Saturday, 10th May 2025

ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯಕ್ಕೆ ಅಪಸ್ವರ

ಚಿಕ್ಕನಾಯಕನಹಳ್ಳಿ : ತುಮಕೂರು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್ ಗ್ರಾಮ ವಾಸ್ತವ್ಯದ ಬಗ್ಗೆ ಗ್ರಾ.ಪ ಸದಸ್ಯ ರವಿ ಹಾಗು ಆ ಭಾಗದ ಜನತೆ ಅಪಸ್ವರ ಎತ್ತುತ್ತಿದ್ದಾರೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ದುಗುಡಿಹಳ್ಳಿ ಗ್ರಾ.ಪಂ ವ್ಯಾಪ್ತಿಯ ಚುಂಗನಹಳ್ಳಿ, ತಿತ್ತಿಗೊರವನಪಾಳ್ಯ, ಗಂಟಿಗನ ಪಾಳ್ಯದ ಗ್ರಾಮಸ್ಥರಿಗೆ ಮೂಲಭೂತ ಸೌಕರ್ಯ, ಸಂಪರ್ಕ ರಸ್ತೆ, ಇಲ್ಲದೆ ಅನೇಕ ಕುಟುಂಬಗಳು ಇಂದಿಗೂ ವಾಸ ಮಾಡುತ್ತಿವೆ. ಶಿಥಿಲ ಗೊಂಡಿರುವ ಅಂಗನವಾಡಿ ಕೇಂದ್ರವನ್ನು ಹೊಸದಾಗಿ ನಿರ್ಮಿಸಿ, ತಿತ್ತಿಗೊರವನಪಾಳ್ಯ ಊರಿನ ಹೆಸರನ್ನು ಶ್ರೀ ಮೈಲಾರಪುರ ಎಂದು ಬದಲಾಯಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಜಿಲ್ಲಾಧಿಕಾರಿ ಪಾಟೀಲ್ ಅವರು ಎಲ್ಲ ಸೌಕರ್ಯ ಇರುವ ಕಡೆ ಗ್ರಾಮ ವಾಸ್ತವ್ಯ ಮಾಡು ವುದು ಸರಿಯಲ್ಲ ಬಡವರ ಮನೆಯಲ್ಲೂ ವಾಸ್ತವ್ಯ ಹೂಡಿ ನಮ್ಮ ಕಷ್ಟ ಅರ್ಥವಾಗು ತ್ತದೆ.

ಸಮಸ್ಯೆ ಇಲ್ಲದ ಕಡೆ ವಾಸ್ತವ್ಯ ಹೂಡಿ ಪ್ರಚಾರ ಪಡೆಯುವದರ ಬದಲು ನಮ್ಮ ಗ್ರಾಮಕ್ಕೆ ಬಂದು ವಾಸ್ತವ್ಯ ಹೂಡಲಿ. ಮೇಲಿನ ಸಮಸ್ಯೆ ಬಗೆಹರಿಯದಿದ್ದರೆ ಪ್ರಧಾನಮಂತ್ರಿಗಳಿಗೆ ಪತ್ರ ಬರೆಯುವುದಾಗಿ ಗ್ರಾ.ಪಂ ಸದಸ್ಯ ರವಿ ಎಚ್ಚರಿಕೆ ನೀಡಿದ್ದಾರೆ.