Sunday, 11th May 2025

Cyber Academy: ಟೆಕ್ ಆವಂತ್-ಗಾರ್ಡೆಯಿಂದ ಸೈಬರ್ ಅಕಾಡೆಮಿ ಪ್ರಾರಂಭ, ಶಿಕ್ಷಣದಲ್ಲಿ ಕ್ರಾಂತಿ

ಬೆಂಗಳೂರು: ಟೆಕ್ ಆವಂತ್-ಗಾರ್ಡೆ ಹೆಮ್ಮೆಯಿಂದ ನವೆಂಬರ್ 14, 2024ರಂದು ಮಕ್ಕಳ ದಿನದಂದು ತನ್ನ ಮಹತ್ತರ ಡಿಜಿಟಲ್ ಪರಿವರ್ತನೆಯ ಉಪಕ್ರಮ ಸೈಬರ್ ಅಕಾಡೆಮಿ ಪ್ರಾರಂಭಿಸಿದೆ. ಈ ಮುಂಚೂಣಿಯ ಶೈಕ್ಷಣಿಕ ಸಂಸ್ಥೆಯು ವಿದ್ಯಾರ್ಥಿಗಳಿಗೆ ವೈಯಕ್ತಿಕಗೊಳಿಸಿದ 5 ಸಿಗಳ (ಕಮ್ಯುನಿಕೇಷನ್, ಕೊಲಾಬರೇಷನ್, ಕ್ರಿಯೇಟಿವಿಟಿ, ಕ್ರಿಟಿಕಲ್ ಥಿಂಕಿಂಗ್, ಕಂಪ್ಯೂಟೇಷನಲ್ ಥಿಂಕಿಂಗ್) ಮೂಲಕ ಹೊಂದಿಕೊಳ್ಳುವ ಕಲಿಕೆಯ ಮೂಲಕ ಡಿಜಿಟಲ್ ಯುಗಕ್ಕೆ ಸನ್ನದ್ಧಗೊಳಿಸುತ್ತದೆ.

ಡಿಜಿಟಲಿ ಪರಿಣಿತ ಕಾರ್ಯಪಡೆಯ ಅಗತ್ಯದಿಂದ ಸ್ಫೂರ್ತಿ ಪಡೆದ ಸೈಬರ್ ಅಕಾಡೆಮಿ ಕಲಿಕೆಯ ಅಂತರಗಳನ್ನು ತುಂಬುತ್ತದೆ ಮತ್ತು ಸಮಗ್ರ ಶಿಕ್ಷಣವನ್ನು ಉತ್ತೇಜಿಸುತ್ತದೆ. ಈ ಸಂಸ್ಥೆಯು ಮೆಟಾವರ್ಸ್ ಇಂಟಿಗ್ರೇಷನ್ ನಂತಹ ಅತ್ಯಾಧುನಿಕ ವಿಶೇಷತೆಗಳನ್ನು ಹೊಂದಿದ್ದು ವಿದ್ಯಾರ್ಥಿ ಗಳಿಗೆ ಮಿಕ್ಸ್ಡ್ ರಿಯಾಲಿಟಿ ಮತ್ತು ಹಾಲೋಲೆನ್ಸ್ ಮೂಲಕ ಸಂವಹನೀಯ 3ಡಿ ಕಲಿಕಾ ಅನುಭಗಳನ್ನು ನೀಡುತ್ತದೆ. ಎಐ-ಸನ್ನದ್ಧ ಸಾಧನಗಳು ಜ್ಞಾನವನ್ನು ಹೆಚ್ಚಿಸುತ್ತವೆ, ಕಲಿಕಾ ಪ್ಲಾಟ್ ಫಾರಂಗಳು ಮತ್ತು ಶಿಕ್ಷಕರ ಪಾಠಯೋಜನೆಗೆ ನೆರವಾಗುತ್ತವೆ.

