ನಾವು 2025ದಲ್ಲಿ ಕಾಲಿಡುತ್ತಿದ್ದಂತೆ, ದೀರ್ಘಕಾಲದ ಆರೋಗ್ಯ ಸಾಧಿಸುವಲ್ಲಿ ಪೋಷಣೆಯ ಪಾತ್ರವನ್ನು ನಿರ್ಲಕ್ಷಿಸ ಲಾಗದು. ನಮ್ಮ ಜೀವನಶೈಲಿ ಆಯ್ಕೆಗಳು ಯಾವ ರೀತಿ ನಮ್ಮ ಸ್ವಾಸ್ಥ್ಯದ ಮೇಲೆ ಪ್ರಭಾವ ಬೀರುತ್ತಿದೆ ಎಂಬುದರ ಕುರಿತು ಜಾಗೃತಿ ಹೆಚ್ಚಾಗುತ್ತಿರುವುದರಿಂದ, ಪ್ರೊಟೀನ್‌ಗಳು, ಒಮೆಗ-3, ವಿಟಮಿನ್‌ಗಳು ಮತ್ತು ಖನಿಜಗಳು ಮುಂತಾದ ಅತ್ಯಾವ್ಶ್ಯಕ ಪೋಷಕಾಂಶಗಳನ್ನು ಆದ್ಯತೆಗೊಳಿಸುವುದು ಅತ್ಯಗತ್ಯವಾಗಿದೆ.
ವಿಕಸನಗೊಳ್ಳುತ್ತಿರುವ ನಮ್ಮ ಜೀವನಶೈಲಿಗಳು ಹಾಗೂ ಮೆಟಾಬಲಿಕ್ ಅಗತ್ಯಗಳು, ಪೋಷಣೆಗೆ ಸಮತೋಲನದ ಮತ್ತು ಉದ್ದೇಶಪೂರಿತ ದೃಷ್ಟಿಕೋನ ಹೊಂದಿರುವುದನ್ನು ಕಡ್ಡಾಯಗೊಳಿಸುತ್ತಿದೆ. ಈ ದೃಷ್ಟಿಕೋನವನ್ನು ಬೆಳೆಸಿ ಕೊಳ್ಳುವುದು ಕೇವಲ ಆಯ್ಕೆಯಷ್ಟೇ ಅಲ್ಲ, ಅದು, ನಮ್ಮ ಭವಿಷ್ಯತ್ತಿನ ಆರೋಗ್ಯದಲ್ಲಿ ಒಂದು ಶಕ್ತಿಶಾಲಿ ಯಾದ ಹೂಡಿಕೆಯಾಗಿದೆ.
ಇಂದು, ಪೋಷಣೆ ಎಂದರೆ ಕೇವಲ ಕ್ಯಾಲೊರಿಗಳನ್ನು ಎಣಿಸುವುದಲ್ಲ. ಅದು, ನಮ್ಮ ದೇಹದ ಅಗತ್ಯಗಳ ಬಗ್ಗೆ ತಿಳಿದುಕೊಂಡು ಶಕ್ತಿಗಾಗಿ ಮ್ಯಾಕ್ರೊನ್ಯೂಟ್ರಿಯೆಂಟ್ಸ್(ಬೃಹತ್ಪೋಷಕಾಂಶಗಳು) ಗಳು ಮತ್ತು ಆರೋಗ್ಯ ವಾಗಿರುವುದಕ್ಕೆ ಮತ್ತು ಬಲವಾಗಿರುವುದಕ್ಕೆ ಮೈಕ್ರೊನ್ಯೂಟ್ರಿಯೆಂಟ್ಸ್ (ಸೂಕ್ಷ್ಮಪೋಷಕಾಂಶಗಳು)ಗಳ ಸರಿಯಾದ ಮಿಶ್ರಣವು ಅದಕ್ಕೆ ಸಿಗುವುದನ್ನು ಖಾತರಿಪಡಿಸುವುದಾಗಿದೆ, ಅಬಾಟ್‌ನ ಪೋಷಣೆ ವ್ಯಾಪಾರ ವಿಭಾಗದ ವೈದ್ಯ ಕೀಯ ಹಾಗೂ ವೈಜ್ಞಾನಿಕ ವ್ಯವಹಾರಗಳ ನಿರ್ದೇಶಕಿ ಡಾ. ಪ್ರೀತಿ ಠಾಕೂರ್, “ಜನರು ತಮ್ಮ ತಿನ್ನುವ ಅಭ್ಯಾಸಗಳ ಬಗ್ಗೆ ಹೆಚ್ಚು ಹೆಚ್ಚು ಪ್ರಜ್ಞಾಪೂರ್ವಕವಾಗುತ್ತಿರುವಂತಹ ಸಂದರ್ಭದಲ್ಲಿ, ಪೋಷಣೆ-ಸಮೃದ್ಧವಾದ ಆಹಾರಗಳ ಬೇಡಿಕೆಯೂ ಹೆಚ್ಚಾಗುತ್ತಿದ್ದು,ಇನ್ನಷ್ಟು ಆರೋಗ್ಯಕರವಾದ ಆಹಾರಕ್ರಮ ಪ್ಯಾಟರ‍್ನ್ ಗಳಿಗೆ ಕಾರಣವಾಗುತ್ತಿದೆ. ಈ ಪ್ರಯತ್ನಗಳಿಗೆ ಬೆಂಬಲ ಒದಗಿಸಲು, ಮೌಖಿಕ ಪೋಷಣಾ ಪೂರಕಾಹಾರಗಳು(ONS) ಪೌಷ್ಟಿಕಾಂಶ ಅಂತರಗಳನ್ನು ಭರ್ತಿ ಮಾಡಿ, ಕುಪೋಷಣೆಯನ್ನು, ಅದರಲ್ಲೂ ವಿಶೇಷವಾಗಿ ಅಸಮರ್ಪಕ ಹಸಿವೆ, ಪೌಷ್ಟಿಕಾಂಶ ಅಗತ್ಯಗಳು ಹೆಚ್ಚಾಗಿರುವ ಅಥವಾ ಪೌಷ್ಟಿಕಾಂಶಗಳನ್ನು ಹೀರಿಕೊಳ್ಳಲು ಕಷ್ಟವಾಗುತ್ತಿರುವ ವ್ಯಕ್ತಿಗಳಲ್ಲಿ ಕುಪೋಷಣೆಯನ್ನು ತಡೆಗಟ್ಟಲು ನೆರವಾಗುತ್ತದೆ.” ಎಂದು ಎತ್ತಿ ಹೇಳಿದರು.
ಪೋಷಣೆ ಮತ್ತು ವಿಕಸನಗೊಳ್ಳುತ್ತಿರುವ ಪೌಷ್ಟಿಕಾಂಶ ಅವಶ್ಯಕತೆಗಳನ್ನು ಅರ್ಥಮಾಡಿಕೊಳ್ಳುವುದು ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಒಳ್ಳೆಯ ಪೋಷಣೆ ಅತ್ಯಾವಶ್ಯಕ. ಈ ಪದವನ್ನು ಬಹಳ ವ್ಯಾಪಕವಾಗಿ ಗುರುತಿಸ ಲಾಗಿದ್ದರೂ, ಅನೇಕ ವೇಳೆ, ಇದರ ನಿಜವಾದ ಅರ್ಥ ಅಸ್ಪಷ್ಟವಾಗಿಯೇ ಇರುತ್ತದೆ. ಸದಾ ಬೆಳೆಯುತ್ತಿರುವ ಸಂಶೋಧನೆ ಮತ್ತು ವೀಗನ್, ಪೇಲಿಯೊ, ಗ್ಲುಟೆನ್-ಮುಕ್ತ, ಹಾಗೂ ಕೀಟೋದಂತಹ ಸುಪ್ರಸಿದ್ಧ ಆಹಾರಕ್ರಮಗಳು ಹೆಚ್ಚಾಗುತ್ತಿರುವಂತಹ ಸಂದರ್ಭದಲ್ಲಿ, ಸರಿಯಾದ ಆಹಾರ ಆಯ್ಕೆಗಳು ತಬ್ಬಿಬ್ಬುಗೊಳಿಸಬಹುದು. ಆದಾಗ್ಯೂ, ಎಲ್ಲಾ ಅಧ್ಯಯನಗಳಾದ್ಯಂತ ಒಂದು ವಿಷಯ ಸತತವಾಗಿ ಸಾಬೀತಾಗಿದೆ: ಸಮತೋಲನ ಆಹಾರ ಕ್ರಮವು, ಕುಟುಂಬಗಳ ಆರೋಗ್ಯ ಮತ್ತು ಸ್ವಾಸ್ಥ್ಯವನ್ನು ಗಣನೀಯವಾಗಿ ಹೆಚ್ಚಿಸುವ ಶಕ್ತಿಯನ್ನು ಹೊಂದಿದೆ ಎಂಬುದು.
ಜನರು ಜೀವನದ ವಿವಿಧ ಹಂತಗಳಲ್ಲಿ ಪ್ರಗತಿ ಹೊಂದುತ್ತಿದ್ದಂತೆ, ಅವರ ಪೋಷಕಾಂಶ ಅಗತ್ಯಗಳೂ ವಿಕಸನ ಗೊಳ್ಳುತ್ತವೆ. ಉದಾಹರಣೆಗೆ, ಬೆಳವಣಿಗೆಗಾಗಿ ಮಕ್ಕಳಿಗೆ ಕೆಲವು ರೀತಿಯ ಪೊಷಕಾಂಶಗಳ ಅಗತ್ಯ ಹೆಚ್ಚಾಗಅರೆ, ವಯಸ್ಕರು ಸ್ನಾಯುಸಾಂದ್ರತೆ ಮತ್ತು ಮೂಳೆಯ ಸಾಂದ್ರತೆಯನ್ನು ಕಾಪಾಡಿಕೊಳ್ಳುವುದರ ಮೇಲೆ ಗಮನ ಕೇಂದ್ರೀಕರಿಸಬೇಕಾಗುತ್ತದೆ. ಮತ್ತೆ, ಹಿರಿಯ ವಯಸ್ಕರಿಗೆ, ಸ್ನಾಯು ನಷ್ಟ ತಪ್ಪಿಸಲು ಮತ್ತು ಪ್ರಜ್ಞೆಯ ಕಾರ್ಯಾ ಚರಣೆಗೆ ಬೆಂಬಲ ಒದಗಿಸಲು ಹೆಚ್ಚು ಪ್ರೋಟೀನ್ ಮತ್ತು ವಿಟಮಿನ್ ಡಿ ಹಾಗೂ ಬಿ12ನಂತಹ ಹೆಚ್ಚುವರಿ ವಿಟಮಿನ್‌ಗಳು ಅಗತ್ಯವಾಗುತ್ತದೆ.
