Sunday, 11th May 2025

Dr M C Sudhakar: ವಾಲ್ಮೀಕಿ ಮುಖಂಡರಿಂದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ಗೆ ಸನ್ಮಾನ  

ಚಿಂತಾಮಣಿ: ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ, ವಾಲ್ಮೀಕಿ ಸಮುದಾಯ ಇವರ ಸಂಯುಕ್ತ ಆಶ್ರಯದಲ್ಲಿ ಸಡಗರದಿಂದ  ನಡೆಸಿದ ಮಹರ್ಷಿ ವಾಲ್ಮೀಕಿ ಜಯಂತಿ ಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.  

ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿಗಳಾದ ಸುದರ್ಶನ್ ಯಾದವ್, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಆನಂದ್ ಅವರನ್ನು ಕೂಡ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ತಾಲೂಕು ಅಧ್ಯಕ್ಷ ವೆಂಕಟೇಶ್, ವೆಂಕಟರವಣಪ್ಪ, ಮಾಡಿಕೆರೆ ಮಣಿಕಂಠ,ಅನಾಪ್ರಸಾದ್, ಎಂ ಎಸ್ ನರಸಿಂಹಪ್ಪ,ನಾರಾಯಣ್ ನಾಯಕ್, ನರಸಪ್ಪ, ಸಂಪಂಗಿ ರಾಮಯ್ಯ,ಡಿ ನರಸಪ್ಪ, ಆನಂದ್, ಸುಬ್ರಮಣಿ, ಟಿ ಸೀನಪ್ಪ, ಮಾಜಿ ತಾಲೂಕು ಪಂಚಾಯತಿ ಸದಸ್ಯ ಶಂಕರ್, ಚಿನ್ನಸಂದ್ರ ನಾರಾಯಣಸ್ವಾಮಿ, ಚೌಡಪ್ಪ, ನಾಯಕ್, ಕೃಷ್ಣಪ್ಪ, ವೇಣುಗೋಪಾಲ್, ಬಾಬು, ನಗರಸಭಾ ಸದಸ್ಯ ಹರೀಶ್, ಉಪಾಧ್ಯಕ್ಷ ರಾಣಿಯಮ್ಮ, ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.