ಮಕ್ಕಳ ದಿನಾಚರಣೆಯ ಸೈಬರ್ ಅಕಾಡೆಮಿಯ ಉದ್ಘಾಟನೆಯು ಮಕ್ಕಳನ್ನು ಶಿಕ್ಷಣದ ಮೂಲಕ ಸಬಲೀಕರಿಸುವ ತನ್ನ ಬದ್ಧತೆಯನ್ನು ಮರು ದೃಢೀಕರಿಸುತ್ತದೆ. ಮೇಜರ್ ಜನರಲ್ ವಿ.ಟಿ. ಮ್ಯಾಥ್ಯೂ, ಕೆ.ವಿ. ವಿನ್ಸೆಂಟ್, ರವಿ ಗೋವಿಂದನ್, ಸ್ವೆಟ್ಲಾನಾ ರೋವಾ, ಅಲಿ ಸೇಟ್ ಮತ್ತು ರೋಶಿನಿ ಕುಮಾರ್ ಅವರು ಒಳನೋಟಗಳನ್ನು ಹಂಚಿಕೊಂಡರು. ಸೈಬರ್ ಲರ್ನಿಂಗ್ ಸ್ಪೇಸಸ್, ಪ್ರೊಫಯಲಕ್ಸಿಸ್ ಹೆಲ್ತ್ ಕಿಯೋಸ್ಕ್ ಮತ್ತು ಜೆಮ್ ಎಐ-ಮೆಂಟರ್ ಏಡ್ ಪ್ರಮುಖ ಉಪಕ್ರಮಗಳಾಗಿವೆ.

ಭವಿಷ್ಯದ ಯೋಜನೆಗಳಲ್ಲಿ ಡಿಜಿಟಲ್ ಸಾಕ್ಷರತೆಯ ಕಾರ್ಯಾಗಾರಗಳು, ವೆಬಿನಾರ್ ಗಳು, ಸಿಬಿಎಸ್ಇ, ಸಿ.ಐ.ಎಸ್.ಸಿ.ಇ., ಎನ್.ಸಿ.ಇ.ಆರ್.ಟಿ., ಎ.ಐ.ಸಿ.ಟಿ.ಇ, ಯೂನಿಸೆಫ್, ಮೈಕ್ರೊಸಾಫ್ಟ್ ಮತ್ತು ಫಿಶರ್ ಮೆಡಿಕಲ್ ನಂತಹ ಜಾಗತಿಕ ಸಹಯೋಗದ ಯೋಜನೆಗಳು ಮತ್ತು ಪಾಲುದಾರಿಕೆಗಳನ್ನು ಹೊಂದಿದೆ.
ಟೆಕ್ ಅವಂತ್-ಗಾರ್ಡೆಯ ಸಿಇಒ ಅಲಿ ಸೇಟ್ ಅವರಿಗೆ ಎಜು-ವಿಷನರ್ ಪುರಸ್ಕಾರ ನೀಡಲಾಗಿದ್ದು ಶಿಕ್ಷಣವನ್ನು ಪ್ರಾಜೆಕ್ಟ್ ಕಾರ್ಟೆ ಬ್ಲಾಂಚೆ ಮೂಲಕ ಕ್ರಾಂತಿಕಾರಕಗೊಳಿಸಿದ್ದಾರೆ. ಈ ಉಪಕ್ರಮವು ಭಾರತದಾದ್ಯಂತ 800+ ನೋಂದಾಯಿತ ಶಾಲೆಗಳನ್ನು ಸಬಲೀಕರಿಸುತ್ತಿದ್ದು ಕಾರ್ಪೊರೇಟ್ ಸಿ.ಎಸ್.ಆರ್. ಫಂಡ್ ಗಳೊಂದಿಗೆ “ಸೋಷಿಯಲ್ ಸ್ಕೂಲಿಂಗ್” ಉತ್ತೇಜಿಸುತ್ತಿದ್ದಾರೆ.