ವಯಸ್ಕರ ಆಹಾರಕ್ರಮದಲ್ಲಿ Ensureನಂತಹ ಉತ್ಪನ್ನಗಳನ್ನು ಅಳವಡಿಸಿ ಕೊಳ್ಳುವುದರಿಂದ ಪೌಷ್ಟಿಕಾಂಶ ಅಂತರಗಳನ್ನು ಕಡಿಮೆ ಮಾಡಿ, ಒಟ್ಟಾರೆ ಆರೋಗ್ಯಕ್ಕೆ ಬೆಂಬಲ ಒದಗಿಸುವ ಅತ್ಯಾವಶ್ಯಕ ಪೋಷಕಾಂಶಗಳ ಸಮತೋಲನದ ಮೂಲ ಒದಗಿಸುವುದಕ್ಕೂ ನೆರವಾಗುತ್ತದೆ.[i] ಒಬ್ಬ ವ್ಯಕ್ತಿಯ ನಿರ್ದಿಷ್ಟ ಆರೋಗ್ಯ ಅವಶ್ಯ ಕತೆಗಳನ್ನು ಪೂರೈಸುವ ಆಹಾರಕ್ರಮ ಆಯ್ಕೆಗಳನ್ನು ನಿಗದಿಪಡಿಸುವುದಕ್ಕಾಗಿ ಈ ಬದಲಾವಣೆಗಳನ್ನು ಗುರುತಿಸುವುದು ಬಹಳ ಮುಖ್ಯ.[ii]
ಗರಿಷ್ಟ ಆರೋಗ್ಯವನ್ನು ಕಾಪಾಡಿಕೊಳ್ಳಲು, ನಿಮ್ಮ ಆಹಾರಕ್ರಮವು ಸಮತೋಲನವಾಗಿದ್ದು ವಿವಿಧ ರೀತಿಯ ಅತ್ಯಾವಶ್ಯಕ ಪೋಷಕಾಂಶಗಳು ಒಳಗೊಂಡಿರುವುದನ್ನು ಖಾತರಿಪಡಿಸುವುದು ಬಹಳ ಮುಖ್ಯ. ಒಬ್ಬ ವಯಸ್ಕ ಆಹಾರಕ್ರಮದಲ್ಲಿ ಅಳವಡಿಸಿಕೊಳ್ಳಬೇಕಾದ ಕೆಲವು ಪ್ರಮುಖ ಪೋಷಕಾಂಶಗಳು ಹೀಗಿವೆ:
• ಪ್ರೋಟೀನ್: ಇದು ಸ್ನಾಯುವಿನ ರಿಪೇರಿ ಮತ್ತು ಬೆಳವಣಿಗೆಗೆ ಬೆಂಬಲ ಒದಗಿಸುತ್ತದೆ ಮತ್ತು ಇದನ್ನು ಬೇಳೆಗಳು, ಕಡಲೆಕಾಳು, ರಾಜ್ಮ, ಪನ್ನೀರ್, ಮೊಟ್ಟೆ ಮತ್ತು ಕೋಳಿ ಮುಂತಾದ ಮೂಲಗಳಿಂದ ಪಡೆದುಕೊಳ್ಳಬಹುದು.
• ಶರ್ಕರಪಿಷ್ಟಗಳು(ಕಾರ್ಬೊಹೈಡ್ರೇಟ್ಸ್): ದೇಹದ ಪ್ರಾಥಮಿಕ ಶಕ್ತಿಯ ಮೂಲವಾದ ಇದು ಸಾಮಾನ್ಯವಾಗಿ ಅಕ್ಕಿ, ಇಡೀ ಗೋಧಿ ರೊಟ್ಟಿ, ಓಟ್ಸ್, ಅವಲಕ್ಕಿ ಮತ್ತು ಸಿಹಿಗೆಣಸಿನಲ್ಲಿ ಸಿಗುತ್ತದೆ.
• ಒಮೆಗಾ-3 ಫ್ಯಾಟಿ ಆಮ್ಲಗಳು : ಇದು ಹೃದಯದ ಆರೋಗ್ಯಕ್ಕೆ ಬೆಂಬಲ ನೀಡಿ, ಉರಿಯೂತ ಕಡಿಮೆ ಮಾಡಲು ನೆರವಾಗುತ್ತದೆ ಮತ್ತು ಇದನ್ನು ಅಗಸೆಬೀಜ, ಅಕ್ರೂಟು(ವಾಲ್ನಟ್) ಸಾಸಿವೆ ಎಣ್ಣೆ ಮತ್ತು ಬಾಂಗ್ಡಾದಂತಹ ಭಾರತೀಯ ಮ್ಯಾಕೆರೆಲ್ ಅಥವಾ ರೋಹು ಮುಂತಾದ ಮೀನಿನಲ್ಲಿ ಕಾಣಬಹುದು.
