ಕಲ್ಲುಕೋಟೆ ಬಡಾವಣೆಯ ಭುವನೇಶ್ವರಿ ಜ್ಞಾನವಿಕಾಸ ಕೇಂದ್ರದಲ್ಲಿ ಅರೋಗ್ಯ ತಪಾಸಣಾ ಶಿಬಿರ
ಶಿರಾ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಕರ್ನಾಟಕ ರಾಜ್ಯಾದ್ಯಂತ ಸಮಾಜದ ಎಲ್ಲ ಕ್ಷೇತ್ರಗಳ ಹಾಗೂ ಎಲ್ಲಾ ವರ್ಗಗಳ ಜನರ ಅಭಿವೃದ್ದಿ, ಗ್ರಾಮ ಕಲ್ಯಾಣ, ಮಹಿಳಾ ಸಬಲೀಕರಣ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ ಎಂದು ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರಾದ ಡಾ. ನರೇಂದ್ರ ಬಾಬು ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ ತುಮಕೂರು-೨ ಜಿಲ್ಲೆಯ ಸಪ್ತಗಿರಿ ವಲಯದ ಜ್ಯೋತಿನಗರ ಕಾರ್ಯಕ್ಷೇತ್ರದ ಕಲ್ಲುಕೋಟೆ ಗ್ರಾಮದಲ್ಲಿ ಭುವನೇಶ್ವರಿ ಜ್ಞಾನವಿಕಾಸ ಕೇಂದ್ರದಲ್ಲಿ ಅರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಧರ್ಮಸ್ಥಳ ಸಂಸ್ಥೆಯಿಂದ ಆರ್ಥಿಕ ಸಬಲೀ ಕರಣ, ಶೈಕ್ಷಣಿಕ ಅಭಿವೃದ್ದಿ, ಆರೋಗ್ಯ ಕಾರ್ಯಗಳು, ಕೃಷಿ, ಅರೋಗ್ಯ ತಪಾಸಣಾ ಶಿಬಿರ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸದಾಶಿವ ಗೌಡ ಮಾತನಾಡಿ ಆರೋಗ್ಯವೇ ಭಾಗ್ಯ ನಿಮ್ಮೆಲ್ಲರ ಆರೋಗ್ಯ ನಮ್ಮ ಕಾಳಜಿಯಾಗಿದ್ದು, ಧರ್ಮಸ್ಥಳ ಸಂಸ್ಥೆಯಿAದ ಸಾಮಾಜಿಕ ಅಭಿವೃದ್ದಿ ಕಾರ್ಯಕ್ರಮಗಳು, ದೇವಾಲಯಗಳ ಅಭಿವೃದ್ದಿ, ಸಮುದಾಯ ಭವನಗಳ ಅಭಿವೃದ್ದಿ, ಹಾಲಿನ ಡೈರಿಗಳ ಕಟ್ಟಡ ರಚನೆಗೆ ಅನುದಾನ, ಗ್ರಾಮೀಣ ಮಹಿಳೆಯರ ಆರ್ಥಿಕ ಸಬಲೀಕರಣ, ಲಾಭಾಂಶ ವಿತರಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಪಿ ಶುಗರ್, ರಕ್ತ ಪರೀಕ್ಷೆ, ಜನರಲ್ ಟೆಸ್ಟ್ ಪರೀಕ್ಷೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷೆಯನ್ನು ದೊಡ್ಡ ಲಕ್ಕಮ್ಮ ವಹಿಸಿದ್ದು. ರಂಗಭೂಮಿ ಕಲಾವಿದ ಬಸವರಾಜ್, ವಲಯ ಮೇಲ್ವಿಚಾರಕರಾದ ಮೀನಾ, ಸಮನ್ವಯಾಧಿಕಾರಿ ಮಮತಾ, ಸೇವಾಪ್ರತಿನಿಧಿ ಜಯಮ್ಮ, ಸಂಗೀತ, ನಳಿನ, ಈಶ್ವರ ಲಿಂಗ ಸೇರಿದಂತೆ ಆಶಾ ಕಾರ್ಯಕರ್ತರು ಸ್ವ ಸಹಾಯ ಸಂಘಗಳ ಸದಸ್ಯರು ಹಾಜರಿದ್ದರು.