Wednesday, 14th May 2025

ಸಾಂಸ್ಕೃತಿಕ, ಸಾಹಿತ್ಯಿಕ ಭಾರತ ದೇಶ ವಿಶ್ವದಲ್ಲಿಯೇ ಶ್ರೇಷ್ಠ: ಯಶವಂತರಾಯಗೌಡ ಪಾಟೀಲ ಅಭಿಮತ

ಇಂಡಿ: ದೇಶದ ಆರ್ಥಿಕ ಸದೃಡತೆ ಸಾಧಿಸಿದೆ. ಈ ಹಿಂದಿನ ಆಡಳಿತಾರೂಢ ಸರಕಾರಗಳು ನಿರಂತರ ಪ್ರಗತಿಯ ಫಲವಾಗಿ ಜಗತ್ತಿನಲ್ಲಿಯೇ ಬಲಾಢ್ಯ ದೇಶವಾಗಿದೆ. ಪ್ರಪಂಚ ದಲ್ಲಿಯೇ ಭಾರತ ಶ್ರೇಷ್ಠ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಅನೇಕ ದಾರ್ಶನಿಕರ ಯುಗಪುರುಷ್ಯರ ಇತಿಹಾಸಕಾರರು ಈ ದೇಶಕ್ಕಾಗಿ ಶ್ರಮಿಸಿದ್ದಾರೆ.

ಅನೇಕ ಸ್ವಾತಂತ್ರ‍್ಯ ಸೇನಾನಿಗಳು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ. ಭಗತಸಿಂಗ , ಸುಖದೇವ, ಚಂದ್ರಶೇಖರ ಅಜಾದ, ಮಹಾತ್ಮಾ ಗಾಂಧಿಜೀ ಸೇರಿದಂತೆ ಅನೇಕ ವೀರರು ದೇಶಕ್ಕಾಗಿ ಅಂಹಿಸೆ ಮೂಲಕ ಸ್ವಾತಂತ್ರ‍್ಯ ತಂದುಕೊಟ್ಟಿದ್ದಾರೆ ಎಂದು ಶಾಸಕ ಯಶವಂತ ರಾಯಗೌಡ ವ್ಹಿ ಪಾಟೀಲ ಹೇಳಿದರು.

ತಾಲೂಕಾ ಕ್ರೀಡಾಂಗಣದ ಸಭಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ದೇಶ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ನನ್ನ ಕೊಡುಗೆ ಏನು ಎಂಬುದು ಆಲೋಚಿಸಬೇಕಾಗಿದೆ. ರಾಷ್ಟ್ರ ನಿರ್ಮಾಣ ಸಲುವಾಗಿ ಡಾ.ಬಿ.ಆರ್ ಅಂಬೇಡ್ಕರವರ ಕೊಡುಗೆ ಅನೂನ್ಯ ಸಂವಿಧಾನ ರಕ್ಷಣೆಯ ಜವಾಬ್ದಾರಿ ಪ್ರತಿಯೋಬ್ಬ ಭಾರತೀಯರ ಮೇಲಿದೆ. ಚೈನಾ ನಂತರ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ, ಭಾರತ ಈ ದೇಶ ಸಂಸ್ಕೃತಿ,ಸಾಹಿತ್ಯ ಹಿನ್ನಲೆಯನ್ನು ಹೊಂದಿದೆ. ದೇಶದಲ್ಲಿಯೇ ಅತೀ ಹೆಚ್ಚು ಜಿ.ಎಸ್.ಟಿ ಸಂಗ್ರಹದಲ್ಲಿ ಕರ್ನಾಟಕ ೩ ನೇ ಸ್ಥಾನದಲ್ಲಿದೆ.

ಆರೋಗ್ಯವೇ ಭಾಗ್ಯ ಎನ್ನುವಂತೆ ದೇಶದ ಪ್ರತಿಯೋಬ್ಬ ಪ್ರಜೆಗಳು ತಮ್ಮ ಸುತ್ತಮುತ್ತಲಿನ ಪ್ರದೇಶ ಸ್ವಚ್ಚತೆ ಇಡಬೇಕು .ಕೇವಲ ಪುರಸಭೆ, ಸರಕಾರಗಳಿಂದ ನೀರಿಕ್ಷೆ ಮಾಡುವುದಕ್ಕಿಂತ ನೈತಿಕ ವ್ಯವಸ್ಥೆ ಮುಖ್ಯ. ಇಂಡಿ ತಾಲೂಕಿನಲ್ಲಿ ದ್ರಾಕ್ಷೀ ದಾಳಿಂಬೆ. ಲಿಂಬೆ, ಬೆಳೆಗಾರರು ಕಂಗಾಲಾಗಿದ್ದು ಅಸರ್ಮಪಕ ರಪ್ತು ನೀತಿಯಿಂದ ತೊಂದರೆಯಾಗಿದೆ ಕೇಂದ್ರ ಸರಕಾರ ರಪ್ತು ನೀತಿಯನ್ನು ಸರಿಪಡಿಸಬೇಕು. ಈ ಭಾಗದಲ್ಲಿ ಲಿಂಬೆ ಬೆಳೆ ಅಪಾರ ಪ್ರಮಾಣದಲ್ಲಿ ಇದ್ದು ಜಾಗತಿಕ ಮಟ್ಟದಲ್ಲಿ ವಿಫಲ ಅವಕಾಶ ಸಿಗಲಿದೆ. ಲಿಬೆ ಬೆಳೆ ಸಲುವಾಗಿ ಕೋಲ್ಡ್ ಸ್ಟೋರೇಜ್ ಹೊಸ ಅವಿಸ್ಕಾರ ಸಂಶೋಧನೆಗಳ ಮೂಲಕ ಅಧಿಕಾರಿಗಳು ಹೆಚ್ಚು ಒತ್ತು ನೀಡಬೇಕು.

