Saturday, 10th May 2025

Selection for sports: ಶಿವಯೋಗೇಶ್ವರ ಶಾಲೆ ಕ್ರೀಡಾಕೂಟದಲ್ಲಿ ತಾಲೂಕಾ ಮಟ್ಟಕ್ಕೆ ಆಯ್ಕೆ

ಇಂಡಿ: ತಾಲೂಕಿನ ನಾದ ಗ್ರಾಮದ ವಲಯದಲ್ಲಿ ನಡೆದ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಸಾಲೋಟಗಿ ಗ್ರಾಮದ ಶ್ರೀಶಿವಯೋಗೇಶ್ವರ ಪ್ರಾಥಮಿಕ ಶಾಲೆಯ ವಿಧ್ಯಾರ್ಥಿಗಳು ವ್ಹಾಲಿಬಾಲ್, ಥ್ರೋಬಾಲ್, ಮತ್ತು ಬಾಲಕರ ವ್ಹಾಲಿಬಾಲ್ ಥ್ರೋಬಾಲ್ ಆಟದಲ್ಲಿ, ಚಕ್ರ ಎಸೆತ ಪ್ರಥಮ ಸ್ಥಾನ ಪಡೆದಿದ್ದಾರೆ.

ವೈಯಕ್ತಿಕ ವಿಭಾಗದಲ್ಲಿ ಬಾಲಕಿಯರ ವಿಭಾಗದಲ್ಲಿ ೧ ನೂರು, ೨ ನೂರು, ೪ ನೂರು, ೬ ನೂರು ಮೀಟರ್ ಓಟದಲ್ಲಿ ಪ್ರಥಮ,ಚಕ್ರ ಏಸೆತದಲ್ಲಿ ಪ್ರಥಮ, ಚಕ್ರ ಏಸೆತ ಬಾಲಕರ ವಿಭಾಗದಲ್ಲಿ ೧ ನೂರು, ೬ ನೂರು, ಓಟದಲ್ಲಿ ಪ್ರಥಮ, ಚಕ್ರ, ಗುಂಡು ಏಸೆತ ಪ್ರಥಮ ಸ್ಥಾನ ಪಡೆದು ತಾಲೂಕಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿಧ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು ಆಡಳಿತ ಮಂಡಳಿಯ ಸರ್ವಸದಸ್ಯರು ಹಾಗೂ ಮುಖ್ಯಗುರುಗಳು ,ಶಿಕ್ಷಕ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *