಿ ಡಾ. ದೀಪಕ್ ವೋಹ್ರಾ, ಐಬಿಎಯ ಯುವ ಮನಸ್ಸುಗಳಿಗೆ ಪುಸ್ತಕಗಳನ್ನು ಮೀರಿ ಯೋಚಿಸಲು ಮತ್ತು ಬಹಳ ವಿಶ್ಲೇಷಣಾತ್ಮಕವಾಗಲು ಅನುವು ಮಾಡಿಕೊಡುವಂತೆ ಕರೆ ನೀಡಿದರು. ಅಲ್ಲದೇ ಜಾಗತಿಕ ಅರ್ಥಶಾಸ್ತ್ರಜ್ಞ ರೊಂದಿಗಿನ ಸಭೆಗಳಲ್ಲಿ, ಇಂಡಸ್ ಬಿಸಿನೆಸ್ ಅಕಾಡೆಮಿ ವಿಶ್ವದಾದ್ಯಂತದ ನಿರ್ವಹಣಾ ಸಂಸ್ಥೆಗಳ ಉನ್ನತ ಶ್ರೇಣಿಗಳಲ್ಲಿ ಹೆಮ್ಮೆಯ ಸ್ಥಾನವನ್ನು ಹೊಂದಿದೆ ಎಂದು ಒತ್ತಿ ಹೇಳಿದರು. ಐಬಿಎಯಲ್ಲಿ ಉನ್ನತ ದರ್ಜೆಯ ಶಿಕ್ಷಣ ತಜ್ಞರ ಉಪಸ್ಥಿತಿಯು ವಿದ್ಯಾರ್ಥಿಗಳಿಗೆ ತುಂಬಾ ಸಹಕಾರಿಯಾಗಲಿದೆ ಎಂದರು.
ಐಬಿಎ ಸ್ಥಾಪಕ ಮತ್ತು ಎಂಡಿ ಡಾ.ಮನೀಶ್ ಜೈನ್ ಅವರು ಇಕೋಫ್ಲುಯೆನ್ಸ್’24 – ಅರ್ಥಶಾಸ್ತ್ರ ಸಮ್ಮೇಳನವು ದೇಶದ ಮತ್ತು ಸಾಮಾನ್ಯ ಜನರ ಮನಸ್ಥಿತಿಯ ಮೇಲೆ ಬೀರುವ ಪ್ರಭಾವದ ಬಗ್ಗೆ ಗಮನ ಸೆಳೆದರು.
ಸಮ್ಮೇಳನದ ಸಹ-ಅಧ್ಯಕ್ಷ ಪ್ರೊ.ಪ್ರಶಾಂತ್ ಕುಲಕರ್ಣಿ ಮಾತನಾಡಿ, ಅರ್ಥಶಾಸ್ತ್ರ ಮತ್ತು ದೈನಂದಿನ ಜೀವನದಲ್ಲಿ ಅದರ ಪ್ರಾಮುಖ್ಯತೆಯ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಒಂದು ಮಾರ್ಗವಾಗಿದೆ ಎಂದು ನುಡಿದು ಎಲ್ಲರ ಗಮನ ಸೆಳೆದರು.
ದೇಶ ಹಾಗೂ ವಿದೇಶದಿಂದ ಆರ್ಥಿಕ ತಜ್ಞರು ಆಗಮಿಸಿ ಸಮಾವೇಶದಲ್ಲಿ ಭಾಗವಹಿಸಿದ್ದರು ಹಾಗೂ ಆರ್ಥಿಕತೆ ಬಗ್ಗೆ ವಿವಿಧ ಕೋನಗಳಲ್ಲಿ ವಿದ್ಯಾರ್ಥಿಗಳಿಗೆ ವಿವರಿಸಿದರು.
ಇದೇ ಸಂದರ್ಭದಲ್ಲಿ ಡಾ. ವಿ.ಆರ್. ಪಂಚಮುಖಿ, ಡಾ. ಪಿ.ಆರ್. ಪಂಚಮುಖಿ ಮತ್ತು ಡಾ. ಆರ್.ಎಸ್. ದೇಶಪಾಂಡೆ ಯವರಿಗೆ ವಿವಿಧ ಪ್ರಶಸ್ತಿ ನೀಡುವ ಮೂಲಕ ಸನ್ಮಾನವನ್ನು ಮಾಡಲಾಯಿತು.
ಹೈದರಾಬಾದ್ ನ ಐಪಿಇ ನಿರ್ದೇಶಕ ಡಾ.ರಾಮ್ ಮಿಶ್ರಾ, ಮದ್ರಾಸ್ ಸ್ಕೂಲ್ ಆಫ್ ಎಕನಾಮಿಕ್ಸ್ ನಿರ್ದೇಶಕ ಡಾ.ಭಾನು ಮೂರ್ತಿ, ಐಇಎ ಸೆಕ್ರೆಟರಿ ಡಾ.ರವೀಂದ್ರ ಬ್ರಹ್ಮೆ-ಜನರಲ್ ಡಾ.ರವೀಂದ್ರ ಬ್ರಹ್ಮೆ, ಐಎಸ್ಇಸಿ ಮಾಜಿ ನಿರ್ದೇಶಕ ಡಾ.ಆರ್.ಎಸ್.ದೇಶಪಾಂಡೆ, ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಎಸ್.ಆರ್.ಕೇಶವ, ಡಾ.ಪುಷ್ಕರ್ಣಿ ಪಂಚಮಿಖಿ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಬಸವರಾಜ್ ನಾಗೂರ್, ಕರ್ನಾಟಕ ವಿಶ್ವ ವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ಬಸವರಾಜ್ ನಾಗೂರ್ ಉಪಸ್ಥಿತರಿದ್ದರು. ಪ್ರೊ.ಪ್ರಶಾಂತ್ ಕುಲಕರ್ಣಿ ವಂದಿಸಿದರು.