Sunday, 11th May 2025

Eid Milad: ಈದ್ ಮಿಲಾದ್ ಹಬ್ಬ ಆಚರಣೆ

ಮಾಜಿ ಶಾಸಕರಾದ ಶಫೀ ಅಹಮದ್ ರವರ ನೇತೃತ್ವದಲ್ಲಿ ತುಮಕೂರು ಬಾರ್ ಲೈನ್ ರಸ್ತೆಯ ಮೆಕ್ಕಾ ಮಸೀದಿ ಯಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನವಾದ ಈದ್ ಮಿಲಾದ್ ಹಬ್ಬ ಆಚರಿಸಲಾಯಿತು.

ಪ್ರವಾದಿಗಳು ಕೊಟ್ಟಂತಹ ೫ ಅಂಶಗಳನ್ನು ಪರಿಪಾಲನೆ ಮಾಡಬೇಕೆಂದು ಜಿಲ್ಲಾಧಿಕಾರಿಯಾದ ಶುಭಾ ಕಲ್ಯಾಣ್ ರವರು ತಿಳಿಸಿದರು.

ರಾಜ್ಯದಲ್ಲಿ ತುಮಕೂರು ಜಿಲ್ಲೆಯು ಶಾಂತಿ & ಸುವ್ಯವಸ್ಥೆಗೆ ಮಾದರಿಯಾಗುತ್ತಿದ್ದು, ಇದಕ್ಕೆ ಎಲ್ಲರೂ ಕೈಜೋಡಿಸ ಬೇಕೆಂದು ಜಿಲ್ಲಾ ವರಿಷ್ಠಾಧಿಕಾರಿಯಾದ ಆಶೋಕ್ ಕೆ. ವಿ. ರವರು ತಿಳಿಸಿದರು.

ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಒತ್ತು ನೀಡಬೇಕು ಹಾಗೂ ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿಸಲು ನಾವೆಲ್ಲರೂ ಪಾಲುದಾರರಾಗ ಬೇಕೆಂದು ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪರವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಸೀದಿಯ ಇಮಾಮ್ ಸಾಬ್, ಡಾ. ನಯಾಜ್, ಸಮಾಜ ಸೇವಕ ನಟರಾಜು ಶೆಟ್ಟಿ, ಅಫ್ತಾಪ್, ಅದಿಲ್ ಖಾನ್, ನಿಸ್ಸಾರ್ ಅಹಮದ್ ಹಾಗೂ ಹಲವರು ಉಪಸ್ಥಿತರಿದ್ದರು.

ಇದನ್ನೂ ಓದಿ: Eid Milad: ಕೋಲಾರ: ಈದ್‌ ಮಿಲಾದ್‌ ಮೆರವಣಿಗೆಯಲ್ಲಿ ಗುಂಪು ಘರ್ಷಣೆ, 4 ಮಂದಿಗೆ ಗಾಯ

Leave a Reply

Your email address will not be published. Required fields are marked *