Sunday, 11th May 2025

ಶಿವಕುಮಾರ್ ಕಲ್ಲಳ್ಳಿ ಅಧ್ಯಕ್ಷರಾಗಿ, ಉಪಾಧ್ಯಕ್ಷ ಸ್ಥಾನಕ್ಕೆ ಗೋವಿಂದಯ್ಯ ಅವಿರೋಧ ಆಯ್ಕೆ

ಗುಬ್ಬಿ : ತಾಲ್ಲೂಕಿನ ಸಿ ಎಸ್ ಪುರ ಹೋಬಳಿಯ ಕಲ್ಲೂರು ಗ್ರಾಮದ  ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ನೆಡೆದ ಚುನಾವಣೆಯಲ್ಲಿ ಶಿವಕುಮಾರ್ ಕಲ್ಲಳ್ಳಿ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಗೋವಿಂದಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ನೂತನ ಅಧ್ಯಕ್ಷ  ಶಿವಕುಮಾರ್  ಮಾತನಾಡಿ  ಎಲ್ಲ ಸದಸ್ಯರ ಸಹಕಾರದೊಂದಿಗೆ ನನ್ನ ಕಾಲಾವಧಿಯೊಳಗೆ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಕಟ್ಟಡ ರೈತರಿಗೆ ಸಾಲದ ಸಹಕಾರ  ಜೊತೆಗೆ ಮತ್ತಷ್ಟು ವ್ಯವಹಾರವನ್ನ ವಿಸ್ತರಿಸಿ ಮುನ್ನಡೆಸಿಕೊಂಡು ಹೋಗಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಮೇಗೌಡ, ಕರಿಯಪ್ಪ, ಬಸವರಾಜು,  ಸಿದ್ದರಾಮಯ್ಯ, ಮೂರ್ತ ಣ್ಣ, ಕಮಲಮ್ಮ,ಉಮೇಶ್, ಚಿಕ್ಕ ರಾಜು,ಯೂಸೆಫ್, ಭಾರತಿ  ಸುರೇಶ್ ಭಾಗ್ಯಮ್ಮ ಅಜರತ್ ಹಾಲಿ  ರಮೇಶ್ ಗಿರೀಶ್ ಇತರರು ಹಾಜರಿದ್ದರು.