ಚಿಕ್ಕಬಳ್ಳಾಪುರ : ಅತಿಥಿ ಉಪನ್ಯಾಸಕರ ನೇಮಕಾತಿ ಸಂಬ0ಧದ ಅರ್ಜಿ ಜ.15ರಂದು ಕೋರ್ಟಿನಲ್ಲಿ ವಿಚಾರಣೆಗೆ ಬರಲಿದೆ.ಆದರೂ ಇಲಾಖೆ ೨೦೨೪-೨೫ನೇ ಸಾಲಿನ ನೇಮಕಾತಿ ಸಂಬ0ಧ ಗುರುವಾರ ಸುತ್ತೋಲೆ ಹೊರಡಿಸಲಾಗಿದ್ದು ಯುಜಿಸಿ ನಿಯಮಾವಳಿಯಂತೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದರು
ಚಿಕ್ಕಬಳ್ಳಾಪುರ ನಗರದ ಎಂ.ಜಿ.ರಸ್ತೆ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ ಜಿಲ್ಲಾಪಂಚಾಯಿತಿ, ಕಾಲೇಜು ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ೬ ಕೋಟಿ ವೆಚ್ಚದ ಹೆಚ್ಚುವರಿ ಕಟ್ಟಡ ಕಾಮಗಾರಿಯ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ನನ್ನ ಅವಧಿಯಲ್ಲಿ ಉನ್ನತ ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಗುಣಾತ್ಮಕ ಬದಲಾವಣೆಗಳನ್ನು ತರಲಾಗಿದ್ದು ಅಗತ್ಯಕ್ಕನುಗುಣವಾಗಿ ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸಲು ಅನುದಾನವನ್ನು ಬಿಡುಗಡೆ ಗೊಳಿಸಿದ್ದೇನೆ. ಚಿಕ್ಕಬಳ್ಳಾಪುರ ಎಂಜಿ ರಸ್ತೆಯ ಕಾಲೇಜಿಗೆ ೬ ಕೋಟಿ, ಮಹಿಳಾ ಕಾಲೇಜಿಗೆ ೪ ಕೋಟಿ ಮಂಜೂರು ಮಾಡಲಾಗಿದೆ.
೨೦೦೦ ವಿದ್ಯಾರ್ಥಿಗಳಿರುವ ಚಿಂತಾಮಣಿಯ ಮಹಿಳಾ ಕಾಲೇಜಿಗೆ ೨೬ ಕೋಟಿ ಅನುದಾನ, ಪಾಲಿಟೆಕ್ನಿಕ್‌ಗೆ ೭೪ಕೋಟಿ ನೀಡಲಾಗಿದೆ.ಬಡಮಕ್ಕಳು ವ್ಯಾಸಾಂಗ ಮಾಡುವ ಕಾಲೇಜಿನಲ್ಲಿ ಯಾವುದೇ ಮೂಲ ಭೂತ ಸೌಕರ್ಯಗಳಿಗೆ ಕೊರತೆಯಿರದಂತೆ ನೋಡಿಕೊಳ್ಳುವುದು ನನ್ನ ಮೊದಲ ಆಧ್ಯತೆಯಾಗಿದೆ. ಇದೇ ಉದ್ದೇಶದಿಂದ ರಾತ್ರಿ ಬೆಳಿಗ್ಗೆ ಕೌನ್ಸೆಲಿಂಗ್ ನಡೆಸಿ ಅದೇ ರಾತ್ರಿ ಆದೇಶ ಪತ್ರಗಳನ್ನು ವಿತರಿಸಿದ ಹಿರಿಮೆ ನನ್ನ ಅವಧಿಗಿದೆ. ಜನ ಅಧಿಕಾರ ಕೊಟ್ಟಾಗ ಅದನ್ನು ಜನತೆಗೆ ಹಿಂತಿರುಗಿಸಬೇಕು ಎಂದು ನಂಬಿದವನು ನಾನು ಎಂದರು.
