Saturday, 10th May 2025

ಹಗಲಲ್ಲೇ ಮನೆಗೆ ಕನ್ನ ಹಾಕಿದ ಖದೀಮರು!

-5 ಲಕ್ಷ ನಗದು, 250 ಗ್ರಾಂ ಚಿನ್ನಾಭರಣ ದೋಚಿ ಪರಾರಿ
ಗದಗ: ಎಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ. ಮನೆಯವರೆಲ್ಲ ಧ್ವಜಾ ರೋಹಣದ ಸಡಗರದಲ್ಲಿದ್ದಾಗ ಹಿಂಬಾಗಿಲಿನ ಚಿಲಕ ಮುರಿದು 5 ಲಕ್ಷ ನಗದು, 250 ಗ್ರಾಂ ಚಿನ್ನಾಭರಣ ಕಳ್ಳತನವಾದ ಘಟನೆ ಸೋಮವಾರ ಬೆಳಗ್ಗೆ ನಗರದ ಹುಡ್ಕೋ ಮೂರನೇ ಕ್ರಾಸ್‌ನಲ್ಲಿ ನಡೆದಿದೆ.
ಮಾಗಡಿ ಬಳಿಯ ಪರಸಾಪುರದ ಬಸವರಾಜ ರಾಯಪುರ ಎಂಬುವವರು ಶ್ರೀದೇವಿ ಸ್ಟೋನ್ ಕ್ರಸರ್‌ನ ಮಾಲಕರಾಗಿದ್ದು, ಹುಡ್ಕೋ ಮೂರನೇ ಕ್ರಾಸ್‌ನ ಮನೆಯಲ್ಲಿ ವಾಸವಾಗಿದ್ದರು. ಖದೀಮರು ವಿಗ್ ಧರಿಸಿ ಸ್ವಿಫ್ಟ್ ಕಾರಿನಿಂದ ಇಳಿದು ಮನೆಯ ಹಿಂಭಾಗಕ್ಕೆ ಹೋಗುವ ದೃಶ್ಯಗಳು, ಕಳ್ಳರ ಚಲನವಲನಗಳು ಅದೇ ಪ್ರದೇಶದ ಮನೆಯೊಂದರ ಸಿಸಿ‌ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಧ್ವಜಾರೋಹಣ ಮುಗಿಸಿ ಮನೆಗೆ ಮರಳಿದಾಗ ಘಟನೆ ತಿಳಿದಿದ್ದು, ಕುಟುಂಬಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾ ಗಿದ್ದು, ಸ್ಥಳಕ್ಕೆ ಭೇಟಿ ನೀಡಿರುವ ಗದಗ ನಗರಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.