Sunday, 11th May 2025

Dalit Woman harassed: ಕುರಿಗಳ ಶೆಡ್ ಅತಿಕ್ರಮಣ ಮಾಡಿ ದಲಿತ ಮಹಿಳೆಗೆ ತೊಂದರೆ

ಸ್ಪಂದಿಸದ ಗ್ರಾಮ ಪಂಚಾಯಿತಿ ಅಧಿಕಾರಿಗಳು

ನ್ಯಾಯಕ್ಕಾಗಿ ಮಾಧ್ಯಮದ ಮೊರೆ ಹೋದ ಮಹಿಳೆ

ಚಿಂತಾಮಣಿ: ತಾಯಿಯಿಂದ ಮಗಳಿಗೆ ಬಂದು ಗ್ರಾಮ ಠಾಣೆಗೆ ಸೇರಿರುವ ನಿವೇಶನದಲ್ಲಿ ಕುರಿಗಳ ಶೆಡ್ ಮಾಡಿ ಕೊಂಡು ಜೀವನ ಸಾಗಿಸುತ್ತಿದ್ದ ಮಹಿಳೆಗೆ ಸ್ಥಳೀಯ ಕೆಲ ವ್ಯಕ್ತಿಗಳು ಹಾಗೂ ಗ್ರಾಮ ಪಂಚಾಯತಿ ಅಧಿಕಾರಿ ಗಳು ತೊಂದರೆ ನೀಡುತ್ತಿರುವ ಕಾರಣಕ್ಕೆ ಆಕೆ ಮಾಧ್ಯಮಗಳ ಮೊರೆ ಹೋಗಿರುವ ಘಟನೆ ಚಿಂತಾಮಣಿ ತಾಲ್ಲೂಕಿನ ಕೋಟಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ನರಸಾಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Chickballapur News: ಬಾಗೇಪಲ್ಲಿ ಶಾಲಾ ಮಕ್ಕಳಿಗೆ ಪರಿಸರ ಪ್ರಜ್ಞೆ ಮೂಡಿಸುತ್ತಿರುವ ಶಾಲೆ

ತಾಲೂಕಿನ ಕೋಟಗಲ್ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ನರಸಾಪುರ ಗ್ರಾಮದ ಗ್ರಾಮ ಠಾಣೆಗೆ ಸೇರಿದ ಕದಿರಮ್ಮ ಕೋಂ ಗಂಗಪ್ಪ ಇವರ ಹೆಸರಿಗೆ ಸೇರಿದ ಪರಿಮಿಟ್ ನಂಬರ್ ಡಿ ಆರ್ ಎಸ್ ೧೪೪.೪೯ ರ ೧೯೪೯ ರಂದು ಮಂಜೂರು ಆಗಿರುವ ಮನೆ ೩೩+೪೪ ಗಜ ಇರುವ ಮನೆಯನ್ನು ತಾಯಿ ಕದರಮ್ಮ ಮರಣ ಹೊಂದಿದ ಕಾರಣ ದಿಂದ ಮಗಳಾದ ನರಸಮ್ಮ ಕೋಂ ವೆಂಕಟರಾಯಪ್ಪ ಗ್ರಾಮ ಪಂಚಾಯಿತಿಗೆ ಪಾವತಿ ವಾರಸು ಖಾತೆ ಮಾಡಿಕೊಡ ಬೇಕೆಂದು ಅರ್ಜಿ ಸಲ್ಲಿಸಿದರು ಅಧಿಕಾರಿಗಳು ಪ್ರಭಾವಿ ವ್ಯಕ್ತಿಗಳಿಗೆ ಮಣಿದು ನನಗೆ ಅಲೆದಾಡಿಸುತ್ತಿರುವುದಲ್ಲದೆ ಕುರಿಗಳ ಶೆಡ್ ಅತಿಕ್ರಮಣ ಮಾಡಿಕೊಳ್ಳಲು ಮುಂದಾಗುತ್ತಿರುವ ಬಗ್ಗೆ ಹಲವು ಬಾರಿ ಅಧಿಕಾರಿಗಳಿಗೆ,ಪೊಲೀಸ್ ಠಾಣೆಗೆ ದೂರು ನೀಡಿ ಸಾಕಾಗಿದ್ದೀನಿ ಆದರೆ ನನಗೆ ನ್ಯಾಯ ಸಿಗುತ್ತಿಲ್ಲ ಎಂದು ಸದರಿ ಗ್ರಾಮದ ನರಸಮ್ಮ ಮಾಧ್ಯಮ ದವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡಿದ್ದಾಳೆ.  

ರಾತೋರಾತ್ರಿ ಕೆಲ ವ್ಯಕ್ತಿಗಳು ಕುರಿಗಳ ಶೆಡ್ ನ ಗೋಡೆಗಳು ತಳ್ಳು ಹಾಕುವುದಲ್ಲದೆ ನನಗೆ ಊರು ಬಿಟ್ಟು ಹೋಗು ಎಂದು ಬೆದರಿಕೆ ಹಾಕುತ್ತಾರೆ. ಪಂಚಾಯತಿಯಲ್ಲಿ ನನಗೆ ಬರುವ ಸೈಟಿನ ಖಾತೆ ಮಾಡಿಕೊಡಿ ಎಂದು ಅರ್ಜಿ ಸಲ್ಲಿಸಿದರು ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ.

ಈಗಲಾದರೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನಿವೇಶನ ಅಳತೆ ಮಾಡಿ ಖಾತೆ ಮಾಡಿ ಕೊಡಬೇಕು ಇಲ್ಲವಾದ ಪಕ್ಷದಲ್ಲಿ ತಾಲೂಕು ಪಂಚಾಯಿತಿ ಮುಂಭಾಗ ಧರಣಿ ನಡೆಸುತ್ತೇನೆ ಎಂದು ನರಸಮ್ಮ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *