ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಶರಣ ಸಾಹಿತ್ಯ ಮತ್ತು ಸೂಫಿ ಪರಂಪರೆಯ ಬಗ್ಗೆ ಸುದೀರ್ಘ ಅಧ್ಯಯನ, ಮತ್ತು ಸಂಶೋಧನೆ ನಡೆಸಿದ ಕೀರ್ತಿ ಡಾ.ಅಬ್ದುಲ್ ಹಮೀದ್ ಅವರಿಗೆ ಸಲ್ಲುತ್ತದೆ, ಎಂದು ಜಿಲ್ಲಾ ಕಸಾಪ ಅಧ್ಯಕ್ಷ ರಾದ ಶ್ರೀ. ಕೆ. ಎಸ್. ಸಿದ್ದಲಿಂಗಪ್ಪ ಸಂತಾಪ ಸೂಚಿಸಿ ಅವರು ಕನ್ನಡ ಮತ್ತು ಹಿಂದಿ ಸಾಹಿತ್ಯದಲ್ಲಿ ತನ್ನದೇ ಕೊಡುಗೆ ನೀಡಿದ್ದು ಅವರ ಅಗಲುವಿಕೆ ಸಾಹಿತ್ಯ ಕ್ಷೇತ್ರಕ್ಕೆ ನಷ್ಟ ಎಂದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ ಎಸ್ ರವಿಕುಮಾರ್ ಕಟ್ಟೆ ಮನೆ ಅಬ್ದುಲ್ ಹಮೀದ್ ಅವರ ಜೊತೆಗಿನ ಒಡನಾಟ ಸ್ಮರಿಸಿ, ಹಂದನಕೆರೆಯಲ್ಲಿ ನಡೆದ 5ನೇ ಸಾಹಿತ್ಯ ಸಮ್ಮೇಳನದಲ್ಲಿ ಸಕ್ರಿಯರಾಗಿ ಸಮ್ಮೇಳನ ಯಶಸ್ವಿಗೆ ಕಾರಣರಾದರು. ಭಾಷೆಯ ಮೇಲೆ ಹಿಡಿತ ಸಾಧಿಸಿದ ಅವರು ಶರಣ ಸಾಹಿತ್ಯ ಪಥ ಮತ್ತು ಸೂಫಿ ಪಥ ಗಳ ಬಗ್ಗೆ ಪ್ರಬಂಧ ಮಂಡಿಸಿದ ಕೀರ್ತಿ ಅವರದ್ದು. ಅವರ ಜೊತೆಗಿದ್ದ ಸಮಯದಲ್ಲಿ ಸಮಾಜಮುಖಿ ಕಾರ್ಯಗಳಿಗೆ ದುಡಿದು, ಉತ್ತಮ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು ಎಂದು ಹೇಳಿ ತಾಲ್ಲೂಕಿಗೆ ಅವರ ಅಗಲುವಿಕೆ ನಿಜಕ್ಕೂ ನಷ್ಟ ಎಂದರು.
ತಾಲ್ಲೂಕು ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಸಿ ಎ. ನಿರೂಪ ರಾವತ್,ಡಾ. ರವಿಕುಮಾರ್. ಸಿ, ಕೋಶಧ್ಯಕ್ಷರಾದ ಎಂ. ಎಸ್. ಯೋಗೀಶ್ ಕುಮಾರ್, ಪರಿಷತ್ತಿನ ಸಂಚಾಲಕರಾದ ಗುರುಮೂರ್ತಿ ಕೊಟಿಗೆಮನೆ, ಹೋಬಳಿ ಘಟಕದ ಅಧ್ಯಕ್ಷ ಗಂಗಾಧರ್ ಮಗ್ಗದಮನೆ, ಕಿರಣ್ ನಿಶಾನಿ. ನವೀನ್ ರಾವತ್ ಇತರರು ಸಂತಾಪ ಸೂಚಿಸಿದರು.