Sunday, 11th May 2025

ದರ್ಶನ್​ಗೆ ನಿರಾಸೆ, ಮನೆಯೂಟಕ್ಕೆ ಅನುಮತಿ ನೀಡದ ಕೋರ್ಟ್…!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ 2 ತಿಂಗಳೇ ಕಳೆದು ಹೋಗಿದೆ. ಜೈಲೂಟ ತಿನ್ನಲು ಆಗ್ತಿಲ್ಲ ಮನೆಯೂ ಟಕ್ಕೆ ಅವಕಾಶ ನೀಡಬೇಕು ಎಂದು ದರ್ಶನ್ ಅರ್ಜಿ ಸಲ್ಲಿಸಿದ್ದಾರೆ.

ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ಸದ್ಯಕ್ಕೆ ನಟ ದರ್ಶನ್​ಗೆ ಜೈಲೂಟ ನೀಡಲು ಸಾಧ್ಯವಿಲ್ಲ ಎಂದು ಸೆಪ್ಟೆಂಬರ್ 5ಕ್ಕೆ ಪ್ರಕರಣ ಮುಂದೂಡಿದೆ. ಜೈಲಾಧಿಕಾರಿಗಳು ಮನೆ ಊಟದ ಅರ್ಜಿ ತಿರಸ್ಕರಿಸಿರುವುದರಿಂದ ದರ್ಶನ್ ಪರ ವಕೀಲರು ಕಾಲಾವಕಾಶ ಕೇಳಿದ್ದಾರೆ.

ಮನೆ ಊಟ ಬೇಕೆಂದು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ಮಂಗಳವಾರ ಹೈಕೋರ್ಟ್​ನಲ್ಲಿ ನಡೆಯಿತು. ಇಂದು ಕೂಡ ದರ್ಶನ್​ಗೆ ನಿರಾಸೆ ಆಗಿದ್ದು, ಮನೆಯೂಟ ನೀಡಲು ಕೋರ್ಟ್ ಅನುಮತಿ ನೀಡಲ್ಲ.

ಮನೆ ಊಟ, ಮಲಗಲು ಹಾಸಿಗೆ ಹಾಗೂ ಕೆಲವು ಪುಸ್ತಕಗಳು ಬೇಕೆಂದು ನಟ ದರ್ಶನ್ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ರಿಟ್ ಅರ್ಜಿಯಲ್ಲಿ ಜೈಲೂಟದಿಂದ ಆರೋಗ್ಯ ಸಮಸ್ಯೆ ಉಂಟಾಗಿದೆ ಎಂದಿದ್ರು. ಇದಕ್ಕೆ ಸಂಬಂಧಿಸಿದ ರಿಟ್ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್​ ಏಕಸದಸ್ಯ ಪೀಠ ನಡೆಸಿತು.

ಕಾರಾಗೃಹ ಇಲಾಖೆ ಡಿಜಿ ಮಾಲಿನಿ ಕೃಷ್ಣಮೂರ್ತಿ ಅವರು ಜೈಲಾಧಿಕಾರಿಗಳು ಕೊಟ್ಟಿರೋ ವರದಿಯನ್ನು ಪರಿಗಣಿಸಿ ದರ್ಶನ್ ಅವರಿಗೆ ಮನೆ ಊಟ ನಿರಾಕರಿಸಿದ್ದಾರೆ.

Leave a Reply

Your email address will not be published. Required fields are marked *