ಸರ್ಕಾರಿ ಬಸ್ ಏರಿಕೆ ಸಮರ್ಥನೆ
ನಮ್ಮ ಸರಕಾರ ಮಾತ್ರ ಟಿಕೆಟ್ ಏರಿಕೆ ಮಾಡುತ್ತಿಲ್ಲ. ಹಿಂದಿನಿ0ದಲೂ ನಡೆದುಕೊಂಡು ಬಂದಿರುವ ಸಾಮಾನ್ಯ ವಾದ ಪ್ರಕ್ರಿಯೆಯಾಗಿದೆ. ಇದಕ್ಕೂ ಗ್ಯಾರೆಂಟಿ ಯೋಜನೆಗಳಿಗೂ ಸಂಬAಧವೇ ಇಲ್ಲ. ಟಿಕೆಟ್ ದರ ಏರಿಕೆ ಸಂಬ0ಧ ಸಂಪುಟ ಸಭೆಯಲ್ಲಿ ವಿಸ್ತೃತವಾದ ಚರ್ಚೆ ನಡೆಸಿ ಸಾರಿಗೆ ಇಲಾಖೆಯನ್ನು ಉಳಿಸಬೇಕಾದರೆ ಟಿಕೆಟ್ ಏರಿಸುವುದು ಅನಿವಾರ್ಯ ಎಂಬ ತೀರ್ಮಾಣಕ್ಕೆ ಬರಲಾಗಿದೆ ಎಂದರು.
ರಾಜ್ಯದ ಹಲವು ವಿಭಾಗಗಳಲ್ಲಿ ಟಿಕೆಟ್ ಧರ ಪರಿಷ್ಕರಣೆಯಾಗಿ ಏಳೆಂಟು ವರ್ಷಗಳೇ ಆಗಿದೆ.ಪಕ್ಕದ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದ ಧರ ಕಡಿಮೆಯೇ ಇದೆ. ಇತ್ತೀಚಿನ ದಿನಗಳಲ್ಲಿ ಹಣದುಬ್ಬರದ ಏರಿಕೆಯಂತೆ, ತೈಲ ಬೆಲೆ ಏರಿಕೆ, ಬಸ್ ಖರೀದಿ ಏರಿಕೆ ಆಗಿದೆ.ಇದೇ ಕಾರಣಕ್ಕಾಗಿ ಬೆಲೆ ಏರಿಕೆ ಮಾಡಲಾಗುತ್ತಿದೆ.ಶಕ್ತಿ ಯೋಜನೆಗೂ ಟಿಕೆಟ್ ಬೆಲೆ ಏರಿಕೆಗೂ ಯಾವುದೇ ಸಂಬ0ಧ ಇಲ್ಲ. ಸಿಬ್ಬಂದಿಯ ಹಲವು ಬೇಡಿಕೆಗಳು ಇರುವುದರಿಂದ ಟಿಕೆಟ್ ಬೆಲೆ ಏರಿಕೆ ಅನಿವಾರ್ಯವಾಗಿದೆ.ವಿರೋಧ ಪಕ್ಷಗಳು ಟೀಕೆ ಮಾಡೋದು ಸಹಜ ಅವರು ಅಧಿಕಾರದಲ್ಲಿದ್ರೂ ಇದೇ ಕೆಲಸ ಮಾಡುತ್ತಿದ್ದರು ಎಂದು ಸಮರ್ಥನೆ ಮಾಡಿಕೊಂಡರು
ಸಚಿವ ಸಂಪುಟ ವಿಸ್ತರಣೆಯ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಆ ಬಗ್ಗೆ ವರಿಷ್ಟರ ತೀರ್ಮಾ ನವೇ ಅಂತಿಮ. ನಾನೂ ಕೂಡ ಮಾಧ್ಯಮಗಳ ಮೂಲಕವೇ ಈವಿಚಾರ ತಿಳಿದಿದ್ದೇನೆ. ಪಕ್ಷದ ಅಂಗಳ ಅಥವಾ ವರಿಷ್ಠರ ಬಳಿ ಯಾವುದೇ ಚರ್ಚೆ ಆಗಿಲ್ಲ. ಈ ವಿಚಾರದಲ್ಲಿ ವರಿಷ್ಠರ ತೀರ್ಮಾನಕ್ಕೆ ನಾವೆಲ್ಲಾ ಬದ್ಧ ಎಂದರು.
ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಪಾರ್ಟಿ ವಿಚಾರದ ಬಗ್ಗೆ ಪ್ರತಿಕ್ರಯಿಸಿದ ಅವರು ಸತೀಶ್ ಜಾರಕಿ ಹೊಳಿ ಅವರ ಮನೆಯಲ್ಲಿನ ಔತನಕೂಟಕ್ಕೆ ಸಿಎಂ ಅವರಿಗೆ ಆಹ್ವಾನ ಇದ್ದಿದ್ದರಿಂದ ಸಿದ್ಧರಾಮಯ್ಯ ಊಟಕ್ಕೆ ಹೋಗಿದ್ದಾರೆ. ನಾಳೆ ನಮ್ಮ ಮನೆಯಲ್ಲಿ ಊಟಕ್ಕೆ ಕರೆದರೂ ಬರ್ತಾರೆ.ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ನಾಡಿನ ಜನರ ಹಿತದೃಷ್ಟಿಯಿಂದ ಸರ್ಕಾರ ಉತ್ತಮ ಕೆಲಸಗಳನ್ನು ಮಾಡ್ತಿದೆ. ಜನರ ಆಶಯಗಳಿಗೆ ಧಕ್ಕೆ ಬಾರದಂತೆ ಪಕ್ಷ ಮತ್ತು ಸರ್ಕಾರ ನಡೆದುಕೊಳ್ಳಲಿದೆ ಎನ್ನುವ ಮೂಲಕ ಮಾಧ್ಯಮದವರ ಪ್ರಶ್ನೆಗೆ ತೆರೆ ಎಳೆದರು.
ವಿದೇಶದಲ್ಲಿ ಶಿಕ್ಷಣ
೨೦೨೫ನೇ ಶೈಕ್ಷಣಿಕ ಸಾಲಿನಿಂದ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಿಂದ ಪ್ರತಿ ವರ್ಷ ೫ ವಿದ್ಯಾರ್ಥಿಗಳನ್ನು ಇಂಗ್ಲೇಡ್‌ನಲ್ಲಿ ಸ್ನಾತಕೋತ್ತರ ಶಿಕ್ಷಣಕ್ಕೆ ಸರಕಾರ ಖರ್ಚಿನಲ್ಲಿ ಕಳಿಸುವ ಯೋಜನೆ ರೂಪಿಸಲಾಗಿದೆ. ಇದನ್ನು ಲಿಖಿತ ಪರೀಕ್ಷೆಯ ಅಧಾರದಲ್ಲಿ ಮಾಡಲಾಗುವುದು.ಮಹಿಳಾ ಸಬಲೀಕರಣ ಮತ್ತು ಉನ್ನತ ಶಿಕ್ಷಣದಲ್ಲಿ ಹೆಣ್ಣುಮಕ್ಕಳ ಪ್ರಾತಿನಿಧ್ಯ ಹೆಚ್ಚಿಸುವ ಭಾಗವಾಗಿ ಈ ಯೋಜನೆ ರೂಪಿಸಲಾಗಿದೆ ಎಂದರು.
ವೇದಿಕೆಯಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ,ಅಪರ ಜಿಲ್ಲಾಧಿಕಾರಿ ಭಾಸ್ಕರ್ ಜಿಲ್ಲಾ ಪಂಚಾಯಿತಿ ಸಿಇಒ ಪ್ರಕಾಶ್.ಜಿ.ನಿಟ್ಟಾಲಿ, ನಗರಸಭೆ ಅಧ್ಯಕ್ಷ ಗಜೇಂದ್ರ,ನಗರಸಭೆ ಸದಸ್ಯ ರಾಜಶೇಖರ್ ಪ್ರಾಂಶುಪಾಲ ಡಾ.ಮುನಿರಾಜು, ಲೋಕೋಪಯೋಗಿ ಇಲಾಖೆಯ ಇಂಜನಿಯರ್ ಶಾಲಿನಿ, ಗೃಹನಿರ್ಮಾಣ ಮಂಡಳಿಯ ಮಂಜುಳ, ನೀಲನಕ್ಷೆ ವಿನ್ಯಾಸ ಸಿದ್ದಪಡಿಸಿದ ನಿಶಾಂತ್ ನಟೇಶ್ ಇದ್ದರು.
ಇದನ್ನೂ ಓದಿ: chikkaballapurnews