ಕೇಂದ್ರದ ಓಬಿರಾಯನ ಕಾಲದ ಬರಪರಿಹಾರ ನೀಯಮಾವಳಿಗಳನ್ನು ಮಾರ್ಪಾಟು ಮಾಡಬೇಕು ಎಂದು ಹೇಳಿದ ಅವರು ಜಲಧಾರೆ ಯೋಜನೆಯಡಿ ಇಂಡಿ ಭಾಗದಲ್ಲಿ ಶ್ರೀರೇವಣಸಿದ್ದೇಶ್ವರ ಏತನೀರಾವರಿ ಮೂಲಕ ೨೮ ಸಾವಿರ ಹೆಕ್ಟರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಸಿಗಲಿದೆ ಜೊತೆಗೆ ಕೆರೆತುಂಬುವ ಯೋಜನೆಗಳಿಗೆ ಆದ್ಯತೆ ನೀಡಲಾಗಿದ್ದು ಶೇ.೮೨ರಷ್ಟು ಈ ಭಾಗ ನೀರಾವರಿ ಯಾಗಲಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಾಥಮಿ ಹಂತದಿAದ ಉನ್ನತ ಶಿಕ್ಷಣದವೆಗೂ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಮುಂದಿನ ದಿನಗಳಲ್ಲಿ ತಾಲೂಕಿನ ಬೂದಿಹಾಳ ಗ್ರಾಮದ ಹತ್ತಿರ ಸಣ್ಣ ಕೈಗಾರಿಕೆಗಳನ್ನು ಆರಂಭಿಸುವ ಮೂಲಕ ಯುವಕರಿಗೆ ಉದ್ಯೋಗ ಆದ್ಯತೆ ಸಿಗಲಿದೆ.

ಕಾಂಗ್ರೆಸ್ ನೈತೃತ್ವದ ಸರಕಾರ ಪಂಚ ಗ್ಯಾರಂಟಿಗಳ ಮೂಲಕ ಜನತೆಗೆ ಅನುಕೂಲ ಕಲ್ಪಿಸಿಕೊಟ್ಟಿದೆ. ಸರಕಾರ ಕೊಟ್ಟ ಮಾತಿ ನಂತೆ ನಡೇದುಕೊಂಡಿದ್ದು ಜನಪರ ಜನಸ್ನೇಹಿ ಆಡಳಿತದತ್ತ ಮುಖ ಮಾಡಿದೆ. ಶಾಂತಿ, ಸಹನೆ, ಸಹಬಾಳ್ವೇ ಮೂಲಕ ತಾಲೂಕಿನ ಚಿತ್ರಣ ತಾಲೂಕು ಅಭಿವೃದ್ದಿಯತ್ ಸಾಗಿದೆ. ಈ ಭಾಗದಲ್ಲಿ ಅಫರಾಧ ,ಅನಧಿಕೃತ ಚಟುವಟಿಕೆಗಳಿಗೆ ಪೊಲೀಸರು ನಿರ್ಧಾಕ್ಷಿಣೆ ಕಡಿವಾಣ ಹಾಕಬೇಕು, ರಾತ್ರಿ ಹೊತ್ತಿನಲ್ಲಿ ನಾಕಾಬಂಧಿ, ಗಸ್ತು ಹಾಕಿ ಕಟ್ಟುನಿಟ್ಟಿನಿಂದ ನಗರ ಸಂರಕ್ಷಣೆ ಮಾಡ ಬೇಕು. ಸಾರ್ವಜನಿಕರ ಜನಸ್ನೇಹಿ ಎಂಬ ಹೆಸರು ಬರುವಂತೆ ನಿಮ್ಮ ವರ್ತನೆಯಾಗಲಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ, ಅಧಿಕಾರಿ ಸುನೀಲ ಮದ್ದಿನ, ಡಿವೈಎಸ್ಪಿ ಚಂದ್ರಶೇಖರ ನಂದರಡ್ಡಿ, ತಹಶೀಲ್ದಾರ ನಾಗಯ್ಯಾ ಹಿರೇಮಠ, ಶಿಕ್ಷಣಾಧಿಕಾರಿ ಟಿ.ಎಸ್ ಆಲಗೂರ , ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ,ಪಿ.ಡ.ಬ್ಲೊö್ಯÃಡಿ ಅಧಿಕಾರಿ ಹಿರೇಮಠ, ಪಿ.ಆರ್.ಈ.ಡಿ ಅಧಿಕಾರಿ ಎಸ್.ಆರ್ ರುದ್ರವಾಡಿ, ಕೃಷಿ ಅಧಿಕಾರಿ ಮಹಾದೇಪ್ಪ ಏವೂರ, ತೋಟಗಾರಿಕೆ ಅಧಿಕಾರಿ ಎಚ್.ಎಸ್ ಪಾಟೀಲ, ಲ್ಯಾಂಡ ಆರ್ಮಿ ಇಇ ರಾಜಶೇಖರ ಹೂಗಾರ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *