Thursday, 15th May 2025

Digital: ಯಶಸ್ವಿ ಡಿಜಿಟಲ್ ರೂಪಾಂತರಕ್ಕೆ ಅವಕಾಶಗಳು

ಲೇಖಕರು: ಎಸ್‌ ವೆಂಕಟ್ (ಪ್ರಾಕ್ಟಸ್‌ನ ಸಹ-ಸಂಸ್ಥಾಪಕರು) ಮತ್ತು ಸಹ-ಲೇಖಕರು: ಅಮಿತ್ ಕಿಕಾನಿ (ಸಿಎಫ್ಒ – ಅಮೆರಿಕದ ಡೊಹ್ಲರ್ ಗ್ರೂಪ್‌)

ಸಾಗುತ್ತಿರುವ ಈ ಜಗತ್ತಿನಲ್ಲಿ ಡಿಜಿಟಲ್‌ ಸುಧಾರಣೆಗಳು ಒಂದು ಕಡೆಯಾದರೆ ಡಿಜಿಟಲ್‌ ರೂಪಾಂತರ ವಾಗುತ್ತಿರುವುದು ಸೋಜಿಗದ ಸಂಗತಿ. ಒಂದು ರೀತಿಯಲ್ಲಿ ಡಿಜಿಟಲ್‌ ಸುಧಾರಣೆಗಿಂತ ರೂಪಾಂತರ ವಾಗುತ್ತಿರುವುದು ಡಿಜಿಟಲ್‌ ಕ್ಷೇತ್ರದಲ್ಲಾಗುತ್ತಿರುವ ಕ್ರಾಂತಿ. ಈ ರೂಪಾಂತರಗಳು ಕೇವಲ ವ್ಯವಹಾರದ ಪ್ರಕ್ರಿಯೆಯ ಜೊತೆಗೆ ವ್ಯವಹಾರಗಳ ಸಂಪೂರ್ಣ ಮಾದರಿಯನ್ನೇ ಬದಲಾಯಿಸಿಬಿಡುತ್ತದೆ. ಉದಾಹರಣೆಗೆ ಮನೆಬಾಗಿಲಿಗೇ ಬರುವ ದಿನಸಿ ಉತ್ಪನ್ನಗಳು ಮತ್ತು ಥಿಯೇಟರಿಗೆ ಹೋಗಿ ನೋಡದೆಯೆ ಕುಳಿತಲ್ಲಿಯೇ ಚಲನಚಿತ್ರಗಳನ್ನು ವೀಕ್ಷಿಸಬಹುದು.

ಎಐ(ಕೃತಕ ಬುದ್ಧಿಮತ್ತೆ), ಆಟೋಮೇಷನ್‌ ಮತ್ತು ಕ್ಲೌಡ್‌ ಕಂಪ್ಯೂಟಿಂಗ್‌ಗಳ ಮೇಲೆ ಜಾಗತಿಕ ಮಟ್ಟದಲ್ಲಿ ಭಾರೀ ಹೂಡಿಕೆಯಾಗುತ್ತಿರುವುದು ಗಮನೀಯ ಸಂಗತಿ. ಅಂತರಾಷ್ಟ್ರೀಯ ದತ್ತಾಂಸ ಸಂಸ್ಥೆಯ ಪ್ರಕಾರ 2027 ರ ಸಮಯಕ್ಕೆ ಡಿಜಿಟಲ್‌ ರೂಪಾಂತರದ ಮೇಲಿನ ಹೂಡಿಕೆ ನಾಲ್ಕು ಟ್ರಿಲಿಯನ್‌ ಡಾಲರ್‌ ತಲುಪುವ ನಿರೀಕ್ಷೆಯಿದೆ.
ಇಂದಿನ ದಿನಗ:ಳಲ್ಲಿ ಯುವಕರಲ್ಲಿ ತಂತ್ರಜ್ಞಾನದ ಮೇಲಿನ ಹೂಡಿಕೆಯನ್ನು ಹೆಚ್ಚಿಸುವ ಕುರಿತು ಆಸಕ್ತಿ ಹುಟ್ಟುತ್ತಿದೆಯೆನ್ನುವುದು ಗಮನಾರ್ಹ ಸಂಗತಿ. ಆದರೆ ಕೇವಲ 30% ಡಿಜಿಟಲ್‌ ರೂಪಾಂತರಗಳು ಮಾತ್ರ ಸಾಧ್ಯವಾಗುತ್ತಿದೆ ಎಂದು ಮೆಕಿನ್ಸೆ ವರದಿ ಮಾಡಿದೆ.

ಡಿಜಿಟಲ್‌ ರೂಪಾಂತರಗಳು ಯಾವಾಗ ಸಾಧ್ಯ?

  1. ಎಲ್ಲಾ ಮಾರ್ಗಗಳನ್ನೂ ಬಳಸಿಕೊಂಡಾಗ: ಟೌನ್‌ಹಾಲ್‌ಸಭೆಗಳು, ನ್ಯೂಸ್‌ಲೆಟರ್‌ಗಳು, ಮುಖಾಮುಖಿ ಸಭೆಗಳು, ತರಬೇತಿ ಕಾರ್ಯಕ್ರಮಗಳು ಮತ್ತು ರೋಡ್ ಶೋಗಳನ್ನು ಸರಿಯಾಗಿ ಬಳಸಿಕೊಂಡಾಗ ಮಾತ್ರವೇ ಉತ್ತಮ ಪ್ರತಿಫಲ ಬರುವುದಕ್ಕೆ ಸಾಧ್ಯ.
  2. ಬಳಕೆದಾರ-ಕೇಂದ್ರಿತ ವಿನ್ಯಾಸ: ಜನರ ಬಳಕೆಗೆ ಸುಲಭವಾಗಬೇಕೆನ್ನುವ ಉದ್ದೇಶದಿಂದಲೇ ವಿನ್ಯಾಸ ಮಾಡುವ ಕಾರಣ ಜನರಿಗೆ ಸುಲಭವಾಗಿರುವಂತೆ ವಿನ್ಯಾಸಗೊಳಿಸಬೇಕು. ತಂತ್ರಜ್ಞಾನವು ಮಾನವ ಅಗತ್ಯಗಳನ್ನು ಪೂರೈಸಬೇಕು. ಇದು ಆಳವಾದ ಸಂಶೋಧನೆ ಮತ್ತು ತೊಡಗಿಸಿಕೊಳ್ಳುವಿಕೆಯಿಂದ ಮಾತ್ರ ಸಾಧ್ಯ. 100ಕ್ಕೂ ಹೆಚ್ಚು ಕೆಲಸದ ಸ್ಥಳಗಳಲ್ಲಿ ವಿವಿಧ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿರುವ ʻಇಪಿಸಿʼ ಕಂಪನಿಯೊಂದು ತನ್ನ ಆನ್-ಸೈಟ್ ಕಾರ್ಯಾಚರಣೆ ತಂಡಗಳಿಂದ ನಿಯಮಿತ ಮಾಹಿತಿಯನ್ನು ಪಡೆಯುವುದು ಕಳಪೆ ಇಂಟರ್ನೆಟ್ ಸಂಪರ್ಕದ ವಾತಾವರಣದಲ್ಲಿ ಸವಾಲಿನ ಸಂಗತಿಯಾಗಿತ್ತು.
  3. ಕೌಶಲ್ಯಗಳ ಅಂತರವನ್ನು ಕಡಿಮೆ ಮಾಡುವುದು: ನಿಮ್ಮ ಕಾರ್ಯಪಡೆಯನ್ನು ಯಶಸ್ಸಿಗೆ ಸಜ್ಜುಗೊಳಿಸು ವುದು ವಿಶ್ವ ಆರ್ಥಿಕ ವೇದಿಕೆಯ 2021ರ ವರದಿಯ ಪ್ರಕಾರ, 2025ರ ವೇಳೆಗೆ ಎಲ್ಲಾ ಉದ್ಯೋಗಿಗಳಲ್ಲಿ ಶೇ. 50ರಷ್ಟು ಮರು ಕೌಶಲ್ಯದ ಅಗತ್ಯವಿದೆ ಎಂದು ಹೇಳಿದೆ. ಊದಾಹರಣೆಗೆ, ʻಟಾಟಾ ಮೋಟಾರ್ಸ್ʼ 2020ರಲ್ಲಿ ಕೇವಲ ಶೇ.4.8ರಷ್ಟಿದ್ದ ತನ್ನ ಮಾರುಕಟ್ಟೆ ಪಾಲನ್ನು 2024ರಲ್ಲಿ ಶೇ.14ಕ್ಕೆ ಸುಧಾರಿಸಲು ಸಾಧ್ಯವಾಯಿತೆಂದರೆ, ಅದಕ್ಕೆ ಸಂಸ್ಥೆಯು ಎಲ್ಲಾ ಕಾರ್ಯಾಚರಣೆಗಳಲ್ಲೂ ತನ್ನ ಉದ್ಯೋಗಿಗಳಿಗೆ ಸತತವಾಗಿ ಕೌಶಲ್ಯ ಸುಧಾರಣೆ ಮಾಡಿದ್ದೇ ಮುಖ್ಯ ಕಾರಣ ಮತ್ತು ಸರಿಯಾದ ರೀತಿಯಲ್ಲಿ ಡಿಜಿಟಲೀಕರಣದ ಉಪಯೋಗವನ್ನು ಪಡೆದು ಕೊಂಡಿದೆ.
  4. ಬದಲಾವಣೆಗೆ ವೇಗ ನೀಡುವುದು: ಒಂದೇ ಬಾರಿ ಪ್ರಯತ್ನ ಮಾಡುವುದರಿಂದ ಗೆಲುವನ್ನು ಸಾಧಿಸುವುದು ಕಷ್ಟವಾಗಬಹುದು. ಸಾಧ್ಯವಾದಷ್ಟು ಬೇಗ ಮಾಡುವುದಕ್ಕಿಂತ ಬದಲಾವಣೆಗೆ ವೇಗ ನೀಡುವುದು ಉತ್ತಮ.

Leave a Reply

Your email address will not be published. Required fields are marked *