Saturday, 17th May 2025

ನೇತ್ರದಾನ ಮಾಡಿ ಮಾದರಿಯಾದ ಶಾಸಕರ ಕುಟುಂಬ

ತುಮಕೂರು: ಮಾಜಿ ಸಚಿವ ಹಾಗೂ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ಹುಟ್ಟುಹಬ್ಬದ ಅಂಗವಾಗಿ ಕುಟುಂಬದ ಸದಸ್ಯರು ಎನ್.ಎಸ್.ಐ ಫೌಂಡೇಷನ್ ಗೆ ನೇತ್ರದಾನ ಮಾಡಿ ಮಾದರಿಯಾಗಿದ್ದಾರೆ.

ಶಾಸಕ ಶ್ರೀನಿವಾಸ್, ಪತ್ನಿ ಭಾರತಿ, ಮಗ ದುಶ್ಯಂತ್, ಮಗಳು ತೇಜಸ್ವಿನಿ ಅವರುಗಳು ನೇತ್ರದಾನ ಮಾಡುವ ಮೂಲಕ ಇತರರಿಗೂ ನೇತ್ರದಾನ ಮಾಡಲು ಕರೆ ನೀಡಿದರು. ಶಾಸಕರ ಕುಟುಂಬದ ಕರ‍್ಯವನ್ನು ಎನ್.ಎಸ್.ಐ ಫೌಂಡೇಷನ್ ಮುಖ್ಯಸ್ಥ ಶ್ರೀಧರ್ ಪ್ರಶಂಶಿಸಿದ್ದಾರೆ.