Sunday, 11th May 2025

Ganesh Festival Celebration: ನಾಡಿನಲ್ಲೆಡೆ ಗೌರಿ ಗಣೇಶ ಹಬ್ಬದ ಸಡಗರ ಸಂಭ್ರಮ ಆಚರಣೆ

ಕೊರಟಗೆರೆ: ನಾಡಿನ ಪ್ರತಿ ಗ್ರಾಮದಲ್ಲೂ ಗಣೇಶ ಮೂರ್ತಿಯನ್ನು ಕೂರಿಸಿ ಪೂಜಾ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು.

ಕೊರಟಗೆರೆ ಪಟ್ಟಣದ ಸತ್ಯ ಗಣಪತಿ ಹಾಗೂ ಕಟ್ಟೆ ಗಣಪತಿ ಅದ್ದೂರಿಯಾಗಿ ಪ್ರತಿಷ್ಠಾಪನೆಗೊಂಡಿತು. ಕಟ್ಟೆ ಗಣಪತಿಯ ಸನ್ನಿಧಾನದಲ್ಲಿ 16ನೇ ವರ್ಷದ ವಿಶೇಷವಾಗಿ ಅಮರನಾಥೇಶ್ವರನ ರೂಪದಲ್ಲಿ ಗಣಪತಿಯ ಪ್ರತಿ ಷ್ಠಾಪನೆಯಾಯಿತು.

ಪಟ್ಟಣದ ಸತ್ಯ ಗಣಪತಿ ಸಮಿತಿ ವತಿಯಿಂದ 65ನೇ ವರ್ಷದ ವೈಭವದ ಗಣಪತಿಯ ಪ್ರತಿಷ್ಠಾಪನೆಯಾಯಿತು.

ಕೊರಟಗೆರೆ ಪಟ್ಟಣದಲ್ಲಿ ಈ ಬಾರಿ ದಸರಾ ಉತ್ಸವದ ಹಾಗೆ ಗಣಪತಿಗಳ ವಿಸರ್ಜನಾ ಕಾರ್ಯಕ್ರಮ ನಡೆಯಿತು.

250ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳ ನಿಯೋಜನೆಯಲ್ಲಿ ವಿವಿಧ ವಾದ್ಯಗೋಷ್ಠಿಗಳೊಂದಿಗೆ ಗಣಪತಿ ಹಬ್ಬದಿಂದ 12 ದಿನಗಳ ಕಾಲ ವಿಶೇಷ ಪೂಜೆಗಳನ್ನು ನೆರವೇರಿಸಿದರು.

ಪಟ್ಟಣದಲ್ಲಿ ಸ್ಥಾಪಿಸಿರುವ ಎಲ್ಲಾ ಗಣಪತಿ ಮೂರ್ತಿಗಳ ವಿಶೇಷ ಮೆರವಣಿಗೆಯೊಂದಿಗೆ ಪಟ್ಟಣದ ಪೊಲೀಸ್ ಅಧಿಕಾರಿಗಳು, ಗಣ್ಯಾತಿಗಣ್ಯರ, ಸಾವಿರಾರು ಭಕ್ತಾದಿಗಳ ಜೊತೆಗೂಡಿ, ಪಟ್ಟಣದ ಜನತೆ ಅದ್ದೂರಿ ವಿಸರ್ಜನೆ ಮಾಡಲು ತೀರ್ಮಾನಿಸಿದರು.

ಸಮಸ್ತ ನಾಡಿನ ಜನತೆಗೆ ಕಟ್ಟೆ ಗಣಪತಿ ಹಾಗೂ ಸತ್ಯ ಗಣಪತಿ ಯುವಕ ಮಂಡಳಿ ವತಿಯಿಂದ ಗೌರಿ ಗಣೇಶ ಹಬ್ಬದ ಶುಭಾಶಯಗಳು ಪಟ್ಟಣದ ಗಣಪತಿ ಯುವಕ ಮಂಡಳಿಯ ಯುವಕರು ತಿಳಿಸಿದರು.

Leave a Reply

Your email address will not be published. Required fields are marked *