• ನಾರು: ನಾರು ಜೀರ್ಣಕ್ಕೆ ಬೆಂಬಲ ಕೊಡುತ್ತದೆ ಮತ್ತು ಆರೋಗ್ಯಕರವಾದ ತೂಕ ಕಾಪಾಡಿಕೊಳ್ಳಲು ನೆರವಾಗುತ್ತ ದೆ. ಇದನ್ನು ಕಂದು ಅಕ್ಕಿ ಮತ್ತು ಸಿರಿಧಾನ್ಯಗಳಂತಹ ಸಂಪೂರ್ಣ ಧಾನ್ಯಗಳು, ಸೀಬೆ, ಸೇಬು ಮುಂತಾದ ಹಣ್ಣುಗಳು ಸ್ಪಿನಾಚ್, ಬ್ರೊಕೊಲಿ ಮತ್ತು ಇಸಬ್ಗೋಲ್‌ನಂತಹ ತರಕಾರಿಗಳಿಂದ ಪಡೆದುಕೊಳ್ಳಬಹುದು.
• ವಿಟಮಿನ್‌ಗಳು:
ವಿಟಮಿನ್ D: ಮೂಳೆಯ ಆರೋಗ್ಯಕ್ಕಾಗಿ ಕ್ಯಾಲ್ಶಿಯಮ್ ಹೀರಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ ಮತ್ತು ಇದನ್ನು ಫೋರ್ಟೀಫೈಡ್ ಹಾಲು, ಮೊಸಲು ಮತ್ತು ಸೂರ್ಯನಬೆಳಕಿಗೆ ತೆರೆದುಕೊಳ್ಳುವುದರಿಂದ ಪಡೆದುಕೊಳ್ಳಬಹುದು.
ವಿಟಮಿನ್ E: ಆಂಟಿಆಕ್ಸಿಡೆಂಟ್ ಆಗಿ ಕೆಲಸಮಾಡಿ, ಜೀವಕೋಶಗಳು ಹಾನಿಯೊಳಗಾಗುವುದನ್ನು ತಡೆಗಟ್ಟುತ್ತದೆ. ಬಾದಾಮಿ, ಸೂರ್ಯಕಾಂತಿ ಬೀಜಗಳು ಮತ್ತು ಸಾಸಿವೆ ಎಲೆಗಳಲ್ಲಿ ಸಿಗುತ್ತದೆ.
ವಿಟಮಿನ್ C: ನಿರೋಧಕಶಕ್ತಿಯ ಕಾರ್ಯಾಚರಣೆ ಮತ್ತು ಚರ್ಮದ ಆರೋಗ್ಯಕ್ಕೆ ಅತ್ಯಾವಶ್ಯಕ. ಕಿತ್ತಳೆ ಮತ್ತು ನಿಂಬೆಗಳು, ನೆಲ್ಲಿಕಾಯಿ ಮತ್ತು ಸೀಬೆಯಂತಹ ಹುಳಿಯಂಶ(ಸಿಟ್ರಸ್) ಹಣ್ಣುಗಳಲ್ಲಿ ಸಿಗುತ್ತದೆ.
ವಿಟಮಿನ್ B6: ಮೆದುಳಿನ ಆರೋಗ್ಯ ಮತ್ತು ಮೆಟಬಾಲಿಸಮ್(ಜೀರ್ಣಶಕ್ತಿ ಕಾರ್ಯಾಚರಣೆ)ಗೆ ಬಹಳ ಮುಖ್ಯ, ಬಾಳೆಹಣ್ಣು, ಆಲೂಗಡ್ಡೆ ಮತ್ತು ಸೂರ್ಯಕಾಂತಿ ಬೀಜಗಳಲ್ಲಿ ಇರುತ್ತದೆ.
ವಿಟಮಿನ್ B12: ನರಗಳ ಕಾರ್ಯಾಚರಣೆ ಮತ್ತು ಕೆಂಪು ರಕ್ತಕಣಗಳ ಉತ್ಪತ್ತಿಗೆ ಅತ್ಯಾವಶ್ಯಕ. ಡೈರಿ ಉತ್ಪನ್ನಗಳು, ಮೊಟ್ಟೆ, ಮೀನು ಮತ್ತು ಫೋರ್ಟೀಪೈಡ್ ಧಾನ್ಯಗಳಲ್ಲಿ ಇರುತ್ತದೆ.
• ಖನಿಜಗಳು:
o ಕ್ಯಾಲ್ಶಿಯಮ್: ಮೂಳೆಯ ಆರೋಗ್ಯಕ್ಕೆ ಬಹಳ ಮುಖ್ಯ, ಹಾಲು, ಮೊಸರು, ರಾಗಿ ಮತ್ತು ಎಳ್ಳಿನ ಬೀಜಗಳಲ್ಲಿ ಕಂಡುಬರುತ್ತದೆ.
o ಕಬ್ಬಿಣ: ಮೆಟಾಬೊಲಿಕ್ ಪ್ರಕ್ರಿಯೆಗೆ ನೆರವಾಗುತ್ತದೆ ಮತ್ತು ಸ್ಪಿನಾಚ್(ಪಾಲಕ್) ಮೆಂತ್ಯ ಸೊಪ್ಪು, ಬೆಲ್ಲ, ಮತ್ತು ಬೇಳೆಗಳಲ್ಲಿ ಕಂದುಬರುತ್ತದೆ.
o ಸತು: ನಿರೋಧಕಶಕ್ತಿಯ ಕಾರ್ಯಾಚರಣೆ ಮತ್ತು ಗಾಯ ಮಾಗುವಿಕೆಗೆ ನೆರವಾಗುತ್ತದೆ. ಸಿಹಿಕುಂಬಳಕಾಯಿ ಬೀಜಗಳು, ಕಡಲೆ ಮತ್ತು ಬಾಜ್ರ(ಸಜ್ಜೆ)ದಂತಹ ಸಂಪುರ್ಣ ಧಾನ್ಯಗಳಲ್ಲಿ ಇರುತ್ತದೆ. [iii]
ಪ್ರತಿಯೊಂದು ಪೋಷಕಾಂಶವೂ ಆರೋಗ್ಯವನ್ನು ಕಾಪಾಡುವಲ್ಲಿ ಒಂದು ನಿರ್ದಿಷ್ಟ ಪಾತ್ರ ವಹಿಸುತ್ತದೆ. ಆದ್ದರಿಂದಲೇ, ಇಂತಹ ಅಂಶಗಳಲ್ಲಿ ಸಮೃದ್ಧವಾದ ಆಹಾರವನ್ನು ಸೇವಿಸುವುದು ಬಹಳ ಮುಖ್ಯ
ದಿನನಿತ್ಯದ ಆಹಾರದತ್ತ ಒಂದು ನೋಟ
ಒಂದು ಸುಪ್ರಸಿದ್ಧ ಮಾತು ಹೀಗಿದೆ: ರಾಜನಂತೆ ಉಪಾಹಾರ ತಿನ್ನಿ, ರಾಜಕುಮಾರನಂತೆ ಭೋಜನ ಮಾಡಿ, ಮತ್ತು ಒಬ್ಬ ಪಾಪರ್ ನಂತೆ ರಾತ್ರಿಯೂಟ ಮಾಡಿ”. ಪ್ರೋಟಿನ್‌ಗಳು ಮತ್ತು ಕೊಬ್ಬುಗಳನ್ನು ಜೀರ್ಣಿಸಿಕೊಳ್ಳುವುದು ಕಾರ್ಬೊಹೈಡ್ರೇಟ್‌ಗಳನ್ನು ಜೀರ್ಣಿಸಿಕೊಳ್ಳುವುದಕ್ಕಿಂತ ಕಠಿಣವಾದುದರಿಂದ ಅವುಗಳನ್ನು ಉಪಾಹಾರ ಮತ್ತು ಮಧ್ಯಾಹ್ನದ ಊಟದಲ್ಲಿ ತಿನ್ನಬೇಕು. ಸಂಜೆಯ ನಂತರ ಜೀರ್ಣಕ್ರಿಯೆ ಕಾರ್ಯಾಚರಣೆ ನಿಧಾನವಾಗುವುದರಿಂದ ರಾತ್ರಿಯೂಟ ಅತ್ಯಂತ ಹಗುರವಾಗಿರಬೇಕು. ರಾತ್ರಿಯಿಡೀ ಉಪವಾಸ ಮಾಡಿದ ನಂತರ ತಿನ್ನುವ ಭಾರೀ ಊಟ ಉಪಾಹಾರವು, ವಿಷವಸ್ತುಗಳನ್ನು ತೊಡೆದುಹಾಕುವ ಸಲುವಾಗಿ ಬೆಚ್ಚನೆಯ ನೀರಿನೊಂದಿಗೆ ಆರಂಭವಾಗಬೇಕು. ಅವಲಕ್ಕಿ, ಉಪ್ಪಿಟ್ಟು, ದೋಸೆ, ಇಡ್ಲಿ, ಧಾನ್ಯಗಳಿಂದ ತಯಾರಿಸಿದ ದೋಸೆಯಂತಹ ಶಕ್ತಿ-ಸಮೃದ್ಧವಾದ ಶರ್ಕರಪಿಷ್ಟಗಳನ್ನು ಸೇರಿಸಿ. ಅವುಗಳೊಂದಿಗೆ ಋತುಮಾನಿಕ ತರಕಾರಿಗಳು ಸೇರಿಸಿ. ಹೆಚ್ಚಿನ ಪೋಷಣೆಗಾಗಿ, ಹಣ್ಣು ಅಥವಾ ಒಂದು ಲೋಟ ಹಾಲು ಸೇವಿಸಬಹುದು. ಎರಡನೇ ಮುಖ್ಯ ಊಟವಾದ ಮಧ್ಯಾಹ್ನದ ಊಟವು, ಅತ್ಯಾವಶ್ಯಕ ವಿಟಮಿನ್‌ಗಳಿರುವ ಮುಖ್ಯ ಭೋಜನಕ್ಕೆ ಮುನ್ನ, ಸಲಾಡ್ ಮುಂತಾದ ಪ್ರಕ್ರಿಯೆಗೊಳಪಡದ ಆಹಾರಗಳಿಂದ ತುಂಬಿರಬೇಕು. ರೊಟ್ಟಿ ಮತ್ತು ಪಲ್ಯ ಅಥವಾ ಖಿಚಡಿಯಂತಹ ಸಮತೋಲನದ ಆಹಾರಗಳು ಹಗುರವಾದ ಮತ್ತು ಜೀರ್ಣಿಸಿಕೊಳ್ಳಲು ಸುಲಭವಾದ ರಾತ್ರಿಯೂಟಕ್ಕೆ ಸೂಕ್ತವಾಗಿವೆ.
ಈ ಮುಖ್ಯ ಆಹಾರಗಳ ಜೊತೆಗೆ, ಒಂದು ಲೋಟ Ensureನಂತಹ ಚಿಕ್ಕ ಪೋಷಣೆ-ಸಮೃದ್ಧವಾದ ತಿನಿಸುಗಳನ್ನು ಅಳವಡಿಸಿಕೊಂಡರೆ, ಇಡೀ ದಿನ ಹಸಿವಾಗದೆ ಇದ್ದು ಶಕ್ತಿಯ ಮಟ್ಟಗಳೂ ಕಾಪಾಡಿಕೊಳ್ಳಲ್ಪಡುತ್ತವೆ.[iv]
2025 ರಲ್ಲಿ ದೊಡ್ಡ ಆರೋಗ್ಯ ಗೆಲುವುಗಳಿಗೆ ಚಿಕ್ಕ ಹೆಜ್ಜೆಗಳು
