ಮಧುಗಿರಿ: ಉಪ್ಪಾರ ಸಮಾಜ ಶೈಕ್ಷಣಿಕ ಮತ್ತು ಆರ್ಥಿಕವಾಗಿ ತೀವ್ರ ಹಿಂದುಳಿದಿದ್ದು ಶಿಕ್ಷಣ ಮತ್ತು ಒಗ್ಗಟ್ಟಿನಿಂದ ಮುಂದೆ ಬರಲು ಸಾಧ್ಯ ಎಂದು ಭಗೀರಥ ಸಂಘದ ಜಿಲ್ಲಾ ಗೌರವಾಧ್ಯಕ್ಷ ತಿಪ್ಪೇಸ್ವಾಮಿ ತಿಳಿಸಿದರು.

ನಮ್ಮ ಸಮಾಜದ ಎಂದಿಗೂ ಗಲಭೆ ಘರ್ಷಣೆಗಳಿಗೆ ಆವಕಾಶ ಕೊಡಬೇಡಿ, ಗ್ರಾಮೀಣಾ ಮಟ್ಟದಲ್ಲಿ ಪ್ರತಿ ಸಮಾಜದ ಜತೆ ಉತ್ತಮ ಬಾಂಧವ್ಯ ಬೆಳಿಸಿಕೊಳ್ಳಿ ಜಗಳ ಘರ್ಷಣೆ ಮಾಡುವುದರಿಂದ ಠಾಣೆ ಕೋರ್ಟ್ ಕಚೇರಿಗೆ ನಮ್ಮ ದುಡಿಮೆ ಮೀಸಲಿಡಬೇಕಾಗುತ್ತದೆ ಇದರ ಬದಲು ಉಪ್ಪಾರ ಜನಾಂಗ ಒಗ್ಗಟ್ಟಿನಿಂದ ಸಮಾಜ ಏಳಿಗೆಗೆ ಶಿಕ್ಷಣ ಮತ್ತು ಸಂಘಟನೆಗೆ ಹೆಚ್ಚಿನ ಒತ್ತು ನೀಡಿ ಎಂದು ಕರೆ ನೀಡಿದರು.
ತಾಲ್ಲೂಕು ಅಧ್ಯಕ್ಷ ದಾಸಪ್ಪ ಮಾತನಾಡಿ ಜೂನ್ 4 ರಂದು ತುಮಕೂರಿನ ಬ್ರಹ್ಮ ವಿದ್ಯಾಪೀಠದಲ್ಲಿ ಮಹರ್ಷಿ ಭಗೀರಥ ಜಯಂತಿಯನ್ನು ಹಮ್ಮಿಕೊಳ್ಳಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಸಮಾಜ ಭಾಗವಹಿಸಿಬೇಕು. ನಮ್ಮ ಸಮಾಜದ ಹೊಸದುರ್ಗ ಮಠದಲ್ಲಿ ಶಾಲಾ ಕಾಲೇಜುಗಳಿದ್ದು ಉಪ್ಪಾರ ಸಮಾಜದ ಬಡ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುವುದಾಗಿ ತಿಳಿಸಿದ್ದು ಯಾರಾದರೂ ಶಿಕ್ಷಣ ಪಡೆಯಲು ಸಮಸ್ಯೆ ಇದ್ದರೆ ನಮ್ಮ ತಾಲ್ಲೂಕು ಸಂಘದ ವತಿಯಿಂದ ಮಠದಲ್ಲಿ ಶಿಕ್ಷಣ ಕೊಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಸೂಪರವೈಸರ್ ರಾಮಕೃಷ್ಣಪ್ಪ, ಭಗೀರಥ ಸಂಘದ ತಾಲ್ಲೂಕು ಉಪಾಧ್ಯಕ್ಷ ಹೆಚ್ ರಮೇಶ್, ನಿರ್ದೇಶಕರಾದ ನರಸಿಂಹಪ್ಪ, ಚಂದ್ರಪ್ಪ, ಗಂಗಪ್ಪ, ಮಾಜಿ ಗ್ರಾಪಂ ಉಪಾಧ್ಯಕ್ಷ ಚನ್ನಪ್ಪ ಸಮಾಜ ಮುಖಂಡರಾದ ಸುರೇಶ್, ಆನಂದ, ಗಿರೀಶ್, ರವಿ, ಲಕ್ಷ್ಮಿಪತಿ, ರಾಜು, ನಾಗೇಂದ್ರ, ಜಗನ್ನಾಥ ಹಾಜರಿದ್ದರು.