Sunday, 11th May 2025

ಕಾರ್ಯಕರ್ತರು ಧೃತಿಗೆಡದೆ ಪಕ್ಷವನ್ನು ಸದೃಢಗೊಳಿಸಲು ಮುಂದಾಗಿ

ಗುಬ್ಬಿ : ಸೋಲು ಗೆಲುವು ಸಹಜ ನಿಷ್ಠಾವಂತ ಕಾರ್ಯಕರ್ತರು ಧೃತಿಗೆಡದೆ ಪಕ್ಷವನ್ನು ಸದೃಢಗೊಳಿಸಲು ಮುಂದಾಗಿ  ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ಎಸ್.ಡಿ.ದಿಲೀಪ್ ಕುಮಾರ್ ತಿಳಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು ನನ್ನ ಜೊತೆ  ಹಗಲಿರುಳು ಶ್ರಮಿಸುವ ಮೂಲಕ ದೊಡ್ಡ ಮಟ್ಟದ ಪೈಪೋಟಿಗೆ ಕಾರಣರಾದ   ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರಿಗೆ, ಎಲ್ಲಾ ಕೋಮಿನ ಮುಖಂಡ ರುಗಳಿಗೆ ಹಾಗೂ ಪ್ರತ್ಯಕ್ಷವಾಗಿ ಪರೋಕ್ಷವಾಗಿ  ಸಹಕರಿಸಿದ ಎಲ್ಲಾ ನನ್ನ ಆತ್ಮೀಯರಿಗೂ  ಕೃತಜ್ಞತೆ ಸಲ್ಲಿಸು ತ್ತೇನೆ.
ಯಾರು ಸಹ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ. ಮುಂಬರುವ  ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯನ್ನು ಎದುರಿಸಲು ಸಿದ್ದರಾಗಬೇಕು. ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಾ  ಪಕ್ಷ ಸಂಘಟನೆಗೆ  ಒತ್ತು ನೀಡುತ್ತೇನೆ. ತಾಲೂಕಿನ ಜನತೆ  52,000 ಮತಗಳನ್ನು ನೀಡುವ ಮೂಲಕ ತೀವ್ರ ಪೈಪೋಟಿ ನೀಡಲು ಸಹಕಾರ ನೀಡಿದ್ದಾರೆ .   ಕೃತಜ್ಞತೆ ಸಲ್ಲಿಸುವ ಮೂಲಕ ಜನರ ತೀರ್ಪಿಗೆ ತಲೆಬಾಗುತ್ತೇನೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಅಧ್ಯಕ್ಷ ಬಿ.ಎಸ್.ಪಂಚಾಕ್ಷರಿ,  ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಟಿ.ಭೈರಪ್ಪ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಯತೀಶ್, ಸಾಗರನಹಳ್ಳಿ ನಂಜೇಗೌಡ, ಪಪಂ ಸದಸ್ಯರಾದ ಜಿ.ಸಿ.ಕೃಷ್ಣಮೂರ್ತಿ, ಶಶಿಕುಮಾರ್, ಮುಖಂಡರಾದ ಸಿ.ಎಂ.ಹಿತೇಶ್, ನಾಗೇಂದ್ರಪ್ಪ, ಬಿ.ಲೋಕೇಶ್, ಎನ್.ಲಕ್ಷ್ಮೀರಂಗಯ್ಯ, ಕುಮಾರ್, ಶ್ರೀಧರ್ ಇತರರು ಇದ್ದರು.