Sunday, 11th May 2025

Fund Help: ಕ್ರೌಡ್‌ಫಂಡ್‌ ಸಂಗ್ರಹಿಸಿ 45 ವಲಸೆ ಕುಟುಂಬಗಳಿಗೆ ಮೂಲ ಅಗತ್ಯಗಳನ್ನು ಪೂರೈಕೆ

ಬೆಂಗಳೂರು: ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ಮಾಸ್ಟರ್ ಆಫ್ ಸೋಶಿಯಲ್ ವರ್ಕ್ ವಿದ್ಯಾರ್ಥಿಗಳು ಪ್ರಾಜೆಕ್ಟ್ ಅನ್ನದಾನದ ಬ್ಯಾನರ್‌ನಡಿಯಲ್ಲಿ ಬೆಲ್ಲಹಳ್ಳಿ ಬಂಡೆಯಲ್ಲಿ ಡ್ರಮ್ ತಯಾರಿಸುವ ಉತ್ತರ ಪ್ರದೇಶ ಮೂಲದ 45 ವಲಸೆ ಕುಟುಂಬಗಳು ತಮ್ಮ ಜೀವನ ನಿರ್ವಹಣೆಗಾಗಿ ಹಗಲಿರುಳು ಶ್ರಮಿಸುತ್ತಿರುವುದನ್ನು ಕಂಡು ಶ್ರೀಮತಿ ಅನಘಾ ಸಜನ್, ಶ್ರೀಮತಿ ರಿಂಗ್‌ಚಾಮ್‌ಸುಯಿಲಿಯು ಪಮೇ, ಶ್ರೀಮತಿ ಮೈಟಾಂಗ್‌ ಕೈಶಾಂಗ್‌ಬಮ್ ರೀಯಾ ದೇವಿ, ಶ್ರೀಮತಿ ರೂಪಶ್ರೀ ಎಸ್ ಮತ್ತು ಶ್ರೀ ಡೇರಿಸ್ ರಾಬಿನ್ ನೇತೃತ್ವದ ವಿದ್ಯಾರ್ಥಿಗಳು ಸೋಶಿಯಲ್ ವರ್ಕ್ ವಿಭಾಗದ ಮುಖ್ಯಸ್ಥ ರಾದ ಡಾ.ಜೋನಸ್ ರಿಚರ್ಡ್ ಎ ಮತ್ತು ಕಾರ್ಯಕ್ರಮದ ಸಂಯೋಜಕರಾದ ಡಾ.ವಿನ್ನೆ ಜಾಯ್ಸ್ ಅವರ ಮಾರ್ಗದರ್ಶನದಲ್ಲಿ ಕೈಲಾದ ಸೌಲಭ್ಯ ನೀಡುವ ಉದ್ದೇಶದಿಂದ ಕಬ್ಬನ್ ಪಾರ್ಕ್ ಮತ್ತು ಚರ್ಚ್ ಸ್ಟ್ರೀಟ್‌ನ ಬೀದಿಗಳಲ್ಲಿ ತಮ್ಮ ಮಿಷನ್‌ಗಾಗಿ ಕ್ರೌಡ್‌ಫಂಡ್‌ ಸಂಗ್ರಹಿಸಿ 45 ವಲಸೆ ಕುಟುಂಬಗಳಿಗೆ ಮೂಲಭೂತ ಅಗತ್ಯಗಳನ್ನು ಪೂರೈಸಿದ್ದಾರೆ.