ಸಣ್ಣ ಸಣ್ನ ಬದಲಾವಣೆಗಳು, ಒಟ್ಟಾರೆ ಆರೋಗ್ಯದಲ್ಲಿ ಗಣನೀಯವಾದ ಸುಧಾರಣೆ ತರಬಲ್ಲವು, ಹೆಚ್ಚು ಸಂಪುರ್ಣ ಆಹಾರಗಳನ್ನು ಸೇವಿಸುವುದು, ಪ್ರಾಸೆಸ್ಡ್(ಪ್ರಕ್ರಿಯೆಗೊಳಪಡಿಸಿದ) ಆಹಾರಗಳನ್ನು ಕಡಿಮೆ ಮಾಡುವುದು ಮತ್ತು ಜಲೀಕರಣ ಕಾಪಾಡಿಕೊಳ್ಳುವುದು ಅದ್ಭುತವಾದ ಆರಂಭಿಕ ಅಂಶಗಳು, ಸರಿಯಾದ ಪೋಷಣೆಯ ಜೊತೆಜೊತೆಗೆ, ನಿಯಮಿತವಾದ ದೈಹಿಕ ಚಟುವಟಿಕೆ ಕೂಡ ಸ್ನಾಯುವಿನ ಮತ್ತು ಮೂಳೆಯ ಸಾಂದ್ರತೆ ಕಾಪಾಡಿಕೊಳ್ಳುವುದಕ್ಕೆ ಬಹಳ ಮುಖ್ಯ. ಕನಿಷ್ಟ ವಾರಕ್ಕೆ ಎರಡು ಬಾರಿ ಬಲನೀಡುವ ವ್ಯಾಯಾಮಗಳನ್ನು ಸೇರಿಸಿಕೊಳ್ಳುವುದರಿಂದ ಸ್ನಾಯುವಿನ ಬಲ ಹೆಚ್ಚಾಗಿ, ಸಮತೋಲನ ಸುಧಾರಿಸಿ, ಮೆಟಾಬೊಲಿಕ್ ಆರೋಗ್ಯಕ್ಕೆ ಬೆಂಬಲ ಸಿಗುತ್ತದೆ. ನಡಿಗೆ, ಈಜು, ಯೋಗ, ಮುಂತಾದ ಚಟುವಟಿಕೆಗಳೂ ಕೂಡ ಒಟ್ಟಾರೆ ಸ್ವಾಸ್ಥ್ಯದ ಮೇಲೆ ಧನಾತ್ಮಕ ಪ್ರಭಾವ ಬೀರಬಲ್ಲವು.[v]
ನಾವು 2025ಗೆ ಕಾಲಿರಿಸುತ್ತಿದ್ದಂತೆ, ಆಹಾರ ಅಥವಾ ಪೂರಕಾಹಾರಗಳ ಮೂಲಕ ಆಹಾರಕ್ರಮದ ಅಂತರಗಳನ್ನು ಕಡಿಮೆ ಮಾಡಿ, ಇನ್ನೂ ಹೆಚ್ಚು ಸಂಪೂರ್ಣವಾದ, ಆರೋಗ್ಯಕರವಾದ ಜೀವನವನ್ನು ನಡೆಸಲು ನೆರವಾಗುವ ಅಂಶಗಳ ಮೇಲೆ ಗಮನ ಕೇಂದ್ರೀಕರಿಸೋಣ. ನಿಮ್ಮ ದೇಹಕ್ಕೆ ಪೋಷಣೆ ನೀಡುವ ಅರ್ಥಪೂರ್ಣ ಬದಲಾವಣೆಗಳನ್ನು ಕೈಗೊಳ್ಳುವುದಕ್ಕೆ, ಕ್ರಿಯಾಶೀಲವಾಗಿರುವುದಕ್ಕೆ ಮತ್ತು ಧನಾತ್ಮಕ ಮನೋಭಾವ ಬೆಳೆಸಿಕೊಳ್ಳುವುದಕ್ಕೆ ಈ ಅವಕಾಶವನ್ನು ಬಳಸಿಕೊಳ್ಳಿ. ಈ ಗುರಿಗಳಿಗೆ ಬದ್ಧರಾಗಿರುವ ಮೂಲಕ ನಾವು ಹೆಚ್ಚು ಆರೋಗ್ಯಕರವಾದ ಸಂತೋಷದ ವರ್ಷಕ್ಕಾಗಿ ಒಂದು ವೇದಿಕೆಯನ್ನು ಸಂಘಟಿತವಾಗಿ ಸ್ಥಾಪಿಸಬಹುದು.